Yuva movie release date :  ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ಆನಂದರಾಮ್ ಯುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ  ಚಿತ್ರದಲ್ಲಿ ಯುವ ರಾಜ್‌ಕುಮಾರ್ ಮತ್ತು ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಕನ್ನಡ ಚಿತ್ರರಂಗಕ್ಕೆ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವರಾಜಕುಮಾರ್ ಅವರನ್ನು ಪರಿಚಯಿಸಿ ಕೊಟ್ಟಿದ್ದು "ಯುವ"  ಸಿನಿಮಾ.  ಈ ಸಿನಿಮಾ ಕಳೆದ ವರ್ಷ ಡಿಸೆಂಬರ್ ೨೨ ರಂದು ತೆರೆ ಕಾಣಬೇಕಿತ್ತು ಆದರೆ ಅದೇ ದಿನ ಹೊಂಬಾಳೆ ಸಂಸ್ಥೆಯ "ಸಲಾರ್" ಬಿಡುಗಡೆಗೆ ಸಿದ್ದವಾಗಿದ್ದರಿಂದ "ಯುವ" ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಈ ಕುರಿತು ಯುವರಾಜಕುಮಾರ್ ಅವರು ಅಪಡೇಟ್ ಒಂದನ್ನು ನೀಡಿದ್ದು , "ಯುವ" ಸಿನಿಮಾ ಮಾರ್ಚ್ ೨೮ ರಂದು ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. 


ಇದನ್ನು ಓದಿ : ಭಕ್ಷಕ್ ವಿಮರ್ಶೆ : ನಿಂದನೆ ಮತ್ತು ಪ್ರಚೋದನಾಕಾರಿ ಬಿರುಸಿನ ಕಥೆಯನ್ನು ನೀಡಿದ ಭೂಮಿ ಪೆಡ್ನೇಕರ್


ಈಗಾಗಲೇ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ತುಂಬಾ ಸದ್ದು ಮಾಡಿತ್ತು. ಟೀಸರ್ ಮೂಲಕವೇ ಜನಮನ ಸೆಳೆದ ಯುವರಾಜಕುಮಾರ್ ಅವರ ಈ ಸಿನಿಮಾ ಜನರು ಕಾತುರದಿಂದ ಕಾಯುತ್ತಿದ್ದಾರೆ. ಇದೇ ಸಂಧರ್ಭದಲ್ಲಿ ಸ್ವತಃ ಯುವರಾಜಕುಮಾರ್ ಈ ಕುರಿತು ಮಾಹಿತಿಯನ್ನು ನೀಡಿದ್ದು ಇನ್ನಷ್ಟು ಸಂತಸವನ್ನು ತಂದಿದೆ. ಸದ್ಯಕ್ಕೆ ಇವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. 


ಇದನ್ನು ಓದಿ : ರಾಮ್ ಚರಣ್ ಸಿನಿಮಾದಿಂದ ವಿಶೇಷ ಮನ್ನಣೆ..ಸ್ಟಾರ್ ಹೀರೋ ಜೊತೆ ಮದುವೆ..500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟ ಈಕೆ!


ಇನ್ನೂ ೩ ದಿನಗಳ ಕಾಲ ನಡೆಯಲಿದೆ ಅದಾದ ಬಳಿಕ ಬೇರೆ ಅಪಡೇಟ್ಸ್ ನೀಡುತ್ತೇವೆ ಮತ್ತು ಒಟ್ನಲ್ಲಿ ಮಾರ್ಚ್ ೨೮ಕ್ಕೆ ಸಿನಿಮಾ ರಿಲೀಸ್ ಆಗೇ ಆಗುತ್ತದೆ ಎಂದು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.