ಬೆಂಗಳೂರು : ಇದುವರೆಗೂ ತಮ್ಮ ಸಿನಿಮಾಗಳು, ಡೈಲಾಗ್'ಗಳು, ಹಾಡುಗಳ ಮೂಲಕ ಸಿನಿಪ್ರಿಯರನ್ನು ಮೋಡಿ ಮಾಡಿದ್ದ ನಟ, ನಿರ್ದೇಶಕ, ಗೀತಾ ಸಾಹಿತ್ಯ ರಚನೆಕಾರ ಯೋಗರಾಜ್ ಭಟ್ ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಜನಪ್ರಿಯ ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ'ಗಳಲ್ಲಿ ಅಕೌಂಟ್ ಕ್ರಿಯೇಟ್ ಮಾಡಿರುವ ಭಟ್ರು ತಮ್ಮ ಸಿನಿಮಾಗಳನ್ನು, ಹಾಡುಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ತಮ್ಮ ಅಭಿಮಾನಿಗಳು ತಮ್ಮೊಂದಿಗೆ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಾಗಲೆಂದು ಈ ಹೆಜ್ಜೆ ಇಟ್ಟಿದ್ದಾರೆ. 


"ಈಗಾಗಲೇ ನನ್ನ ಹೆಸರಿನಲ್ಲಿ ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ'ಗಳಲ್ಲಿ ಅಕೌಂಟ್'ಗಳಿವೆ. ಆದರೆ ಅವೆಲ್ಲಾ ಇನ್ಮೇಲೆ ಯಾರಬಾರದು ಎಂದು ನನ್ನ ಸ್ನೇಹಿತರು ಹೇಳಿದ್ದರಿಂದ, ಅಫಿಶಿಯಲ್ ಆಗಿ ಅಕೌಂಟ್ ಓಪನ್ ಮಾಡಿದ್ದೇನೆ. ಕಾಲ್ ಯಾವರೀತಿ ಇರುತ್ತೂ ಹಾಗೇ ನಾವೂ ಇರಬೇಕು ಎಂದು ಎಲ್ಲ ಹೇಳ್ತಾರೆ. ಹಾಗಾಗಿ ನಾನೂ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪಂಚತಂತ್ರ ಎಂಬ ಸಿನಿಮಾ ಕೂಡ ಮಾಡುತ್ತಿದ್ದು, ಅದರ ಬಗ್ಗೆಯೂ ಮಾತನಾಡಬೇಕು ಅನ್ಕೊಂಡಿದೀನಿ. ಇಲ್ಲಿ ನಾನು ಇಷ್ಟಪಡುವವರು, ನನನ್ನು ಇಷ್ಟಪಡುವವರೆಲ್ಲರೂ ನಮಸ್ಕಾರ ಹೇಳಿ ಅಭಿಪ್ರಾಯ ಹಂಚಿಕೊಳ್ಳಬಹುದು" ಎಂದು ಯೋಗರಾಜ್ ಭಟ್ ಹೇಳಿದಾರೆ. 


"ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಎಲ್ಲದರಲ್ಲಿಯೂ ಮಾಹಿತಿ ಲೀಕ್ ಆಗ್ತಿದೆ. ಅದಕ್ಯಾಕೆ ಎಂಟ್ರಿ ಆಗ್ತೀರಾ ಅಂತ ಹೇಳಿದವರೂ ಇದ್ದಾರೆ. ಹಾಗೇ ಈ ಸಮಕಾಲಿನ ಜಗತ್ತಿನಲ್ಲಿ ಅದರ ಅಗತ್ಯ ಬಹಳಷ್ಟಿದೆ ಎಂದು ಹೇಳಿದ ಸ್ನೇಹಿತರೂ ಇದ್ದಾರೆ. ಆದರೆ ಯಾವುದೇ ಒಂದು ವಿಷಯಕ್ಕೆ ಪರ-ವಿರೋಧ ಇದ್ದೇ ಇರುತ್ತದೆ. ಆದರೆ, ಇದನ್ನು ಅರ್ಥಪೂರ್ಣವಾಗಿ ಉಪಯೋಗಿಸುವ ಉದ್ದೇಶದಿಂದ ಬಂದಿದ್ದೇನೆ" ಎಂದು ಭಟ್ರು ಹೇಳಿದ್ದಾರೆ.


ಇನ್ನು ಮುಂದೆ ಯೋಗರಾಜ್ ಭಟ್ ಅವರ ಬಗ್ಗೆ ತಿಳಿಯಲು, ಅವರೊಂದಿಗೆ ಮಾತನಾಡಲು ಅವರ  ಸೋಶಿಯಲ್ ಮೀಡಿಯಾ ಅಕೌಂಟ್ಗಳ ಮೂಲಕ ಅಭಿಮಾನಿಗಳು ಸಂಪರ್ಕಿಸಬಹುದು. 
ಫೇಸ್ಬುಕ್ : https://www.facebook.com/yogarajbhatofficial
ಟ್ವಿಟರ್ : https://www.twitter.com/yogarajofficial
ಇನ್ಸ್ಟಾಗ್ರಾಮ್ : https://www.instagram.com/yogarajbhatofficial


ಹಾಗಾದ್ರೆ ಯೋಗರಾಜ್ ಭಟ್ರು ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಹೇಳಿರುವ ಮಾತುಗಳನ್ನು ನೀವು ಸಹ ಕೇಳಿ...