Yash Viral Photo: ಸೌತ್‌ ಸಿನಿ ಇಂಡಸ್ಟ್ರಿಯ ಖ್ಯಾತ ನಟ ಯಶ್ ಅವರ ಪ್ಯಾನ್-ಇಂಡಿಯಾ ಫಿಲ್ಮ್ ಫ್ರ್ಯಾಂಚೈಸ್ ಕೆಜಿಎಫ್‌ನ ಯಶಸ್ಸಿನ ನಂತರ ಅವರೊಬ್ಬ ನ್ಯಾಷನಲ್‌ ಐಕಾನ್ ಆಗಿದ್ದಾರೆ. ಕೆಜಿಎಪ್‌ನ ಎರಡೂ ಪಾರ್ಟ್‌ಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆದವು ಮತ್ತು ಅವರಿಗೆ ದೇಶದಲ್ಲಿ ಸಾಕಷ್ಟು ಮನ್ನಣೆಯನ್ನು ನೀಡಿತು. ಕೆಜಿಎಫ್ 2 ಬಿಡುಗಡೆಯಾದ ನಂತರ, ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ಆದರೆ ಇದು ವರೆಗೂ ಮುಂದಿನ ಯೋಜನೆಗಳನ್ನು ಸಹ ಬಹಿರಂಗಪಡಿಸಿಲ್ಲ. ಇದೀಗ ಯಶ್ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಚಿತ್ರದಲ್ಲಿ ಯಶ್ ಕಂದು ಬಣ್ಣದ ಶರ್ಟ್ ಧರಿಸಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕ್ಯಾಮೆರಾದ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅವರ ಮುಂಬರುವ ಚಿತ್ರದ ಸೆಟ್‌ಗಳಿಂದ ಲೀಕ್‌ ಆಗಿದೆ ಎಂದು ಅನೇಕರು ಊಹಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಅವರಲ್ಲಿ ಹಲವರು ತಮ್ಮ ನೆಚ್ಚಿನ ಸೂಪರ್‌ಸ್ಟಾರ್ ತಮ್ಮ ಮುಂದಿನ ಚಿತ್ರವನ್ನು ಯಾವಾಗ ಅಧಿಕೃತವಾಗಿ ಘೋಷಿಸುತ್ತಾರೆ ಎಂದು ಕಾಯುತ್ತಿದ್ದಾರೆ.


ಇದನ್ನೂ ಓದಿ : ಅಂಬರೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ "ಅಂತ" ಮರು ಬಿಡುಗಡೆ


ವದಂತಿಗಳ ಪ್ರಕಾರ, ನಟ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿರುವ ದೊಡ್ಡ-ಬಜೆಟ್ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಅವರಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ.


 


ಮಿತಿ ಮೀರಿದ ಬೋಲ್ಡ್‌ ಲುಕ್‌.. ದಿಶಾ ಪಟಾನಿ ಪ್ರೈವೆಟ್‌ ಪಾರ್ಟ್‌ ಕಂಡು ಹುಚ್ಚೆದ್ದು ಕುಣಿದ ಫ್ಯಾನ್ಸ್‌.!


ಪ್ರಸ್ತುತ, ಯಶ್ ಅವರ ಮುಂಬರುವ ಚಿತ್ರಕ್ಕೆ ತಾತ್ಕಾಲಿಕವಾಗಿ ಯಶ್ 19 ಎಂದು ಹೆಸರಿಸಲಾಗಿದೆ. ಯಶ್ 19 ರಲ್ಲಿ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕಿ ಗೀತು ಮೋಹನ್ ದಾಸ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂಬ ವದಂತಿಗಳಿವೆ. ಮಲಯಾಳಂ ನಿರ್ದೇಶಕರು ಯಶ್ ಜೊತೆ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ಸಹ ವರದಿಯಾಗಿದೆ. ಕೆಜಿಎಫ್: ಅಧ್ಯಾಯ 3 ರಲ್ಲಿ ಯಶ್ ರಾಕಿ ಭಾಯ್ ಆಗಿ ಮರಳಬಹುದು ಎಂಬ ವದಂತಿಗಳೂ ಇವೆ. ಆದಾಗ್ಯೂ, ಈ ಊಹಾಪೂಹಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯಾಗಲಿ ಮಾಹಿತಿಯಾಗಲಿ ನೀಡಿಲ್ಲ. 


ಇದನ್ನೂ ಓದಿ : ಹಳೆಯ ಚಿತ್ರಮಂದಿರ ಖರೀದಿಸಿದ ನಯನತಾರಾ! ನಟನೆ ಜೊತೆ ಇಷ್ಟೆಲ್ಲಾ ಬ್ಯುಸಿನೆಸ್‌ ಮಾಡ್ತಾರೆ ಈ ನಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.