Youtuber Shanmukh: ಯೂಟ್ಯೂಬ್ ವೀಡಿಯೊಗಳು ಮತ್ತು ಇನ್‌ಸ್ಟಾ ರೀಲ್‌ಗಳಿಂದ ಜನಪ್ರಿಯರಾಗಿರುವ ಷಣ್ಮುಖ್ ಜಸ್ವಂತ್ ಅವರ ಬಗ್ಗೆ ಯೂಟ್ಯೂಬ್‌ನಲ್ಲಿ ನಿಯಮಿತವಾಗಿ ವೀಡಿಯೊಗಳನ್ನು ನೋಡುವವರಿಗೆ ಮಾತ್ರ ಅವರ ಪರಿಚಯವಿದೆ..ಅವರ ಯೂಟ್ಯೂಬ್ ವೀಡಿಯೊಗಳು ಲಕ್ಷಾಂತರ ಅಭಿಮಾನಿಗಳ ಗಮನ ಸೆಳೆದಿದ್ದು.. ಇವರ ಚಾನೆಲ್‌  3 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.. ಇದಲ್ಲದೆ, Instagram ನಲ್ಲಿ ಈತನಿಗೆ 2 ದಶಲಕ್ಷಕ್ಕೂ ಹೆಚ್ಚು ಪಾಲೋವರ್ಸ್‌ ಇದ್ದಾರೆ.. ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಂದ ತಿಂಗಳಿಗೆ ರೂ. 10 ಲಕ್ಷದವರೆಗೂ ಗಳಿಸುತ್ತಾರೆ ಎಂದು ವರದಿಯಾಗಿದೆ.. 


COMMERCIAL BREAK
SCROLL TO CONTINUE READING

ಆದರೆ ಇದೀಗ ಈ ಖ್ಯಾತ ಯೂಟ್ಯೂಬರ್ ಮತ್ತೊಮ್ಮೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.. ಹೌದು ಪ್ರಕರಣವೊಂದರಲ್ಲಿ ಸಿಲುಕಿದ ಶಾನು ಸಹೋದರ ಸಂಪತ್ ವಿನಯ್ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ತನಿಖೆಗಾಗಿ ಪೊಲೀಸರು ತೆರಳಿದ್ದಾಗ ಷಣ್ಮುಖ ಜಸ್ವಂತ್ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾನೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿ.. ವಿಚಾರಣೆ ನಡೆಸಿದ್ದಾರೆ.. 


ಇದನ್ನೂ ಓದಿ-ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಟೀಕೆ! ಮೌನ ಮುರಿದ ಅಮಿತಾಬ್ ಬಚ್ಚನ್… ಪೋಸ್ಟ್ ವೈರಲ್


ಷಣ್ಮುಖ್ ಸಹೋದರ ಸಂಪತ್‌ ಈ ಹಿಂದೆ ವೈಜಾಗ್‌ ಮೂಲದ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ಆ ಯುವತಿ ವೈದ್ಯೆ.. ಆಕೆಯ ತಾಯಿ ಕ್ಯಾನ್ಸ್‌ರ್‌ನಿಂದ ಬಳಲುತ್ತಿರುವ ಕಾರಣ ಆಕೆ ತಮ್ಮ ಮದುವೆಯನ್ನು ಮುಂದೂಡಿದ್ದಳು.. ಅಲ್ಲದೇ ಇತ್ತೀಚೆಗೆ ಇವರಿಬ್ಬರ ಮದುವೆ ಮತ್ತೊಮ್ಮೆ ನಿಶ್ಚಯವಾಗಿತ್ತು.. ಆರು ದಿನಗಳಲ್ಲಿ ಮದುವೆ ನಡೆಯಬೇಕಿತ್ತು.. ಆದರೆ ಸಂಪತ್‌ ವಿನಯ್‌ ಆಕೆಗೆ ವಂಚಿಸಿ ಬೇರೆ ಯುವತಿಯನ್ನು ಮದುವೆಯಾಗಿದ್ದಾರೆ.. 


ಆತನಿಂದ ಮೋಸ ಹೋದ ಯುವತಿ ಹೈದ್ರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸ್‌ ತನಿಖೆಗಾಗಿ ಸಂಪತ್‌ ವಿನಯ್‌ ವಾಸವಾಗಿದ್ದ ಪ್ಲ್ಯಾಟ್‌ಗೆ ಹೋಗಿದ್ದಾರೆ.. ಆದರೆ ವಿಷಯ ತಿಳಿದ ಸಂಪತ್‌ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.. ನಂತರ ಪೊಲೀಸ್‌ ಮನೆಯಲ್ಲಿ ಹುಡುಕಾಡಿದಾಗ ಅವರಿಗೆ ಡ್ರಗ್ಸ್ ಪತ್ತೆಯಾಗಿದೆ..‌ ಅದೇ ವೇಳೆ ಮನೆಯಲ್ಲಿದ್ದ ಷಣ್ಮುಖ್ ಜಶ್ವಂತ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಕೆಲ ಹೊತ್ತಿನ ಬಳಿಕ ಅವರ ಸಹೋದರ ಸಂಪತ್‌ ವಿನಯ್‌ ಅವರನ್ನು ಪೊಲೀಸ್‌ ವಶಕ್ಕೆ ಪಡೆದಿದ್ದಾರೆ.. 


ಇದನ್ನೂ ಓದಿ-ನಟ ಶರಣ್ ಅವರಿಂದ ಬಿಡುಗಡೆಯಾಯಿತು "ಪುರುಷೋತ್ತಮನ‌ ಪ್ರಸಂಗ" ಚಿತ್ರದ ಟ್ರೇಲರ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.