ನವದೆಹಲಿ: ಸಿನಿಮಾ ರಂಗಕ್ಕೆ 'ಉಲ್ಲಾಸ ಉತ್ಸಾಹ' ಎಂದು ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಹಿಮಾಚಲದ ಮಂಜಿನ ಬೆಡಗಿ ಯಾಮಿ ಗೌತಮಿ, ಮುಂದೆ ಬಾಲಿವುಡ್ ನಲ್ಲಿ ಆಯುಷ್ಮಾನ್ ಕುರಾನಾ ಜೊತೆ 'ವಿಕಿ ಡೋನರ್' ಚಿತ್ರದ ಮೂಲಕ ಬಾಲಿವುಡ್ ನ ಅಂಗಳಕ್ಕೆ ಕಾಲಿಟ್ಟಳು. ಈಗ ಹೃತಿಕ್ ರೋಶನ್ ಹಾಗೂ ಶಾಹಿದ ಕಪೂರ ರಂತಹ ಘಟಾನುಘಟಿಗಳ ಜೊತೆ ಅಭಿನಯಿಸುವುದರ ಮೂಲಕ ತನ್ನ ಛಾಪನ್ನು ಮೂಡಿಸಿದ್ದಾಳೆ.





COMMERCIAL BREAK
SCROLL TO CONTINUE READING

ಈಗ ಹೊಸ ವರ್ಷದ ಸಂಭ್ರಮದಲ್ಲಿ  ಮ್ಯಾಕ್ಸಿಮ್ ಇಂಡಿಯಾ ದ 2018 ರ ಜನೆವರಿಯ ಸಂಚಿಕೆಯ ಮುಖ ಪುಟದಲ್ಲಿ ತನ್ನ ಸಕತ್ ಹಾಟ್ ಆಗಿರುವ ವಿವಿಧ ಭಂಗಿಗಳ ಮೂಲಕ ಪೋಸ್ ನೀಡಿದ್ದಾಳೆ.


ಇದನ್ನು ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಯಾಮಿ ಗೌತಮಿ "ಅವಳು ತನ್ನ ನಿದ್ರೆಗಿಂತ ಹೆಚ್ಚಾಗಿ ಕನಸನ್ನು ಕಾಣುತ್ತಾಳೆ" ಹಾಗೂ ಜಗ ಸುತ್ತುವವರೆಲ್ಲರು ಕಳೆದು ಹೋಗುವುದಿಲ್ಲ" ಎನ್ನುವ ಶೀರ್ಷಿಕೆಗಳನ್ನು ನೀಡಿ  ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾಳೆ.