Yash Toxic Movie : ಯಶ್ 19 ಟೈಟಲ್ ರಿವೀಲ್..! ರಾಕಿ ಭಾಯ್ ಫ್ಯಾನ್ಸ್ ಫುಲ್ ಖುಷ್!
Yash 19: ರಾಕಿಂಗ್ ಸ್ಟಾರ್ ಯಶ್ ʻಯಶ್ 19ʼ ಚಿತ್ರದ ಟೈಟಲ್ ರೀವಿಲ್ ಆಗಿದೆ. ಹಾಗಾದ್ರೆ ಯಶ್ 19ನೇ ಚಿತ್ರದ ಟೈಟಲ್ ಏನು? ಯಾರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Yash 19 Title Revealed: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಅಪ್ಡೇಟ್ಸ್‌ಗಾಗಿ ಕಾಯುತ್ತಿದ್ದು, ಈ ನಟನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಫ್ಯಾನ್ಸ್‌ಗೆ ಸೂಪರ್ ಆಗಿರುವ ಟೀಸರ್ ಸಿಕ್ಕಿದ್ದಯ, ಇದರಲ್ಲಿ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ನಟ ಯಶ್ ಝಲಕ್ ಕೂಡಾ ರಿವೀಲ್ ಆಗಿದ್ದು, ಯಶ್ ಅವರ ಸ್ವರೂಪವನ್ನು ಈ ಟೀಸರ್ನಲ್ಲಿ ತೋರಿಸಿದ್ದಾರೆ.
ಯಶ್ ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್‌ನಲ್ಲಿ ರಿಲೀಸ್ ಆದ ಮೇಲೆ, ಬಳಿಕ ಯಶ್ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ಡೈರೆಕ್ಟರ್ ನರ್ತನ್ ‘ಯಶ್ 19’ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದ್ದು, ಆದರೆ ಅದು ನಡೆಯಲಿಲ್ಲ. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ‘ಕೆಜಿಎಫ್ 2’ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಯಶ್ ಹೊಸ ಚಿತ್ರದ ಟೈಟಲ್ ಘೋಷಣೆ ಆಗಿದೆ.
ಇದ್ನನೂ ಓದಿ: ಸಿಕ್ಕೇಬಿಡ್ತು ಯಶ್ 19 ಅಪ್‌ಡೇಟ್: ತೂಫಾನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಫ್ಯಾನ್ಸ್‌ಗೆ ಸಿಹಿಸುದ್ದಿ!
ಹೌದು.. ನಟ ಯಶ್‌ನ 19ನೇ ಚಿತ್ರಗಾಗಿ ಫ್ಯಾನ್ಸ್ ಕಾಯುತ್ತಲೇ ಇದ್ದು, ಕೊನೆಗೂ ಈ ವಿಚಾರ ರಿವೀಲ್ ಆಗಿದೆ. ‘Yash 19’ ಚಿತ್ರಕ್ಕೆ ‘ಟಾಕ್ಸಿಕ್’ ಎಂದು ಟೈಟಲ್ ಇಡಲಾಗಿದ್ದು, ಈ ಟೈಟಲ್ ನೊಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕಾರಣಕ್ಕೆ ಈ ಚಿತ್ರಕ್ಕೆ ಟೈಟಲ್ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದು, ಈ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದ್ದು, ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. ‘ಟಾಕ್ಸಿಕ್’ ಸಿನಿಮಾ 10-4-2025ರಂದು ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಲಿದ್ದು, ಸದ್ಯ ಟ್ವಿಟರ್ನಲ್ಲಿ #Toxic ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಅದಕ್ಕೆ ಸೂಕ್ತ ಆಗುವಂಥ ಟೈಟಲ್‌ನ್ನ ಫೈನಲ್ ಮಾಡಲಾಗಿದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ರಿವೀಲ್ ಆಗಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.