Complaint Against Darshan : ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದರೆ ಹೋಯ್ತು ಅಂತಾ ಒಂದ್ ಗಾದೆ ಇದೆ.. ಏಕೆಂದರೆ ಕೆಲವೊಮ್ಮೆ ಮಾತಿನ ಎಫೆಕ್ಟ್ ಸಾಕಷ್ಟು ತಿರುವು ಪಡೆದುಕೊಳ್ಳುತ್ತೆ. ಸಧ್ಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಷ್ಯಯದಲ್ಲೂ ಹಾಗೇ ಆಗಿದ್ದು, ಒಂದು ಮಾತಿನ ಎಫೆಕ್ಟ್ ಈಗ ಅವರ ವಿರುದ್ಧ ಠಾಣೆಗಳಲ್ಲಿ ಸಾಲು ಸಾಲು ದೂರು ದಾಖಲಾಗುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಹೌದು.. ಇತ್ತೀಚೆಗೆ ನಟ ದರ್ಶನ್ ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆಯೊಂದು ಸಾಕಷ್ಟು ವಿವಾದ ಕ್ರಿಯೇಟ್ ಮಾಡಿದೆ. ಈ ವಿಚಾರದ ಕುರಿತು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ಇದರ ನೆಕ್ಸ್ಟ್ ಸ್ಟೇಜ್ ಅನ್ನೋ ಹಾಗೆ ಈಗ ಪೊಲೀಸ್ ಸ್ಟೇಷನ್‌ಗಳಲ್ಲಿ ದಾಸನ ವಿರುದ್ಧ ಕೇಸ್‌ಗಳ ಮೇಲೆ ಕೇಸ್ ದಾಖಲಾಗ್ತಿವೆ.


ಇದನ್ನೂ ಓದಿ:ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್‌ ಶೋಗೆ ಸಮಂತಾ ವಿಶೇಷ ಅತಿಥಿ, ನ್ಯಾಚುರಲ್‌ ಬ್ಯೂಟಿ ಹಳೆಯ ವಿಡಿಯೋ ವೈರಲ್!


ಇಂದು ಬೆಂಗಳೂರಿನ ಎರಡು ಠಾಣೆಯಲ್ಲಿ ದಚ್ಚು ವಿರುದ್ದ ಕೇಸ್ ದಾಖಲಾಗಿದ್ದು ಮಹಿಳೆಯರ ದಂಡು ಠಾಣೆ ಮೆಟ್ಟಿಲೇರ್ತಿದೆ. ಹೌದು.. ಇದಕ್ಕೆ ಕಾರಣ ಡಿಬಾಸ್‌ ಶ್ರೀರಂಗಪಟ್ಟಣದಲ್ಲಿ 17ನೇ ತಾರೀಖು ನೀಡಿದ್ದ ಹೇಳಿಕೆ. ಅಂದು ಯಜಮಾನ, ಸಾವಿರಾರು ಅಭಿಮಾನಿಗಳು.. ಸಂಸದೆ ಸುಮಲತಾ, ಕೆಲ ಮಠದ ಶ್ರೀಗಳ ಮುಂದೆಯೇ ಮಹಿಳೆಯರ ಬಗ್ಗೆ ಹೇಳಿಕೆಯೊಂದನ್ನ ನೀಡಿದ್ರು.. ಈ ವಿಚಾರ ಈಗ ಭಾರೀ ವಿವಾದ ಸೃಷ್ಟಿ ಮಾಡಿದ್ದು ಈ ಬಗ್ಗೆ ಮಹಿಳಾ ಸಂಘಗಳು ಠಾಣೆಗಳಿಗೆ ದೂರು ನೀಡ್ತಿವೆ.


ನಿನ್ನೆ ಮಹಿಳಾ ಆಯೋಗಕ್ಕೆ ಗೌಡ್ತಿ ಸಂಘದಿಂದ ದೂರು ನೀಡಲಾಗಿತ್ತು. ಇವತ್ತು ಪುಟ್ಟೇನಹಳ್ಳಿ ಠಾಣೆಗೆ ಐವತ್ತಕ್ಕೂ ಹೆಚ್ಚು ಮಹಿಳೆಯರು ದರ್ಶನ್ ವಿರುದ್ದ ದೂರು ನೀಡಿದ್ರು. ಮಹಿಳೆಯರ ಬಗ್ಗೆ ಮಾತನಾಡಿ ಹೆಣ್ಣುಮಕ್ಕಳ ಭಾವನೆಗೆ ದರ್ಶನ್ ದಕ್ಕೆಯುಂಟು ಮಾಡಿದ್ದಾರೆ. ಅಲ್ಲದೇ ಬೆದರಿಕೆ ಹಾಕ್ತಾರೆ ಅವ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.. 


ಇದನ್ನೂ ಓದಿ:ಹುಟ್ಟುಹಬ್ಬದಂದು ವಯಸ್ಸಿನ ಬಗ್ಗೆ ಗೂಗಲ್‌ಗೆ ಏನಂದ್ರೂ ರಿವೀಲ್‌ ಮಾಡಿದ ನಾಗಿಣಿ!


ಇನ್ನು ಇದಲ್ಲದೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಗ್ಗೆಯೂ ದರ್ಶನ್ ಮಾತನಾಡಿದ್ದ ಮಾತು ವಿವಾದ ಕ್ರಿಯೇಟ್ ಮಾಡಿದೆ.. ತಗಡೆ ಅಂತಾ ಕರ್ದಿರೋದು ವಿವಾದ ಸೃಷ್ಟಿ ಮಾಡಿದ್ದು ಗೌಡ ಸಮುದಾಯದವ್ರು ಠಾಣೆಗಳಿಗೆ ದೂರು ನೀಡ್ತಿದ್ದಾರೆ.. ಮಹಿಳೆಯರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡೋದಲ್ದೆ, ಒಂದು ಸಮುದಾಯದ ನಾಯಕ, ನಿರ್ಮಾಪಕನ ಬಗ್ಗೆ  ದರ್ಶನ್ ತಪ್ಪಾಗಿ ಪದ ಬಳಕೆ ಮಾಡಿ ಅವ್ರ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಅಂತಾ ರಾಜ ರಾಜೇಶ್ವರಿ ನಗರ ಠಾಣೆಗೆ ದೂರು ನೀಡಲಾಗಿದೆ..ಗಣೇಶ್ ಗೌಡ ಹಾಗೂ ಜಗದೀಶ್ ಎಂಬುರು ದೂರು ನಿಡಿದ್ದಾರೆ..


ಸದ್ಯ ಸಾಲು ಸಾಲು ದೂರುಗಳು ದರ್ಶನ್ ವಿರುದ್ದ ದಾಖಲಾಗ್ತಿವೆ.. ಶ್ರೀರಂಗಪಟ್ಟಣದಲ್ಲಿ ಹೇಳಿಕೆ ನೀಡಿದ್ರು, ಬೆಂಗಳೂರಿನ ಹಲವೆಡೆ ದರ್ಶನ್ ವಿರುದ್ದ ಕೇಸ್ ದಾಖಲಾಗ್ತಿವೆ. ಸದ್ಯ ದೂರುಗಳ ಅನ್ವಯ ಪೊಲೀಸರು ಎನ್ ಸಿ ಆರ್  ದಾಖಲಿಸಿಕೊಂಡಿದ್ದಾರೆ. ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿರೋದ್ರಿಂದ ಬೆಂಗಳೂರಿನ ಎಲ್ಲಾ ಕೇಸ್ ಗಳು ಅಲ್ಲಿಗೆ ವರ್ಗಾವಣೆ ಆಗೋ ಸಾಧ್ಯತೆ ಇದೆ. ನಂತರ ದರ್ಶನ್ ವಿರುದ್ದ ಶ್ರೀರಂಗಪಟ್ಟಣ ಪೊಲೀಸರು ದರ್ಶನ್ ಗೆ ನೊಟೀಸ್ ಕೊಟ್ಟು ಠಾಣೆಗೆ ಕರೆಯೋ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.