ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‌ ಅವರ ತಾಯಿ ಪುಷ್ಪಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬ ಕಡಿಮೆ. ಕುಟುಂಬದ ಬಗ್ಗೆ ಅವರು ಬಹಿರಂಗವಾಗಿ ಮಾತನಾಡುವುದು ಕೂಡ ತೀರಾ ಅಪರೂಪ. ಆದರೆ ಅವರು ಇತ್ತೀಚೆಗೆ ಯಶ್‌ ಬಗ್ಗೆ ಮನಸಾರೆ ಮಾತನಾಡಿದ್ದಾರೆ. ಅದು 'ಸ್ಟಾರ್‌ ಸುವರ್ಣ' ವಾಹಿನಿಯ 'ಬೊಂಬಾಟ್‌ ಭೋಜನ' ಕಾರ್ಯಕ್ರಮದಲ್ಲಿ.


COMMERCIAL BREAK
SCROLL TO CONTINUE READING

ಸಿಹಿ ಕಹಿ ಚಂದ್ರು ಈ ಕಾರ್ಯಕ್ರಮದ ನಿರೂಪಕರು. ಅವರ ಜೊತೆ ಯಶ್(Yash)‌ ಬಗ್ಗೆ ಅನೇಕ ವಿಚಾರಗಳನ್ನು ಪುಷ್ಪಾ ಹಂಚಿಕೊಂಡಿದ್ದಾರೆ. 'ರಾಕಿಂಗ್‌ ಸ್ಟಾರ್‌' ಹುಟ್ಟುಹಬ್ಬದ (ಜ.8) ಪ್ರಯುಕ್ತ ಈ ಎಪಿಸೋಡ್‌ ಪ್ರಸಾರ ಆಗಿದೆ. ಮಗ ಯಶ್‌ ಮಾತ್ರವಲ್ಲದೆ, ಸೊಸೆ ರಾಧಿಕಾ ಪಂಡಿತ್‌ ಮತ್ತು ಮೊಮ್ಮಗಳು ಆಯ್ರಾಗೆ ಗಿಣ್ಣು ಇಷ್ಟದ ತಿಂಡಿ ಎಂಬುದನ್ನು ಪುಷ್ಪಾ ಬಹಿರಂಗ ಪಡಿಸಿದ್ದಾರೆ.


'KGF Chapter 2' ಟೀಸರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಹೊಸ ದಾಖಲೆ


ಯಶ್‌ ಮೂಲತಃ ಹಾಸನದವರು. ಅಲ್ಲಿಂದಲೇ ಗಿಣ್ಣದ ಹಾಲನ್ನು ತೆಗೆದುಕೊಂಡು ಬಂದು, ಈ ಕಾರ್ಯಕ್ರಮದಲ್ಲಿ ರುಚಿಯಾದ ಗಿಣ್ಣು ತಯಾರಿಸಿದ್ದಾರೆ ಯಶ್‌ ತಾಯಿ. ಜೊತೆ ಅನೇಕ ಹಳೇ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. ಯಶ್‌ ಬಾಲ್ಯ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. 'ಅವನು ಎರಡು ವರ್ಷದ ಪಾಪು ಆಗಿದ್ದಾಗಿನಿಂದಲೇ ಹಾಡು ಕೇಳಿದರೆ ಮಲಗಿದ್ದವನು ಎದ್ದು ಬಂದು ಡ್ಯಾನ್ಸ್‌ ಮಾಡಿ ಮತ್ತೆ ಹೋಗಿ ಮಲಗುತ್ತಿದ್ದ. ಶಾಲೆಯಲ್ಲಿ ಕಲಿತಿದ್ದನ್ನು ಚಾಚೂ ತಪ್ಪದೇ ಮನೆಗೆ ಬಂದು ಹೇಳುತ್ತಿದ್ದೆ. ಕಾಲೇಜು ದಿನಗಳಲ್ಲಿ ಸೀರಿಯಲ್‌ ಆಫರ್‌ ಶುರು ಆಯಿತು' ಎಂದಿದ್ದಾರೆ ಯಶ್‌ ತಾಯಿ.


YouTube ನಲ್ಲಿ ಹೊಸ ದಾಖಲೆ ಸೃಷ್ಟಿಸಿದ KGF Chapter 2 Teaser


'ಕಾಲೇಜು ಗೋಡೆ ಹಾರಿ ಹೋಗಿ ಸ್ನೇಹಿತರಿಗೆಲ್ಲ ಡ್ಯಾನ್ಸ್‌, ನಾಟಕ ಹೇಳಿಕೊಡುತ್ತಿದ್ದ. ಉಪೇಂದ್ರ ಅವರ ಸಿನಿಮಾದ ಹಾಡುಗಳಿಗೆ ಡ್ಯಾನ್ಸ್‌ ಮಾಡುತ್ತಿದ್ದ. ಓದಿಗಿಂತಲೂ ಹೆಚ್ಚಾಗಿ ಇಂಥದ್ದರ ಕಡೆಗೆ ಅವನಿಗೆ ಆಸಕ್ತಿ ಇತ್ತು. ಮಗ ಶಾಲೆಗೆ ಹೋಗುತ್ತಾನೋ ಅಥವಾ ಏನು ಮಾಡುತ್ತಾನೆ ಎಂದು ಅವರ ತಂದೆ ಬಯ್ಯುತ್ತಿದ್ದರು. ಚಿತ್ರರಂಗ ಅಂದ್ರೆ ನಮಗೆ ಏನೂ ಗೊತ್ತಿರಲಿಲ್ಲ. ಅರ್ಧಂಬರ್ಧ ಮಾಡಿ ವಾಪಸ್‌ ಬಂದರೆ ಅವಮಾನ ಆಗುತ್ತದೆ ಎಂಬ ಅಳುಕು ನಮಗೆ ಇತ್ತು. ಆದರೆ ಅವನು ಯಾವುದೇ ವಿಚಾರಕ್ಕೆ ಹೋಗುವವನಲ್ಲ. ಹೋದರೆ ಅದನ್ನು ತುಂಬಾ ಚೆನ್ನಾಗಿ ಮಾಡುತ್ತಾನೆ' ಎಂದು ಮಗನ ಬಗ್ಗೆ ಮಾತನಾಡಿದ್ದಾರೆ ಪುಷ್ಪಾ.


Radhika Kumaraswamyಗೆ ಸಿಸಿಬಿ ಗ್ರಿಲ್..! ಏನು ದುಡ್ಡಿನ ಕಹಾನಿಯ ಅಸಲಿಯತ್ತು..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ