Yuva: ಭಾರಿ ಮೊತ್ತಕ್ಕೆ ʻಯುವʼ ಸ್ಯಾಟಲೈಟ್ ರೈಟ್ಸ್ ಮಾರಾಟ!
Yuva Update: ಚಂದನವನದ ಬಹುನಿರೀಕ್ಷಿತ ಯುವ ಸಿನಿಮಾದ ಸ್ಯಾಡಲೈಟ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂಬ ವಿಷಯದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Yuva Satellite Right: ಸಾಂಡಲ್‌ವುಡ್ ಅಂಗಳದಲ್ಲಿ ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಅಭಿನಯದ ʻಯುವʼ ಚಿತ್ರದ ಅರ್ಭಟ ಈಗಾಗಲೇ ಶುರುವಾಗಿದೆ. ಮೊನ್ನೆ ಮೊನ್ನೆಯಷ್ಟೇ ಈ ಚಿತ್ರದ ಮೊದಲ ಹಾಡು ಚಾಮರಾಜನಗರದಲ್ಲಿ ರಿಲೀಸ್ ಆಗಿದ್ದು, ಕೇವಲ ಎರಡು ದಿನಗಳಲ್ಲಿಯೇ ಮೂರು ಮಿಲಿಯನ್‌ಗೂ ಹೆಚು ವೀವ್ಸ್ ಪಡೆದು ದಾಖಲೆ ಬರೆದಿದೆ. ಈ ಸಿನಿಮಾದ ಝಲಕ್ ಹಾಗೂ ಹಾಡು ಪ್ರೇಕ್ಷಕರನ್ನು ಗೆದ್ದಿದೆ.
ಯುವ ಚಿತ್ರದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದು, ಈ ಸಿನಿಮಾ ಇದೇ ಮಾರ್ಚ್ 28ಕ್ಕೆ ತೆರೆಗೆ ಅಪ್ಪಳಿಸಲಿದೆ. ಇದಕ್ಕೂ ಮುನ್ನ ಚಿತ್ರದ ಇನ್ನುಳಿದ ಹಾಡುಗಳು ರಿಲೀಸ್ ಆಗುವುದು ಬಾಕಿ ಉಳಿದಿದ್ದು, ಹೀಗಿರುವಾಗಲೇ 'ಯುವ' ಸಿನಿಮಾ ಸ್ಯಾಟಲೈಟ್ಸ್ ರೈಟ್ಸ್ ಯಾರಾ ಪಾಲಾಯ್ತು? ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ ? ಸ್ಮಾಲ್ ಸ್ಕ್ರೀನ್‌ಗೆ ಯಾವಾಗ ಬರುತ್ತದೆನ್ನುವ ಪ್ರಶ್ನೆಗಳು ಬಗ್ಗೆ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಇದನ್ನೂ ಓದಿ: ದೀಪಿಕಾ - ರಣವೀರ್ ಮಗು ಜನಿಸುತ್ತಲೇ ಎಷ್ಟು ಕೋಟಿಯ ಆಸ್ತಿಗೆ ಒಡೆಯನಾಗುವುದು ಗೊತ್ತೇ!?
ಹೌದು.. ಮೊದಲೆಲ್ಲಾ ಸಿನಿಮಾ ಥ್ರಿಯೇಟ್ರಿಕಲ್ ರೈಟ್ಸ್, ಡಬ್ಬಿಂಗ್, ರೀಮೆಕ್ಸ್ ರೈಟ್ಸ್, ಆಡಿಯೋ ರೈಟ್ಸ್‌ಗಳಿಂದ ಹಣ ಕಮಾಲ್ ಮಾಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರು ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಅಂತ ದೊಡ್ಡಮಟ್ಟದಲ್ಲಿ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಹೊಂಬಾಳೆ ಸಂಸ್ಥೆಯ ಬಹುತೇಕ ಚಿತ್ರಗಳನ್ನು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. ಅದರಂತೆ ಯುವ ಚಿತ್ರ ಕೂಡ ಅಮೇಜಾನ್ ಪಾಲಾಗಬಹುದು ಎನ್ನಲಾಗಿದೆ.
ಯುವ ಸಿನಿಮಾ ಇತರರ ಸಿನಿಮಾಗಳಂತೆ ರಿಲೀಸ್ ಆದ ಏಳು ವಾರಗಳ ಬಳಿಕ ಓಟಿಟಿ ಸ್ಟ್ರೀಮಿಂಗ್ ಆಗುವಂತೆ, ಈ ಚಿತ್ರಕ್ಕೂ ಸಹ ಅದೇ ರೀತಿಯ ಒಪ್ಪಂದ ಆಗಿರುವ ಸಾಧ್ಯತೆಯಿದೆ. ಇನ್ನೂ ಸ್ಯಾಡಲೆಐಟ್ ರೈಟ್ಸ್ ವಿಚಾರಕ್ಕೆ ಬರುವುದಾದರೇ ಈ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯ ಪಾಲಾಗಿದೆ. ಈ ಹಿಂದೆ ಈ ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋ ಸಂಸ್ಥೆ ಅಂದಾಜು 3 ಕೋಟಿ ರೂ.ಗೆ ಖರೀದಿಸಿದೆ ಎಂಬ ಗುಸುಗುಸು ಕೇಳಿ ಬಂದಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.