ತನ್ನ Premium Content ಅನ್ನು ಎಲ್ಲರಿಗೂ ಉಚಿತವಾಗಿ ನೀಡಲು ಮುಂದಾದ YouTube
ಕರೋನಾ ಲಾಕ್ಡೌನ್ ಮಧ್ಯೆ ಜನರಿಗೆ ಮನರಂಜನಾ ಆಯ್ಕೆಗಳನ್ನು ನೀಡಲು, ಯೂಟ್ಯೂಬ್ ತನ್ನ ಪ್ರಿಮಿಯಂ ಕಂಟೆಂಟ್ ಅನ್ನು ಎಲ್ಲರಿಗೂ ಉಚಿತವಾಗಿ ನೀಡಲು ಮುಂದಾಗಿದೆ.
ನವದೆಹಲಿ: ಕರೋನಾ ಸಾಂಕ್ರಾಮಿಕದಿಂದಾಗಿ, ಯೂಟ್ಯೂಬ್ ತನ್ನ ಪ್ರಿಮಿಯಂ ಕಂಟೆಂಟ್ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಮುಂದಾಗಿದೆ. ಕಂಪನಿಯು ತನ್ನ ಡಜನ್‌ಗಿಂತಲೂ ಹೆಚ್ಚು ಯೂಟ್ಯೂಬ್ ಒರಿಜಿನಲ್ ಕಂಟೆಂಟ್ ಗೆ ಉಚಿತ ಪ್ರವೇಶವನ್ನು ನೀಡಿದೆ. ಎಸ್ಕೇಪ್ ದಿ ನೈಟ್, ಸ್ಟೆಪ್ ಅಪ್: ಹೈ ವಾಟರ್ ಮತ್ತು ಇಂಪಲ್ಸ್ ನಂತಹ ಪ್ರದರ್ಶನಗಳು ಇವುಗಳಲ್ಲಿ ಶಾಮೀಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಆನ್ಲೈನ್ ವರದಿಯೊಂದು ಬಹಿರಂಗಪಡಿಸಿದೆ.
ಇದಕ್ಕೂ ಮೊದಲು ಈ ಷೋಗಳು ಕೇವಲ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಮೀಸಲಾಗಿರಿಸಲಾಗಿತ್ತು. ಬುಧವಾರದಿಂದ ಕಂಪನಿ ತನ್ನ ಪ್ರಿಮಿಯಂ ಕಂಟೆಂಟ್ ಗಳಿಗೆ ಉಚಿತ ಅಕ್ಷಸ್ ನೀಡಲು ಆರಂಭಿಸಿದ್ದು, ಈ ಅವಕಾಶ ಸೀಮಿತ ಅವಧಿಗಾಗಿ ಮಾತ್ರ ನೀಡಲಾಗಿದೆ. ಆದರೆ ಇದಕ್ಕಾಗಿ ಯುಟ್ಯೂಬ್ ಯಾವುದೇ ನಿಶ್ಚಿತ ದಿನಾಂಕವನ್ನು ಪ್ರಕಟಿಸಿಲ್ಲ.
ಕೊರೊನಾ ಮಹಾಮಾರಿಯ ಹಿನ್ನೆಲೆ ಯುಟ್ಯೂಬ್ ಉಚಿತವಾಗಿ ನೀಡಲು ಉದ್ದೇಶಿಸಿರುವ ಶೋಗಳು ಯುಟ್ಯೂಬ್ ಪ್ರಿಮಿಯಂ ಚಂದಾದಾರಿಕೆಯ ಭಾಗವಾಗಿವೆ. ಭಾರತದಲ್ಲಿ ಯುಟ್ಯೂಬ್ ಪ್ರಿಮಿಯಂ ಸೇವೆಯ ಮಾಸಿಕ ಶುಲ್ಕ 129 ರೂ. ನಿಗದಿಪಡಿಸಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದಲ್ಲಿ ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಬಹುತೇಕ ಜನರು ತಮ್ಮ ತಮ್ಮ ಮನೆಯಲ್ಲಿ ಬಂಧಿಯಾಗಿದ್ದಾರೆ. ಇದೆ ಕಾರಣದಿಂದ ವಿಡಿಯೋ ಶೇರಿಂಗ್ ಕಂಪನಿಯಾಗಿರುವ ಯುಟ್ಯೂಬ್ ತನ್ನ ಪ್ರಿಮಿಯಂ ಕಂಟೆಂಟ್ ಬಳಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಿದೆ.
ಈ ಕುರಿತು Verietyಗೆ ಮಾಹಿತಿ ನೀಡಿರುವ ಯುಟ್ಯೂಬ್ ಒರಿಜಿನಲ್ ನ ಗ್ಲೋಬಲ್ ಮುಖ್ಯಸ್ಥ Susanne Daniels, ಯುಟ್ಯೂಬ್ ಒರಿಗಿನಲ್ಸ್ ನ ಫ್ಯಾನ್ ಫೆವರಿಟ್ ಕಲೆಕ್ಷನ್ ಇದೀಗ ಫ್ರೀ ಸ್ಟ್ರೀಮಿಂಗ್ ಗಾಗಿ ಲಭ್ಯವಾಗಿವೆ ಎಂದು ಹೇಳಿದ್ದಾರೆ.
ಉಚಿತವಾಗಿ ನೀಡಲಾಗಿರುವ ಯುಟ್ಯೂಬ್ ಒರಿಜಿನಲ್ ಕಂಟೆಂಟ್ ಪಟ್ಟಿ ಈ ಕೆಳಗಿನಂತಿದೆ
- Escape the Night
- Matpat's Game Lab
- Step Up: High Water
- Impulse
- Sherwood
- Sideswiped
- The Sidemen Show
- Foursome
- Me and My Grandma
- F2 Finding Football
- Overthinking with Kat & June
- The Fake Show
ಈ ಕುರಿತು ಪ್ರಕಟಗೊಂಡ ವರದಿಯ ಪ್ರಕಾರ ಯುಟ್ಯೂಬ್ ಮೂಲಕ ಹೇಳಲಾಗಿರುವ ಮತ್ತು ಈ ಮೇಲೆ ನಮೂದಿಸಲಾಗಿರುವ ಷೋಗಳ ಹೊರತಾಗಿ We Are Savvy ಹಾಗೂ Hyperlinked ಗಳಂತಹ ಮಕ್ಕಳ ಹಾಗೂ ಕೌಟುಂಬಿಕ ಒರಿಜಿನಲ್ ಷೋಗಳನ್ನೂ ಕೂಡ ಉಚಿತ ನೀಡಲಾಗುತ್ತಿದೆ ಎನ್ನಲಾಗಿದೆ.