ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ; ಖಳನಟ ಧರ್ಮ ವಿರುದ್ಧ ಮಹಿಳೆ ದೂರು
![ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ; ಖಳನಟ ಧರ್ಮ ವಿರುದ್ಧ ಮಹಿಳೆ ದೂರು ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ; ಖಳನಟ ಧರ್ಮ ವಿರುದ್ಧ ಮಹಿಳೆ ದೂರು](https://kannada.cdn.zeenews.com/kannada/sites/default/files/styles/zm_500x286/public/2018/07/31/169559-dharma-youtube.jpg?itok=XCWS9yAV)
ಎರಡು ತಿಂಗಳ ಹಿಂದೆ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿರುವ ಮಹಿಳೆ.
ಬೆಂಗಳೂರು: ಸಿನಿಮಾ ಶೂಟಿಂಗ್ ಇದೇ ಎಂದು ಕರೆಸಿ ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ, ಬಳಿಕ ಆ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಯಾಂಡಲ್ ವುಡ್ ಖಳನಟ ಧರ್ಮ ಮೂರು ತಿಂಗಳ ಹಿಂದೆ ಕಾರು ಚಾಲಕ ನವೀನ್ ಮೂಲಕ ಶೂಟಿಂಗ್ ಇದೆ ಎಂದು ಆರ್.ಆರ್.ನಗರಕ್ಕೆ ಮಹಿಳೆಯೊಬ್ಬಳನ್ನು ಕರೆಸಿಕೊಂಡಿದ್ದಾರೆ. ಬಳಿಕ ಶೂಟಿಂಗ್ ಇಲ್ಲ ಎಂದು ಊಟಕ್ಕೆಂದು ಹೋಟೆಲ್ ಗೆ ಕರೆದೊಯ್ದಿದ್ದರು. ಈ ವೇಳೆ ಊಟದಲ್ಲಿ ಅಮಲು ಬರುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ವಿಡಿಯೋವನ್ನು ಮನೆಯವರಿಗೆ ತೋರಿಸುವುದಾಗಿ ಬೆದರಿಕೆ ಹಾಕಿ, 16 ಲಕ್ಷ ಹಣ ಕಬಳಿಸಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ನೀಡಿ ಎರಡು ತಿಂಗಳಾಗಿದ್ದರೂ ಇದುವರೆಗೂ ಧರ್ಮ ಹಾಗೂ ಚಾಲಕನನ್ನು ಬಂಧಿಸಲು ಪೊಲೀಸರು ಮುಂದಾಗಿಲ್ಲ. ಎರಡು ತಿಂಗಳಿಂದಲೂ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ನಟ ಧರ್ಮ ವಿರುದ್ಧ ಐಪಿಸಿ ಸೆಕ್ಷನ್ 506 ಮತ್ತು 384 ರ ಅಡಿ ಕೇಸು ದಾಖಲಾಗಿದೆ.