BIKINI ಅವತಾರದಲ್ಲಿ ಕಾಣಿಸಿಕೊಂಡ ಅಜಯ್ ದೇವಗನ್ ಅತ್ತೆ ತನುಜಾ
76 ವರ್ಷದ ಖ್ಯಾತ ಬಾಲಿವುಡ್ ಹಿರಿಯ ನಟಿ ತನುಜಾ ತನ್ನ ಕುಟುಂಬದ ಇತರೆ ಸದಸ್ಯರ ಜೊತೆಗೆ ಫುಲ್ ಮಸ್ತಿ ಮೂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ
ನವದೆಹಲಿ: ಬಾಲಿವುಡ್ ನ ಖ್ಯಾತ ಹಿರಿಯ ನಟಿ ತನುಜಾ ಮತ್ತೊಮ್ಮೆ ಹೆಡ್ಲೈನ್ಸ್ ಸೃಷ್ಟಿಸಿದ್ದಾರೆ. ಸದ್ಯ ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅವರ ಅತ್ತೆ ಮತ್ತು ಖ್ಯಾತ ನಟಿ ಕಾಜೋಲ್ ಅವರ ತಾಯಿ ತನುಜಾ ಅವರ ಭಾವಚಿತ್ರವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಲಾರಂಭಿಸಿದೆ. ಈ ಭಾವಚಿತ್ರದಲ್ಲಿ 76 ವರ್ಷದ ತನುಜಾ ಬಿಕಿನಿ ಅವತಾರದಲ್ಲಿ ತನ್ನ ಕುಟುಂಬದ ಇತರೆ ಸದಸ್ಯರ ಜೊತೆ ಫುಲ್ ಮಸ್ತಿ ಮೂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ತಾಜಾ ಭಾವಚಿತ್ರಗಳಲ್ಲಿ ತನುಜಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತನುಜಾ ಅವರ ಈ ಭಾವಚಿತ್ರವನ್ನು ತನಿಷಾ ಮುಖರ್ಜಿ ಅವರು ತಮ್ಮ ಸಾಮಾಜಿಕ ಮಾಧ್ಯಮದ ವಾಲ್ ನಲ್ಲಿ ತೂಗುಹಾಕಿದ್ದಾರೆ. ಸದ್ಯ ಈ ಫೋಟೋ ಭಾರಿ ವೈರಲ್ ಆಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಅಂದರೆ ಫೆಬ್ರುವರಿ 2 ರಂದು ತನ್ನ ಕುಟುಂಬ ಸದಸ್ಯರ ಜೊತೆಗೆ ಕೂಡಿ ತನ್ನ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತನಿಷಾ ತನ್ನ ಕುಟುಂಬ ಸದಸ್ಯರಿಗಾಗಿ ಹಾಗೂ ತನ್ನ ಹತ್ತಿರದ ಸ್ನೇಹಿತರಿಗಾಗಿ ಪೂಲ್ ಪಾರ್ಟಿಯೊಂದನ್ನು ಆಯೋಜಿಸಿದ್ದರು. ತನಿಷಾ ಅವರ ಈ ಪಾರ್ಟಿಯಲ್ಲಿ ತನಿಷಾ ತಾಯಿ ತನುಜಾ ಕೂಡ ಸೂಪರ್ ಕೂಲ್ ಅವತಾರದಲ್ಲಿ ಸೆಲೆಬ್ರೇಶನ್ ಅನ್ನು ಎಂಜಾಯ್ ಮಾಡಿದ್ದಾರೆ. ಪುತ್ರಿ ತನಿಷಾ ಜೊತೆ ತನುಜಾ ಮೊನಾಕನಿ (ಬಿಕಿನಿಯ ಒಂದು ಪ್ರಕಾರ) ಧರಿಸಿ ಫೋಟೋಶೂಟ್ ಕೂಡ ನಡೆಸಿದ್ದಾರೆ.