ನಿಜ ಕಣ್ರೀ.. ಡಿ ಬಾಸ್ ದರ್ಶನ್ ಹೇಳಿದಂತೆ ಜಮೀರ್ ಅಹಮದ್ ಅವರ ಪುತ್ರನ ನಟನೆ ಸಖತ್ ಕಿಕ್ಕೇರಿಸಿಬಿಟ್ಟಿದೆ. ಆಕ್ಟಿಂಗ್ ಬಗ್ಗೆ ಏನೂ ಗೊತ್ತಿಲ್ಲದ Zaid Khan ಸೂಪರ್ ಆಗಿ ನಟನೆ ಕಲಿತು ಯಾರಿಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಮೊದಲ ಸಿನಿಮಾದಲ್ಲಿ ಮಿಂಚಿದ್ದಾರೆ.ಪಟಪಟ ಅಂತ ಪಂಚಿಂಗ್ ಡೈಲಾಗ್ ಹೇಳೋ ಸಿದ್ದಾರ್ಥ್ (Zaid khan) ಎಂಟ್ರಿ ಮಾತ್ರ ಸಿನಿಮಾದಲ್ಲಿ ಜಬರ್ದಸ್ತ್ ಆಗಿದೆ. ಹೀರೋಯಿನ್ ಧನಿ (ಸೋನಲ್) ಯನ್ನ ತಮಾಷೆಗೆ ಪಟಾಯಿಸಲು ಮಾಡಿದ ತುಂಟಾಟ ಹೀರೋ Zaid ಗೆ ದೊಡ್ಡ ತಲೆನೋವಾಗಿ ಕಾಡುತ್ತೆ. ತಂದೆಯ (ದೇವರಾಜ್ )ಮಾತಿನಂತೆ ಆ ಹುಡುಗಿಯನ್ನ ಬೆಂಗಳೂರರಿಂದ ಬನಾರಸ್ ಗೆ ಕ್ಷಮೆ ಕೇಳಲು ಹೊರಟೆಬಿಡ್ತಾನೆ ಸಿದ್ದಾರ್ಥ್ (Zaid Khan). ಆಮೇಲೆ ನಿಜವಾದ ಕಥೆ ಏನೂ ಅನ್ನೋದು ಎಳೆಎಳೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗೊಂಡ ಕುರುಬ ಮತ್ತು ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮನವಿ


ಇಡೀ ಬನಾರಸ್ ನ ಕುಳಿತಲ್ಲೇ ನೋಡಿ ಖುಷಿಪಡುವಂತಹ ಅದ್ಭುತ ಅನುಭವ ನಿಮ್ಗೆ ಈ ಸಿನಿಮಾ ಮೂಲಕ ಸಿಗುತ್ತೆ


ನಾನು ಬಂದಿರೋದು ರಿಸರ್ಚ್ ಮಾಡೋಕೆ,ರೋಮ್ಯಾನ್ಸ್ ಮಾಡೋಕೆ ಅಲ್ಲ ಅನ್ನೋ ಡೈಲಾಗ್ ಮಾತ್ರ ನಗುವಿನ ಅಲೆಯಲ್ಲಿ ತೇಲುವಂತೆ ಮಾಡುತ್ತೆ.ಹುಡುಗಿ ಪಟಾಯಿಸೋದು ಹೇಗೆ ಅಂತ ಬನಾರಸ್  ಸಿನಿಮಾದಲ್ಲಿ  ಜಮೀರ್ ಪುತ್ರ ತುಂಬಾ ಫನ್ ಆಗಿ ಹೇಳಿಕೊಡುತ್ತಾರೆ. ಆಕ್ಟಿಂಗ್,ಫೈಟಿಂಗ್,ಡ್ಯಾನ್ಸಿಂಗ್ ಎಲ್ಲದರಲ್ಲೂ ಅಭಿಮಾನಿಗಳು Zaid khan ಗೆ ಫುಲ್ ಮಾರ್ಕ್ಸ್ ಕೊಡೋದು ಕನ್ಫರ್ಮ್. ಈಗಾಗಲೇ ಜನಮನ ಗೆದ್ದಿರೋ ಮಾಯಗಂಗೆ ಹಾಡನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋ ಆನಂದವೇ ಭರ್ಜರಿ ಥ್ರಿಲ್ ಕೊಡುತ್ತೆ.


ಇದನ್ನೂ ಓದಿ: "ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು"


Zaid Khan ತಮ್ಮ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಬನಾರಸ್ ಸಿನಿಮಾದಲ್ಲಿ ಎಲ್ಲಾ ಇದೆ.ಹೊಟ್ಟೆತುಂಬಾ ನಗಬಹುದು,ಅಳಬಹುದು ಇಲ್ಲಿ ಎಲ್ಲವೂ ಇದೆ.ಡೈರೆಕ್ಟರ್ ಸೃಷ್ಟಿಸಿರೋ ಅದ್ಭುತ ಕಥೆಗೆ ತಮ್ಮ ಜೀವವನ್ನೇ ತುಂಬಿದ್ದಾರೆ Zaid ಖಾನ್. ಬನಾರಸ್ ಗೆ ಹೋಗೋ ತನಕ ಸಿದ್ದಾರ್ಥ್ (Zaid Khan) ಗೆ ಧನಿ ಮೇಲೆ ಲವ್ ಆಗಿರೋದಿಲ್ಲ. ಇಲ್ಲಿ ನೇರವಾಗಿ ಹೀರೋಯಿನ್ ಹೀರೋನ ಪ್ರಪೋಸ್ ಮಾಡ್ತಾಳೆ.ಆಮೇಲೆ ಸಿನಿಮಾದಲ್ಲಿ ಆಗೋ ಭಯಂಕರ ಮತ್ತು ಭಯಾನಕ ಟ್ವಿಸ್ಟ್ ಆಂಡ್ ಟರ್ನ್ ಏನು ಅಂತ ನೀವು ಥೀಯೇಟರ್ ಗೆ ಬಂದು ನೋಡಬೇಕು. ಸೆಕೆಂಡ್ ಹಾಫ್ ಮಾತ್ರ ನಿಮ್ಮನ್ನ ಸೀಟ್ ಅಂಚಿನಲ್ಲಿ ಸ್ಟೋರಿ ಕೂರುವಂತೆ ಮಾಡುತ್ತೆ.ಆದ್ರೆ ನೀವು ಕೊಡೋ ಪೈಸೆಗೆ ಮಾತ್ರ ಪಕ್ಕಾ ಮನರಂಜನೆ ಸಿಗೋದ್ರಲ್ಲಿ ಡೌಟ್ ಇಲ್ಲ.ಸಿನಿಮಾಟೋಗ್ರಫಿ ಮಾತ್ರ ಆಹಾ ಅನ್ನುವಂತಿದೆ. ಬನಾರಸ್ ಸಿನಿಮಾದಲ್ಲಿ ಬೋರು ಅನ್ನೋ ಪದಕ್ಕೆ ಜಾಗವೇ ಇಲ್ಲ ಬಿಡಿ.


ಡೈರೆಕ್ಟರ್ ಜಯತೀರ್ಥರ ಶ್ರಮ ಮಾತ್ರ ಇಲ್ಲಿ ಎದ್ದು ಕಾಣುತ್ತೆ. ಸೋ ಇನ್ಯಾಕೆ ತಡ ಬೇಗ ಬೇಗ ಬನಾರಸ್ ಸಿನಿಮಾ ನೋಡಿ ಥ್ರಿಲ್ ಆಗಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.