Yash : ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ.. ಮಾತಲ್ಲೇ ಜಡ್ಜ್ ಮಾಡ್ತಾರೆ..!
Yash kgf 2 updates : ನಟ ರಾಕಿಂಗ್ ಸ್ಟಾರ್ ಯಶ್ ನ್ಯೂ ಡೈಲಾಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಯಾವ್ ಸಿನಿಮಾ ಡೈಲಾಗ್ ಎಂದು ಜನ ತಲೆಕೆಡಿಸಿಕೊಳ್ಳುವಂತಾಗಿದೆ. ಅರೇ.. ಹೊಸ ಸಿನಿಮಾ ಅನೌನ್ಸ್ ಮಾಡಿದ್ರಾ ರಾಕಿ ಭಾಯ್ ಅಂತ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅದ್ರೆ ವೈರಲ್ ಡೈಲಾಗ್ ಹಿಂದಿರುವ ರಿಯಲ್ ಮ್ಯಾಟರ್ ಬೇರೆನೇ ಇದೆ..
Yash : ಕೆಜಿಎಫ್ 2 ನಂತರ ನಟ ಯಶ್ ಅಭಿಮಾನಿಗಳಿಗೆ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ. ಯಶ್ ಕೆಜಿಎಫ್ 2 ಮಾಡ್ತಾರೆ ಇಲ್ಲ.. ಇಲ್ಲ... ಅವರು ಬಾಲಿವುಡ್ ಸಿನಿಮಾ ಮಾಡ್ತಾರೆ ಅಂತ ಹೇಳಲಾಗುತ್ತಿದೆ. ಇನ್ನು ಕೆಲವರು ಹಾಲಿವುಡ್ ಡೈರೆಕ್ಟರ್ ಜೊತೆ ಯಶ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿಯನ್ನು ಸಹ ಹಬ್ಬಿಸಿದ್ದಾರೆ. ಆದ್ರೆ ಇವುಗಳಲ್ಲಿ ಯಾವುದು ನಿಜ..? ಎನ್ನುವುದೇ ಡೌಟ್.
ಹೌದು.. ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಇದೆ. ರಾಕಿ ತಮ್ಮ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಕೊಡ್ತಾರೆ... ಅಂತ ತಿಳ್ಕೊಂಡಿದ್ರು.. ಆದು ಆಗ್ಲಿಲ್ಲ.. ಯುಗಾದಿ ಹಬ್ಬಕ್ಕೆ ಪಕ್ಕಾ ಹೊಸ ಸಿನಿಮಾ ಅನೌನ್ಸ್ ಮಾಡ್ತಾರೆ ಅಂತ ರಾಕಿ ಭಾಯ್ ಪ್ಯಾನ್ಸ್ ಆಸೆ ಇಟ್ಕೊಂಡು ಕುಂತಿದ್ರು ಇದೀಗ ಅದು ಕೂಡ ನಿರಾಸೆಯಾಗಿದೆ. ಎಲ್ಲರೂ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್ ಮಾಡ್ತೀದಾರೆ ಆದ್ರೆ ರಾಕಿ ಭಾಯ್ ಸೈಲೆಂಟ್ ಆಗಿ ಯಾಕಿದಾರೆ ಎನ್ನುವ ಕುರಿತು ಎಲ್ಲೂ ಹೇಳಿಲ್ಲ.
ಎನ್‌ಟಿಆರ್ ನ್ಯೂ ಸಿನಿಮಾ ಶೂಟಿಂಗ್ ಸ್ಟಾರ್ಟ್..! ಯಂಗ್ ಟೈಗರ್ ಚಿತ್ರಕ್ಕೆ ರಾಜಮೌಳಿ ಕ್ಲಾಪ್
ಇದೀಗ ಯಶ್ ನ್ಯೂ ಡೈಲಾಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಂತ ನೀವು ಜಾಸ್ತಿ ಖುಷಿ ಆಗ್ಬೇಡಿ. ಇದು ಅವರ ಯಾವುದೇ ಹೊಸ ಸಿನಿಮಾದ ಡೈಲಾಗ್ ಅಲ್ಲ ಬದಲಿಗೆ ಪೆಪ್ಸಿ ಜಾಹಿರಾತು. ಹೌದು. ಯಶ್ ಪೆಪ್ಸಿಗೆ ರಾಯಭಾರಿ ಆಗಿದ್ದಾರೆ. ಇದರ ಪ್ರಚಾರದಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಕನ್ನಡದ ಹೀರೋ ಒಬ್ಬರು ಪೆಪ್ಸಿ ಬ್ರ್ಯಾಂಡ್ಗೆ ಅಂಬಾಸಿಡರ್ ಆಗಿದ್ದು ಇದೇ ಮೊದಲು. ಈಗ ಅವರ ಹೊಸ ಜಾಹೀರಾತು ವಿಡಿಯೋ ಗಮನ ಸೆಳೆಯುತ್ತಿದೆ.
ಜಾಹೀರಾತಿನ ವಿಡಿಯೋದಲ್ಲಿ ʼಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರುʼ ಎಂದು ಯಶ್ ಹೇಳಿರುವ ಡೈಲಾಗ್ ಸಖತ್ ಸದ್ದು ಮಾಡುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.