ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಕೆಜಿಎಫ್ 2 `ಯಶ`ಸ್ವಿಯಾನ
ಕೆಜಿಎಫ್ 2 ಚಿತ್ರವು ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ನಿರ್ಮಿಸುತ್ತಲೇ ಇದೆ, ಚಿತ್ರ ಬಿಡುಗಡೆಯಾಗಿ ಐದು ವಾರಗಳು ಕಳೆದರೂ ಕೂಡ ಅದರ ಯಶಸ್ವಿಯಾನ ಮಾತ್ರ ಇನ್ನೂ ನಿಂತಿಲ್ಲ,ಈಗ ಹಿಂದಿಯೊಂದರಲ್ಲೇ ಕೆಜಿಎಫ್ ಚಿತ್ರವು 430 ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರು: ಕೆಜಿಎಫ್ 2 ಚಿತ್ರವು ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ನಿರ್ಮಿಸುತ್ತಲೇ ಇದೆ, ಚಿತ್ರ ಬಿಡುಗಡೆಯಾಗಿ ಐದು ವಾರಗಳು ಕಳೆದರೂ ಕೂಡ ಅದರ ಯಶಸ್ವಿಯಾನ ಮಾತ್ರ ಇನ್ನೂ ನಿಂತಿಲ್ಲ,ಈಗ ಹಿಂದಿಯೊಂದರಲ್ಲೇ ಕೆಜಿಎಫ್ ಚಿತ್ರವು 430 ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .! ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್
ಇದಕ್ಕೂ ಮೊದಲು ಬಾಹುಬಲಿ 2 ಚಿತ್ರವು 510 ಕೋಟಿ ಗಳಿಸಿದ ಸಾಧನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ.ಈಗ ಸಿನಿ ಮಾರುಕಟ್ಟೆಯ ವಿಶ್ಲೇಷಕರ ಪ್ರಕಾರ ಕೆಜಿಎಫ್ 2 ಚಿತ್ರವು ಒಟಿಟಿ ಬಿಡುಗಡೆ ನಂತರವೂ ಪುಷ್ಪಾ ಚಿತ್ರದಂತೆ ತನ್ನ ಯಶಸ್ಸನ್ನು ಮುಂದುವರೆಸಲಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಏಕೆಂದರೆ ಪುಷ್ಪಾ ಚಿತ್ರವು ಒಟಿಟಿಯಲ್ಲಿ ಪ್ರೀಮಿಯರ್ ಆದ ನಂತರವೂ ಸುಮಾರು 30 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಆದರೆ ಆಗಿನ ಸಂದರ್ಭ ವಿಭಿನ್ನವಾಗಿತ್ತು ,ಕಾರಣ ಆಗ ಥಿಯೇಟರ್‌ಗಳಲ್ಲಿ ಯಾವುದೇ ಹೊಸ ಚಿತ್ರದ ಬಿಡುಗಡೆ ಇಲ್ಲದ ಕಾರಣ ಅದೊಂದು ರೀತಿ ಅನುಕೂಲಕರವಾಗಿತ್ತು.Pension Scheme : ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ ₹60,000 ಪಿಂಚಣಿ!
ಆದರೆ ಈಗ ಕೆಜಿಎಫ್ 2 ಚಿತ್ರವು ಈಗಾಗಲೇ 430 ಕೋಟಿಗಳನ್ನು ಗಳಿಸಿದೆ ಮತ್ತು ಹೊಸ ಚಿತ್ರಗಳಾದ ಭೂಲ್ ಭುಲೈಯಾ 2 ಮತ್ತು ಢಾಕಡ್ ಕೂಡ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿವೆ.ಈ ಹಿನ್ನಲೆಯಲ್ಲಿ ದಿನ ಕಳೆದಂತೆ ಪ್ರದರ್ಶನಗಳು ಕಡಿಮೆಯಾಗುತ್ತಲೇ ಇವೆ, ಆದಾಗ್ಯೂ ಚಿತ್ರದ ಯಶಸ್ವಿಯಾನ ಮಾತ್ರ ಕಡಿಮೆಯಾಗಿಲ್ಲ, ಈಗಿರುವ ಟ್ರೆಂಡ್ ನಂತೆ ಪ್ರದರ್ಶನಗೊಂಡಿದ್ದೆ ಆದಲ್ಲಿ ಹಿಂದಿಯಲ್ಲಿ 440 ಕೋಟಿಗಳನ್ನು ಸುಲಭವಾಗಿ ಗಳಿಸಬಹುದು ಎನ್ನಲಾಗಿದೆ.
ಯಶ್ ಅಭಿನಯಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್,ರವೀನಾ ಟಂಡನ್,ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.