Karimani malika ninalla : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಯು ಟರ್ನ್ 2 ಸಿನಿಮಾ ನಿರ್ದೇಶಕ ಚಂದ್ರು ಓಬಯ್ಯ ನಿರ್ದೇಶನದಲ್ಲಿ ಕರಿಮಣಿ ಮಾಲೀಕ ನೀನಲ್ಲ ಸಿನಿಮಾ ತೆರೆ ಕಾಣುತ್ತಿದೆ. 


ಇದನ್ನು ಓದಿ : ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕ : ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಬಾರಿಸಿದ ಟ್ರಾವಿಸ್


ಯು ಟರ್ನ್ 2, ರಾಮು ಅಂಡ್ ರಾಮು, ಪ್ಯಾಟಿ ಹುಡ್ಗೀ ಹಳ್ಳಿ ಲೈಫು ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿದ ಚಂದ್ರು ಓಬಯ್ಯ ಅವರು ಕರಿಮಣಿ ಮಾಲಿಕ ನೀನಲ್ಲ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 


ಇವರ ನಿರ್ದೇಶನದ ರಾಮು ಅಂಡ್ ರಾಮು ಸೆನ್ಸರ್ ಹಂತದಲ್ಲಿದ್ದು, ಪ್ಯಾಟಿ ಹುಡ್ಗೀ ಹಳ್ಳಿ ಲೈಫ್ ಚಿತ್ರೀಕರಣ ಹಂತದಲ್ಲಿದೆ.


ಸತ್ಯಕ್ಕೆ ಕರಿಮಣಿ ಮಾಲೀಕ ನೀನಲ್ಲ ಚಿತ್ರದಲ್ಲಿ ಎಳೆನೀರು ಮಾರುವ ಹುಡುಗ ಹಾಗೂ ಹೂ ಮಾರುವ ಹುಡುಗಿಯ ನಡುವಿನ ವಿಭಿನ್ನ ಪ್ರೇಮ ಕಥೆ ಇದಾಗಿದೆ. 


ಮೇ ತಿಂಗಳಲ್ಲಿ ಛತ್ರಿಕರಣ ಆರಂಭವಾಗಿ 40 ದಿನಗಳ ಕಾಲ ಬೆಂಗಳೂರು ಮೈಸೂರು ಮಡಿಕೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೂಟಿಂಗ್ ನಡೆಸುವ ಯೋಜನೆ ಇದೆ ಎಂದು ನಿರ್ದೇಶಕರು ತಿಳಿಸುತ್ತಾರೆ.


ಇದನ್ನು ಓದಿ : Priyamani : ಹೂವಿನಂತೆ ಮಂದಹಾಸ ಬೀರುವಲ್ಲಿ ಚಾರುಲತಾ, ಫೋಟೋಸ್ ವೈರಲ್


ಅಲ್ಲದೆ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ನಾಯಕಿಯಾಗಿ ರಮಿಕ ಸುತಾರ್ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.