ಪಟಾಕಿ ಪೋರಿ ದಿಯಾ ಹೆಗ್ಡೆ ʼಸರಿಗಮಪʼ ಮುಗಿದಿದ್ದಕ್ಕೆ ಏನಂದ್ಳು ಗೋತ್ತಾ..!
Diya Hegde saregamapa : ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಶೋ ಅಂತ್ಯ ಕಂಡಿದೆ. ದಿಯಾ ಹೆಗ್ಡೆ ಫಿನಾಲೆವರೆಗು ಶೋನಲ್ಲಿ ಇದ್ದು ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಿದರು. ಸರಿಗಮಪ ಶೋನಲ್ಲಿ ವೀಕ್ಷಕರಿಗೆ ಪಟಪಟ ಅಂತ ಮಾತನಾಡಿ ಮರಳು ಮಾಡುತ್ತಿದ್ದ ದಿಯಾ ಹೆಗ್ಡೆಗೆ, ಹಾಡು ಹಾಡುವುದರ ಜೊತೆಗೆ ಒಂದು ಸ್ಪೆಷಲ್ ಪಫಾರ್ಮೆನ್ಸ್ ಕೊಡೋದಕ್ಕೆ ಒಳ್ಳೆಯ ಅವಕಾಶ ಸಿಕ್ಕಿತ್ತು.
Diya Hegde : ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ʼ ಶೋ ಅದ್ಭುತವಾಗಿ ಮೂಡಿ ಬಂದಿತ್ತು. ಸರಿಗಮಪ ಲಿಟಲ್ ಚಾಂಪ್ಸ್ ಶೋ ಸಾಕಷ್ಟು ಪುಟ್ಟ ಮಕ್ಕಳಿಗೆ ಹಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಈ ಶೋನಲ್ಲಿ ಆಡಿಷನ್ ಅಲ್ಲಿ ಸೆಲೆಕ್ಟ್ ಆದ ಮಕ್ಕಳಲ್ಲಿ ದಿಯಾ ಹೆಗ್ಡೆ ಎಲ್ಲರ ಗಮನ ಸೆಳೆದಿದ್ದಾಳೆ. ಇವಳು ಸರಿಗಮಪ ಲಿಟಲ್ ಚಾಂಪ್ಸ್‌ನ ಸ್ಪರ್ಧಿ ಅಲ್ಲ, ವಿಶೇಷ ಸ್ಪರ್ಧಿ ಅಂದ್ರೆ Special Entertainer ಆಗಿ ಸರಿಗಮಪ ವೇದಿಕೆಗೆ ಬಂದಿದ್ದಳು. ಅದ್ಭುತವಾಗಿ ಹಾಡುವುದರ ಜೊತೆಗೆ, ತನ್ನ ಮಾತಿನ ಮೂಲಕ ಎಲ್ಲರನ್ನು ಮೋಡಿ ಮಾಡಿದ್ದಾಳೆ ದಿಯಾ.
ಇದೀಗ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಶೋ ಅಂತ್ಯ ಕಂಡಿದೆ. ದಿಯಾ ಹೆಗ್ಡೆ ಫಿನಾಲೆವರೆಗು ಶೋನಲ್ಲಿ ಇದ್ದು ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಿದರು. ಸರಿಗಮಪ ಶೋನಲ್ಲಿ ವೀಕ್ಷಕರಿಗೆ ಪಟಪಟ ಅಂತ ಮಾತನಾಡಿ ಮರಳು ಮಾಡುತ್ತಿದ್ದ ದಿಯಾ ಹೆಗ್ಡೆಗೆ, ಹಾಡು ಹಾಡುವುದರ ಜೊತೆಗೆ ಒಂದು ಸ್ಪೆಷಲ್ ಪಫಾರ್ಮೆನ್ಸ್ ಕೊಡೋದಕ್ಕೆ ಒಳ್ಳೆಯ ಅವಕಾಶ ಸಿಕ್ಕಿತ್ತು. ಮೆಘಾ ಆಡಿಷನ್‌ನಿಂದ ಫಿನಾಲೆವರೆಗು ಪ್ರತಿಯೊಬ್ಬರು ತುಂಬಾ ಪ್ರೀತಿ ತೋರಿಸಿದ್ದಾರೆ, ಬಹಳ ಖುಷಿಯಾಗಿದೆ. ಪ್ರತಿಯೊಬ್ಬರು ನನ್ನ ಸ್ನೇಹಿತರು ಎಂದು ಹೇಳಿದರು. ದಿಯಾ ಹೆಸರಿನ ಫುಲ್ ಫಾರ್ಮ್ ಕೂಡ ಹೇಳಿದ್ದ ದಿಯಾ. ಅನುಶ್ರೀನೇ ಸೊಸೆ ಅಂತಾ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ.
ಇದನ್ನೂ ಓದಿ: ವಿಭಿನ್ನ ಕಥಾಹಂದರ ಹೊಂದಿರುವ "ಕ್ರೀಂ" ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ
ಸರಿಗಮಪ ವೇದಿಕೆಗೆ ಬಂದ್ದಿದ್ದು ತುಂಬಾನೇ ಹೆಮ್ಮೆ ಅನಿಸುತ್ತೆ, ಜೀ ತಂಡ ತುಂಬಾ ಚೆನ್ನಾಗಿದೆ ಈ ಶೋಗೆ ಬಂದ ನಂತರ ಬಹಳಷ್ಟು ವಿಚಾರಗಳನ್ನ ಕಲಿತಿದ್ದೀನಿ. U.K.G ಯಲ್ಲಿ ಇರಬೇಕಾದ್ರೆನೆ ಅಮ್ಮ ಮ್ಯೂಸಿಕ್ ಕ್ಲಾಸ್‌ಗೆ ಹಾಕಿದ್ರು, ಚಿಕ್ಕ ವಯಸ್ಸಿನಿಂದಲೂ ಸಂಗೀತ ಅಂದ್ರೆ ಪಂಚ ಪ್ರಾಣ, ಸರಿಗಮಪ ಆಡಿಷನ್‌ಗೆ ಬಂದಾಗ ಸೆಲೆಕ್ಟ್ ಆಗ್ತೀನಿ ಅಂತಾ ಊಹಿಸಿಕೊಂಡಿರಲಿಲ್ಲಾ ಆದರೆ ಇಲ್ಲಿವರೆಗಿನ ಜರ್ನಿ ಅದ್ಭುತವಾಗಿತ್ತು ಎಂದು ದಿಯಾ ಹೇಳಿದಳು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.