ಬೆಂಗಳೂರು : ಕೆಜಿಎಫ್‌ 2 ಹಿಟ್‌ ಬೆನ್ನಲ್ಲೆ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮೆರೆಯುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ಯಾವುದೇ ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ. ಆದ್ರೆ ರಾಕಿಭಾಯ್‌ಗೆ ಬಾಲಿವುಡ್‌ನಿಂದ ಬಿಗ್‌ ಆಪರ್‌ಗಳು ಬಂದಿದ್ದು, ಶೀರ್ಘದಲ್ಲೇ ಯಶ್‌ ಹೊಸ ಸಿನಿಮಾ ಅನೌನ್ಸ್‌ ಮಾಡಲಿದ್ದಾರೆ ಎಂಬ ಮ್ಯಾಟರ್‌ ಕೇಳಿ ಬರುತ್ತಿದೆ. 
 
ಯಸ್‌... ಕೆಜಿಎಫ್‌ 2 ಆದ್ಮೇಲೆ ಯಶ್‌ ಅಭಿಮಾನಿಗಳಿಗೆ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದೇ ದೊಡ್ಡ ತಲೆನೋವಾಗಿತ್ತು. ಸದ್ಯ ಅದಕ್ಕೆ ಫುಲ್‌ ಸ್ಟಾಪ್‌ ಇಡುವ ಟೈಮ್‌ ಬಂದಿದೆ. ರಾಕಿ ಭಾಯ್‌ ತಮ್ಮ ಮುಂಬರುವ ಸಿನಿಮಾ ಅನೌನ್ಸ್‌ ಮಾಡಲಿದ್ದಾರೆ ಎನ್ನಲಾಗಿದೆ. ಅದು ಬಾಲಿವುಡ್‌ನಲ್ಲಿ ಎನ್ನುವುದೇ ವಿಶೇಷ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: Gandhada Gudi: ತಮ್ಮ ಊಟದ ತಟ್ಟೆ ತಾವೇ ತೊಳೆಯುತ್ತಿದ್ದ ಪುನೀತ್‌! ಇದು ʻರಾಜರತ್ನʼನ ಸರಳತೆ


ಇನ್ನು ಯಶ್‌ ಹೆಸರಾಂತ್‌ ಸಿನಿ ನಿರ್ಮಾಣ ಸಂಸ್ಥೆಯ ಜೊತೆ ಕೈ ಜೊಡಿಸಿದ್ದು, ಹೊಸ ಸಿನಿಮಾ ಮಾಡ್ತಾರೆ ಅಂತ ಹೇಳಲಾಗುತ್ತಿದೆ. ಆದ್ರೆ ಈ ಕುರಿತು ಮಾಸ್ಟರ್ ಪೀಸ್ ಮಾತ್ರ ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ. ಇತ್ತೀಚೆಗಷ್ಟೇ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ನಟಿಸಿದ್ದ 'ಬ್ರಹ್ಮಾಸ್ತ್ರ' ಸಿನಿಮಾ ಹಿಟ್‌ ಆಗಿತ್ತು. ಸದ್ಯ ಇದೇ ಚಿತ್ರದ ಮುಂದುವರಿದ ಭಾಗದಲ್ಲಿ ಯಶ್‌ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದದೆ. ಈ ಕುರಿತು ಯಶ್‌ ಹುಟ್ಟುಹಬ್ಬದಂದು ಈ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಆದ್ರೆ ಈ ಕುರಿತು ಯಶ್‌ ಆಗಲಿ ಇಲ್ಲವೆ ನಿರ್ಮಾಣ ಸಂಸ್ಥೆಯಾಗಲಿ ಅಧಿಕೃತಗೊಳಿಸಬೇಕಿದೆ.


ಇನ್ನು ಎಕ್ಸೆಲ್‌ ಸಂಸ್ಥೆ ಓಂ ಪ್ರಕಾಶ್‌ ಮೆಹ್ರಾ ಸಾರಥ್ಯದಲ್ಲಿ ಕರ್ಣ ಎಂಬ ಪೌರಾಣಿಕ ಹಿನ್ನೆಲೆಯುಳ್ಳ ಮಹಾಭಾರತ ಕಥೆ ಆಧಾರಿತ ಸಿನಿಮಾ ನಿರ್ಮಾಣವಾಗಲಿದೆ. ಸಿನಿಮಾಗೆ ʼಕರ್ಣʼ ಎಂದು ಶೀರ್ಷಿಕೆ ಇಡಲಾಗಿದೆಯಂತೆ. ಬಿಟ್‌ ಬಜೆಟ್‌ನ ಈ ಚಿತ್ರಕ್ಕೆ ಕರ್ಣನ ಪಾತ್ರದಲ್ಲಿ ನಟಿಸಲು ರಾಕಿಂಗ್‌ ಸ್ಟಾರ್‌ ಯಶ್‌ಗೆ ಆಫರ್‌ ನೀಡಲಾಗಿದೆ ಎಂಬ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ. ಅದ್ರೆ ಇನ್ನೂ ಕನ್ಫರ್ಮ್‌ ಆಗಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.