Yuva Rajkumar Original Name: ಚಂದನವನದ ಹಲವಾರು ನಟರು ಚಿತ್ರರಂಗಕ್ಕೂ ಬರುವುದಕ್ಕೆ ಮುಂಚೆ ತಮ್ಮ ಹೆಸರನ್ನು ಬದಲಿಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ದೊಡ್ಮನೆಯ ಹೊಸ ಪ್ರತಿಭೆ ನಟ ಯುವ ರಾಜ್‌ಕುಮಾರ್‌ ಕೂಡ ಸೇರಿದ್ದಾರೆ. ಈ ನಟ ಕೂಡ ಸಿನಿಮಾರಂಗಕ್ಕೆ ಹೆಜ್ಜೆಹಾಕುವ  ಸಂದರ್ಭದಲ್ಲಿ ಹೆಸರು ಬದಲಿಸಿಕೊಂಡಿದ್ದಾರೆ. ನಟ ಯುವರಾಜ್‌ಕುಮಾರ್‌ ಮೊದಲ ಹೆಸರು ಬೇರೆನೆ ಇದೆ.


COMMERCIAL BREAK
SCROLL TO CONTINUE READING

ಹೌದು... ನಟ ಯುವ ರಾಜಕುಮಾರ್‌ ಮೊದಲ ಹೆಸರು ಗುರು ರಾಜಕುಮಾರ್. ದೊಡ್ಮನೆಯ ಚಿತ್ರರಂಗವರಾದ ಡಾ. ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸಹ ತಮ್ಮ ಹೆಸರು ಬದಲಿಸಿಕೊಂಡೇ ಎಂಟ್ರೀ ನೀಡಿದ್ದಾರೆ. ಮೊದಲು ಡಾ. ರಾಜ್‌ಕುಮಾರ್‌ ಸಿನಿಮಾರಂಗಕ್ಕೆ ಬರುವ ಮುನ್ನ ಇವರ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಆಗಿತ್ತು. ಬಳಿಕ ರಾಜ್‌ಕುಮಾರ್‌ ಆಗಿ ಅಭಿಮಾನಿಗಳ ಮನಗೆದ್ದ ಮೇಲೆ ಎಲ್ಲರೂ ಅಣ್ಣವರು ಅಂತಲೇ ಕರೆಯುತ್ತಾರೆ.


ಇದನ್ನೂ ಓದಿ: Allu Arjun : ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಅಲ್ಲು ಅರ್ಜುನ್..!‌


ಇನ್ನು ನಟ ಶಿವರಾಜ್‌ಕುಮಾರ್‌ ವಿಚಾರದಲ್ಲಿಯೂ ಅಷ್ಟೇನೆ. ಈ ನಟ ಚಿತ್ರರಂಗಕ್ಕೆ ಬರುವ ಮುಂಚೆ ನಾಗರಾಜು ಶಿವ ಪುಟ್ಟಸ್ವಾಮಿ ಅಂತ ಹೆಸರಿತ್ತು. ಸಿನಿಮಾರಂಗಕ್ಕೆ ಬಂದ್ಮೇಲೆ ಶಿವರಾಜ್ ಕುಮಾರ್ ಆದರು. ಪ್ರೇಕ್ಷಕರ ಮನಗೆದ್ದ ಮೇಲೆ ಈ ನಟ ಎಲ್ಲರ ಪ್ರೀತಿಯ ಶಿವಣ್ಣ ಆಗಿದ್ದಾರೆ. ಮತ್ತೆ ನಟ ಪುನೀತ್‌ ರಾಜ್‌ಕುಮಾರ್‌ ಕೂಡ ಬಾಲನಟರಾಗಿದ್ದಾಗ ಲೋಹಿತ್‌ ಅಂತ ಹೆಸರಿತ್ತು. ಶಿವಣ್ಣನವರು ತಮ್ಮನಿಗೆ ಅಪ್ಪು ಎಂದು ಕರೆಯುತ್ತಿದ್ದರು. ಹೀರೋ ಆಗುವ ಮುನ್ನ ಪುನೀತ್ ರಾಜಕುಮಾರ್ ಆಗಿ ಹೆಸರು ಬದಲಿಸಿಕೊಂಡರು.


ಇನ್ನೂ ನಟ ಯುವ ರಾಜ್‌ಕುಮಾರ್‌  ಕೂಡ ಚಿತ್ರರಂಗಕ್ಕೆ ಯುವ ಸಿನಿಮಾದ ಮೂಲಕ ಪದಾರ್ಪಣೆ ಮಾಡುತ್ತಾಯಿದ್ದು, ಈ ನಟ ಇದೀಗ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಸ್ಥಾನ ತುಂಬಲು ಸಜ್ಜಾಗಿದ್ದಾರೆ. ಇನ್ನೂ ದೊಡ್ಮನೆ ಫ್ಯಾನ್ಸ್, ಶಿವಣ್ಣನಾ ಅಭಿಮಾನಿಗಳು ಮತ್ತು ಅಪ್ಪು ಫ್ಯಾನ್ಸ್ ಎಲ್ಲರೂ ಯುವ ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ಯುವ ರಾಜಕುಮಾರ ಅಬ್ಬರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.