Year Ender 2023: ಸ್ಯಾಂಡಲ್‌ವುಡ್‌ ನಲ್ಲಿ ಅನೇಕ ಸಿನಿಮಾಗಳು 2023 ರಲ್ಲಿ ವಿಶ್ವಾದ್ಯಂತ ಹಿಟ್‌ ಪಡೆದಿವೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಕೆಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗಿರಿಸಿದವು. ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿ ಸೋತ ಟಾಪ್ 10 ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ... 


COMMERCIAL BREAK
SCROLL TO CONTINUE READING

1) ಕಬ್ಜ: ಆರ್‌. ಚಂದ್ರು ನಿರ್ದೇಶನದ ಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಬ್ಜ' ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ನಟ ಸುದೀಪ ಸಹ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಕಬ್ಜ ಸಿನಿಮಾ ಸಿನಿಪ್ರಿಯರ ಮನಗೆಲ್ಲಿಲ್ಲ ಎನ್ನಲಾಗುತ್ತಿದೆ. 


2) ಟೋಬಿ: ರಾಜ್‌ ಬಿ. ಶೆಟ್ಟಿ ಅವರ 'ಟೋಬಿ' ಸಿನಿಮಾ ಸಹ ಈ ವರ್ಷ ಮುಗ್ಗರಿಸಿದೆ. ಈ ಸಿನಿಮಾವನ್ನು ಬಾಸಿಲ್ ನಿರ್ದೇಶನ ಮಾಡಿದ್ದರು. ಪೋಸ್ಟರ್‌, ಟ್ರೈಲರ್‌ನಿಂದ ಸಾಕಷ್ಟು ಗಮನ ಸೆಳೆದಿತ್ತು. ರಾಜ್‌ ಬಿ. ಶೆಟ್ಟಿ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಅಂದುಕೊಂಡ ಮಟ್ಟಿಗೆ ಟೋಬಿ ಹಿಟ್‌ ಕೊಡಲಿಲ್ಲ. 


3) ಬ್ಯಾಡ್‌ ಮ್ಯಾನರ್ಸ್: ದುನಿಯಾ ಸೂರಿ ಅವರ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ನಟಿಸಿದ್ದರು. ಸೂರಿ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾದರೂ ಸಾಮಾನ್ಯ ಪ್ರೇಕ್ಷಕರ ಮನಗೆಲ್ಲಲಿಲ್ಲ. 


ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಗೆದ್ದು, ಸಂಭ್ರಮಿಸಿದ್ದ ರೈತನ ಮಗ ಪಲ್ಲವಿ ಪ್ರಶಾಂತ್‌ ಬಂಧನ..!? 


4) ಬಾನ ದಾರಿಯಲ್ಲಿ: ಪ್ರೀತಂ ಗುಬ್ಬಿ ನಿರ್ದೇಶಿಸಿದ ಗಣೇಶ್ ನಟಿಸಿದ 'ಬಾನ ದಾರಿಯಲ್ಲಿ' ಸಿನಿಮಾ ಕೂಡ ಈ ವರ್ಷ ಫ್ಲಾಪ್‌ ಪಟ್ಟಿಗೆ ಸೇರಿದೆ. ಈ ಸಿನಿಮಾ ರಿಲೀಸ್‌ ಆದಾಗ ಒಳ್ಳೆ ಓಪನಿಂಗ್ ಪಡೆದುಕೊಂಡಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡಲಿಲ್ಲ.


5) ಗರಡಿ: ಬಿ.ಸಿ ಪಾಟೀಲ್ ನಿರ್ಮಿಸಿ, ನಟಿಸಿದ್ದ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಸಹ ಸೋಲು ಕಂಡಿದೆ. ಯಶಸ್ ಸೂರ್ಯ, ಸೋನಲ್ ಮಂಥೆರೋ ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಸಹ ಜನರ ಮನಕ್ಕೆ ಹತ್ತಿರವಾಗಲಿಲ್ಲ.


6) ತೋತಾಪುರಿ 2: ಕಳೆದ ವರ್ಷ ತೆರೆಗೆ ಬಂದ 'ತೋತಾಪುರಿ- 1' ಸಿನಿಮಾ ಸೋಲುಂಡಿತ್ತು. ಆದರೂ ವಿಜಯ ಪ್ರಸಾದ್- ಜಗ್ಗೇಶ್ ಕಾಂಬೋ ಇರುವ ಸಿನಿಮಾ 'ತೋತಾಪುರಿ- 2' ಈ ವರ್ಷ ರಿಲೀಸ್‌ ಆಯ್ತು. ಆದರೆ ಬಾಕ್ಸ್‌ ಆಫಿಸ್‌ನಲ್ಲಿ ಸೋಲುಂಡಿತು.


7) ರಾಜಮಾರ್ತಾಂಡ: ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ'. ಧ್ರುವ ಸರ್ಜಾ ವಾಯ್ಸ್ ನೀಡಿದ್ದ ಸಿನಿಮಾ. ಆದರೆ ಸಿನಿಮಾ ಗೆಲ್ಲಲಿಲ್ಲ.


ಇದನ್ನೂ ಓದಿ: BBK 10: "ನನಗೆ ತುಕಾಲಿ ಸಂತು ಅಸಹ್ಯವಾಗಿ ಕಾಣಿಸಿದರು": ಬೇಸರ ವ್ಯಕ್ತಪಡಿಸಿದ ವರ್ತೂರ್‌ ಸಂತೋಷ್‌! 


8) ತತ್ಸಮ ತದ್ಭವ: ಈ ಸಿನಿಮಾ ಮೂಲಕವೇ ಮೇಘನಾ ರಾಜ್ ಮತ್ತೆ ನಟನೆಗೆ ಮರಳಿದರು. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದರು. ಸಸ್ಪೆನ್ಸ್ ಥ್ರಿಲ್ಲರ್ ಕತೆಯುಳ್ಳ ಈ ಸಿನಿಮಾ ಕೂಡ ಮುಗ್ಗರಿಸಿತು.


9) ಸ್ವಾತಿ ಮುತ್ತಿನ ಮಳೆಹನಿಯೇ: ಇದು ನಟಿ ರಮ್ಯಾ ನಿರ್ಮಾಣದ ಮೊಟ್ಟ ಮೊದಲ ಸಿನಿಮಾ. ರಾಜ್‌. ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ ಕನ್ನಡದ ಫ್ಲಾಪ್‌ ಸಿನಿಮಾ ಪಟ್ಟಿಗೆ ಸೇರಿತು.


10) ಗೌಳಿ: ಶ್ರೀನಗರ ಕಿಟ್ಟಿ ಬಹಳ ದಿನಗಳ ನಂತರ ನಟಿಸಿದ ಗೌಳಿ ಸಿನಿಮಾ ಕೂಡ ಫ್ಲಾಪ್‌ ಆಗಿದೆ. ಟೀಸರ್, ಟ್ರೈಲರ್‌ನಿಂದ ಸಿಕ್ಕಾಪಟ್ಟೆ ಕ್ರೇಜ್‌ ಕ್ರಿಯೇಟ್‌ ಮಾಡಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಡವಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.