Instagram Post : ರಾಕಿಂಗ್‌ ಜೋಡಿ ಯಶ್‌ ಮತ್ತು ರಾಧಿಕಾ ಪಂಡಿತ್‌ ಇತ್ತೀಚಿಗಷ್ಟೇ ತಮ್ಮ ಇನ್ಸಸ್ಟಾಗ್ರಾಂ ಖಾತೆಯಲ್ಲಿ ಬೀಚ್‌ನಲ್ಲಿ ಮಗಳೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ರಾಕಿಂಗ್‌ ಜೋಡಿಗಳೊಂದಿಗೆ ಮಗಳು ಐರಾ, ಮಗ ಯಥರ್ವ್‌ ಇದ್ದು, ಕುಟುಂಬವು ಕಡಲತೀರದಲ್ಲಿ ದಿನವನ್ನು ಕಳೆದಿರುವಂತೆ ತೋರುತ್ತದೆ.


COMMERCIAL BREAK
SCROLL TO CONTINUE READING

ರಾಧಿಕಾ ಪಂಡಿತ್‌ ತಮ್ಮ ಇನ್ಸಸ್ಟಾಗ್ರಾಂ ಖಾತೆಯಲ್ಲಿ ಪತಿ ಯಶ್‌ ಹಾಗೂ ಮಗಳು ಐರಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಯಶ್ ಹೆಗಲ ಮೇಲೆ ಮಗಳು ಐರಾ ಕೂತಿದ್ದು, ರಾಧಿಕಾ ಅವರೆಡೆಗೆ ನೋಡುತ್ತಿರುವ ಒಂದು ಸುಂದರ ಚಿತ್ರವನ್ನು ಹಂಚಿಕೊಂಡಿದ್ದು, ಚಿತ್ರದಲ್ಲಿ ಮಗ ಯಥರ್ವ ಇಲ್ಲದೇ ಇರುವುದು ಕಾಣುತ್ತದೆ. 


 

 

 

 



 

 

 

 

 

 

 

 

 

 

 

A post shared by Yash (@thenameisyash)


ಇದನ್ನು ನೋಡಿ - ಅಂಬಾನಿಯನ್ನು ಮದುವೆಯಾಗುವ ಮೊದಲು ʼನೀತಾʼ ಅವರ ಸಂಬಳ ಎಷ್ಟಿತ್ತು ಗೊತ್ತೆ..?


ಅಲ್ಲದೇ ಇದರೊಂದಿಗೆ ಒಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು, ವಿಡಿಯೋ ಬೀಚ್‌ನಲ್ಲಿ ಕುಟುಂಬದೊಂದಿಗೆ ಕಳೆದ ಇನ್ನಿತರ ಸುಂದರವಾದ ಕ್ಷಣಗಳನ್ನು ತೋರ್ಪಡಿಸುತ್ತದೆ. 


ರಾಕಿಂಗ್‌ ಜೋಡಿಗಳು ತಮ್ಮ ಇನ್ಸಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್‌ಗಳ ಸುರಿಮಳೆಯೇ ಸುರಿಯುತ್ತಿದ್ದು, ಕ್ಯೂಟ್‌ ಫ್ಯಾಮಿಲಿ, ಕ್ಯೂಟೆಸ್ಟ್‌ ಕಪಲ್‌ ಎಂಬ ಕಾಮೆಂಟ್‌ಗಳು ಕೂಡ ಬರುತ್ತಿವೆ. ಅಲ್ಲದೇ ಪೋಸ್ಟ್‌ಗೆ ರಾಧಿಕಾ ಹೃದಯ ಮತ್ತು ಪ್ಲಾನೆಟ್ ಎಮೋಜಿಯ ಶೀರ್ಷಿಕೆ ನೀಡಿದ್ದು, ಪರಿಪೂರ್ಣ ಕುಟುಂಬ ಮತ್ತು ತನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ ಎನ್ನುವುದನ್ನು ತೋರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.