Yash 19 Update: ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನ 19ನೇ ಸಿನಿಮಾದ ಅಪ್‌ಡೇಟ್‌ ಕಾಯುತ್ತಿದ್ದು, ಇದೀಗ  ಆ ಟೈಮ್ ಬಂದೇಬಿಟ್ಟಿದೆ. ಕೊನೆಗೂ ಯಶ್‌ ತಮ್ಮ ಮುಂದಿನ ಚಿತ್ರದ ಬಗ್ಗೆ ಯಶ್ ಮೌನ ಮುರಿದು, ಅಧಿಕೃತವಾಗಿ ಮಾಹಿತಿ ಕೊಟ್ಟಿದ್ದಾರೆ. ಒಂದೂವರೆ ವರ್ಷದಿಂದ ಕಾಯುತ್ತಿದ್ದ ಫ್ಯಾನ್ಸ್‌ ನಿಟ್ಟುಸಿರು ಬಿಟ್ಟು, ಸದ್ಯ ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ  ಯಶ್ ಸಿನಿಮಾ ಬರಲಿದೆಯೆಂದು ಘೋಷಿಸಿದ್ದಾರೆ. ಜನವರಿ 8ರಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೈಟಲ್ ಸೇರಿದಂತೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಯಶ್‌19 ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿ, ಸಿನಿಮಾ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಟ್ಟಿದ್ದರು. ಇನ್ನು ಕಾಯಿಸಿದರೆ ತಪ್ಪಾಗುತ್ತದೆ ಎಂದು ನಿರ್ಧರಿಸಿರುವ ಯಶ್ ಅಪ್‌ಡೇಟ್ ಕೊಟ್ಟುಬಿಟ್ಟಿದ್ದು,  ಫ್ಯಾನ್ಸ್‌ಗಳಿಗೆ ಸುದ್ದಿ ಕೇಳಿ ಥ್ರಿಲ್ ಆಗಿದ್ದು ಯಾವಾಗ ಯಶ್ ಹುಟ್ಟುಹಬ್ಬ ಬರುತ್ತೋ ಎಂದು ವೇಯ್ಟ್‌ ಮಾಡ್ತಾಯಿದ್ದಾರೆ. 'KGF'ಚಾಪ್ಟರ್-2 ಸಿನಿಮಾ ಬಿಡುಗಡೆಯಾಗಿ 599 ದಿನಳ ಬಳಿಕ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿಯನ್ನು, ಜನವರಿ 8ರಂದು ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಯಶ್‌19 ಟೈಟಲ್ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. 


ಇದನ್ನೂ ಓದಿ: ಕಾಟೇರ ಪ್ಯಾನ್‌ ಇಂಡಿಯಾ ರಿಲೀಸ್‌ ಆಗಲಿದೆಯಾ? ಏನ್ಹೇಳ್ತಾರೆ ಡೈರೆಕ್ಟರ್‌ ತರುಣ್..!


ಇತ್ತೀಚೆಗೆ ಕೆವಿಎನ್‌ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಬ್ಲೂ ಟಿಕ್ ಪಡೆದಿದ್ದು, ಅದನ್ನು ನೋಡಿ ಅಭಿಮಾನಿಗಳು ಯಶ್‌19 ಅಪ್‌ಡೇಟ್ ಬರ್ತಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲೇ ಸಿನಿಮಾ ನಿರ್ಮಾಣವಾಗುತ್ತದೆ ಎಂದಿದ್ದರು. ಫ್ಯಾನ್ಸ್‌ ಊಹೆಯಂತೆ ಯಶ್‌-ಕೆವಿಎಫ್ ಕಾಂಬಿನೇಷನ್‌ನಲ್ಲಿ ತಮ್ಮ 19ನೇ ಚಿತ್ರ ನಿರ್ಮಾಣವಾಗಲಿದ್ದು, ಇದಕ್ಕೂ ಮುಂಚೆ ಇನ್ನು ಯಶ್‌19 ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿದೆ. ಇನ್ನು ಸೆನ್ಸೇಷನಲ್ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರಕ್ಕೆ ಟ್ಯೂನ್ ಹಾಕುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದ್ದು, ಇದೂ ಕೂಡ ನಿಜವಾಗುತ್ತಾ ಕಾದು ನೋಡಬೇಕಿದೆ. 


'KGF' ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದು, ಅಕ್ಕಪಕ್ಕದ ರಾಜ್ಯಗಳಲ್ಲಿ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಯಿದ್ದು, ಆ ನಿರೀಕ್ಷೆಗೆ ತಕ್ಕಂತ ಕಥೆ ಬೇಕು ಎಂದು ರಾಕಿಂಗ್ ಸ್ಟಾರ್ ಇಷ್ಟು ದಿನ ಕಾಯ್ತಿದ್ದರು. ಅಭಿಮಾನಿಗಳನ್ನು ಕೂಡ ಕಾಯಿಸಿದ್ದರು. ಕೊನೆಗೂ ಅಂತಾದೊಂದು ಕತೆ ಸಿಕ್ಕಿದ್ದು ಇದೀಗ ಸಿನಿಮಾ ಮಾಡಲು ಮುಂದಾಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.