ನವದೆಹಲಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ವಿಚಾರಣೆಯಲ್ಲಿ ಜಯಾ ಶಾಹ್  ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ವಿಚಾರನೆಯ ವೇಳೆ ಅಧಿಕಾರಿಗಳು ಜಯಾಗೆ ಅವಳ ಚಾಟ್ ತೋರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರುವ ಜಯಾ ಶಾಹ್, ನಟಿ ಶ್ರದ್ಧಾ ಕಪೂರ್ (Shraddha Kapoor) ಅವರಿಗೆ ತಾನು CBD ಎಣ್ಣೆಯ ವ್ಯವಸ್ಥೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Sushant Case:ಶೀಘ್ರದಲ್ಲಿಯೇ NCB ಯಿಂದ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕರೊಬ್ಬರ ವಿಚಾರಣೆ ಸಾಧ್ಯತೆ


ಈ CBD ಎಣ್ಣೆಯನ್ನು ಜಯಾ, ಶ್ರದ್ಧಾಗಾಗಿ ಆನ್ಲೈನ್ ನಲ್ಲಿ ತರಿಸಿರುವುದಾಗಿ ಹೇಳಿದ್ದಾಳೆ. ನಮ್ರತಾ ಶಿರೋಡ್ಕರ್ ಜೊತೆಗೆ ನಡೆಸಿರುವ ಚಾಟ್ ಕುರಿತು ಹೇಳಿಕೆ ನೀಡಿರುವ ಜಯಾ, ಚಾಟ್ ಅವಳೇ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ ಆದರೆ, ಆ ಚಾಟ್ ಕುರಿತು ತಮಗೆ ಹೆಚ್ಚಿನ ಸಂಗತಿಗಳು ನೆನಪಿಲ್ಲ ಎಂದಿದ್ದಾಳೆ. ಇದಲ್ಲದೆ ತಾವು ಸುಶಾಂತ್ ಸಿಂಗ್ ರಾಜ್ಪುತ್, ರಿಯಾ ಚಕ್ರವರ್ತಿ, ಚಿತ್ರ ನಿರ್ಮಾಪಕ ಮಧು ಮಾಂಟೆನಾ ವರ್ಮಾ ಹಾಗೂ ಸ್ವಂತ ಬಳಕೆಗಾಗಿ ಕೂಡ ತಾವು CBD ಆಯಿಲ್ ತರಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದರೆ, ಡ್ರಗ್ಸ್ ಗಾಗಿ ಇದುವರೆಗೆ ತಾವು ಯಾವುದೇ ಪೆಡ್ಲರ್ ಗಳ ಜೊತೆಗೆ ಸಂಪರ್ಕ ಹೊಂದಿರುವ ಸಂಗತಿಯನ್ನು ಜಯಾ ನಿರಾಕರಿಸಿದ್ದಾಳೆ. ನಶೆ ಮಾಡುವ ಈ ಸರಕುಗಳ ವ್ಯವಸ್ಥೆಯನ್ನು ತಾವು ಆನ್ಲೈನ್ ಮಾಡಿರುವುದಾಗಿ ಜಯಾ ಹೇಳಿದ್ದಾಳೆ.


ಇದನ್ನು ಓದಿ- Bollywood Drugs Case: Sara ಹಾಗೂ ಶ್ರದ್ಧಾಗೆ ಸಮನ್ಸ್ ನೀಡಲಿದೆ NCB


ಭಾರತದಲ್ಲಿ CBD ಆಯಿಲ್ ಬಳಕೆಯ ಮೇಲೆ ನಿಷೇಧವಿದೆ
ಬಾಲಿವುಡ್ ಡ್ರಗ್ಸ್ ಕನೆಕ್ಷನ್ ತನಿಖೆಯಲ್ಲಿ ನಿತ್ಯ ಹೊಸ ಹೊಸ ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ವೀಡ್ ಹಾಗೂ ಇತರೆ ಡ್ರಗ್ಸ್ ಗಳ ಬಳಿಕ ಇದೀಗ NCB ವಿಚಾರಣೆಯಲ್ಲಿ ಖ್ಯಾತನಾಮರು ನಶೆ ಮಾಡಲು CBD ಆಯಿಲ್ ಬಳಕೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. CBD ಡ್ರಗ್ಸ್ ಗೆ ಭಾರತದಲ್ಲಿ ನಿಷೇಧ ವಿಧಿಸಲಾಗಿದೆ.