Weekend With Ramesh : ಜೀ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ..! ಫಸ್ಟ್ ಗೆಸ್ಟ್ ಯಾರು..?
ರಾಜ್ಯದ ಜನ ಮನಗೆದ್ದ ಜೀ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಸಾಧಕರ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮತ್ತೇ ಜೀ ವಾಹಿನಿ ಮಾಡಲಿದೆ. ಇನ್ಮೇಲೆ ವೀಕೆಂಡ್ ಟೈಮ್‌ನಲ್ಲಿ ಯಾವದೇ ಪ್ಲಾನ್ ಇಟ್ಟುಕೊಳ್ಬೇಡಿ.. ಜಸ್ಟ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿ.. ಎಂಜಾಯ್ ಮಾಡಿ.
Weekend With Ramesh Season 5 : ರಾಜ್ಯದ ಜನ ಮನಗೆದ್ದ ಜೀ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಸಾಧಕರ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮತ್ತೇ ಜೀ ವಾಹಿನಿ ಮಾಡಲಿದೆ. ಇನ್ಮೇಲೆ ವೀಕೆಂಡ್ ಟೈಮ್‌ನಲ್ಲಿ ಯಾವದೇ ಪ್ಲಾನ್ ಇಟ್ಟುಕೊಳ್ಬೇಡಿ.. ಜಸ್ಟ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿ.. ಎಂಜಾಯ್ ಮಾಡಿ.
ಕನ್ನಡ ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡ ಜೀ ವಾಹಿನಿಯ ಹೆಮ್ಮೆಯ ಟಾಕ್ ಶೋ ʼವೀಕೆಂಡ್ ವಿತ್ ರಮೇಶ್ʼ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಮತ್ತೇ ಕಿರುತೆರೆ ಲೋಕದಲ್ಲಿ ಸಾಧಕರನ್ನು ಪರಿಚಯಿಸುವ ರಾಯಭಾರಿ ಜೀ ವಾಹಿನಿ ವೀಕೆಂಡ್ ವಿತ್ ರಮೇಶ್ ಸೀಸನ್ 5ಯನ್ನು ಪ್ರಾರಂಭಿಸಲಿದೆ. ಈ ಕುರಿತು ಈಗಾಗಲೇ ಪ್ರಮೋ ಬಿಡುಗಡೆ ಮಾಡಲಾಗಿದೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಬರ್ತೀದೆ ಅಂತ ತಿಳಿದ ನೆಟ್ಟಿಗರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಪ್ರಾರಂಭಿಸಿದ್ದಾರೆ. ತಮ್ಮ ತಮ್ಮ ನೆಚ್ಚಿನ ತಾರೆಯನ್ನು ಸಾಧಕರ ಖುರ್ಚಿಯ ಮೇಲೆ ನೋಡಲು ಕಾತುರರಾಗಿದ್ದಾರೆ. ಈ ನಿಟ್ಟಿನಲ್ಲಿ, ಕಾಂತಾರ ಯಶಸ್ಸಿನಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಹೆಸರು ಮುಂಚುಣಿಯಲ್ಲಿದೆ. ಅಲ್ಲದೆ, ಡಾಲಿ ಧನಂಜಯ್, ಹೆಸರು ಸಹ ಕೇಳಿ ಬರುತ್ತಿವೆ.
ಇನ್ನು ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಪ್ರೋಮೋದಲ್ಲಿ ರಮೇಶ್ ವರ ಜೊತೆ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಕೂಡ ಕಾಣಿಸಿಕೊಂಡಿದ್ದಾರೆ. ಪ್ಯಾರೀಸ್ ಟವರ್, ಕಾಶ್ಮೀರ ಚಳಿ, ಊಟಿ ಕೊಡೇಕೆನಲ್‌ಗಾದ್ರೂ ಕರ್ಕೊಂಡು ಹೋಗಿ ಎನ್ನುವ ರಾಧಿಕಾ ಪ್ರಶ್ನೆಗಳಿಗೆ ರಮೇಶ್ ಸ್ಮೈಲ್ ಮಾಡಿ ಟೀ ಕಪ್‌ನಿಂದ ಚೀಯರ್ಸ್ ಹೇಳುವ ಮೂಲಕ ವೀಕೆಂಡ್ ವಿತ್ ರಮೇಶ್ ಮರಳಿ ಬರಲಿದೆ ಎನ್ನುವ ಗುಟ್ಟು ರಟ್ಟು ಮಾಡಿದ್ದಾರೆ. ಆದ್ರೆ ದಿನಾಂಕ್ ಮತ್ತು ಸಮಯಕ್ಕೆ ನೀವು ಇನ್ನು ಸ್ವಲ್ಪ ದಿನ ಕಾಯಲೇಬೇಕು.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.