Sushant Singh Rajput ತನ್ನ ವೃತ್ತಿ ಜೀವನದಲ್ಲಿ ಮಾಡಿದ ಒಟ್ಟು ಗಳಿಕೆ ಎಷ್ಟು ಗೊತ್ತಾ?
ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಾಜ್ಪುತ್ ಅವರ ಸಂಪೂರ್ಣ ಬ್ಯಾಂಕ್ ಡೀಟೇಲ್ಸ್ ಝೀ ನ್ಯೂಸ್ ಕೈಸೇರಿವೆ. ಸಾವಿಗೂ ಮುನ್ನ ಸುಶಾಂತ್ ಎಲ್ಲಿ ಮತ್ತುಎಷ್ಟು ಹಣವನ್ನು ಖರ್ಚು ಮಾಡಿದರು ಎಂಬಿತ್ಯಾದಿಗಳ ಕುರಿತು ಮಾಹಿತಿ ಇದೆ.
ಮುಂಬೈ: ಖ್ಯಾತ ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಅವರ ಸಾವಿನ ರಹಸ್ಯ ತಿಳಿಯಲು ಇಡೀ ದೇಶವೇ ಬಯಸುತ್ತಿದೆ. ತನಿಖಾ ಸಂಸ್ಥೆಗಳು ನಿತ್ಯ ಈ ಪ್ರಕರಣದ ಕುರಿತು ಹೊಸಹೊಸ ಮಾಹಿತಿಗಳು ಬಹಿರಂಗಪಡಿಸುತ್ತಲೇ ಇವೆ. ಇನ್ನೊಂದೆಡೆ ಸುಶಾಂತ್ ಸಿಂಗ್ ರಾಜ್ಪುತ್ ಅವರಿಗೆ ಸಂಬಂಧಿಸಿದ ಬ್ಯಾಂಕ್ ಡೀಟೇಲ್ಸ್ ಗಳು ಝೀ ನ್ಯೂಸ್ ಕೈಸೇರಿವೆ. ಈ ಬ್ಯಾಂಕ್ ಖಾತೆಗೆ ಸುಶಾಂತ್ ಸಿಂಗ್ ರಾಜ್ಪುತ್ ಅವರ ಸಹೋದರಿ ಪ್ರಿಯಾಂಕಾ ನಾಮಿನೀ ಆಗಿದ್ದಾರೆ. ಸುಶಾಂತ್ ತನ್ನ ಸಂಪೂರ್ಣ ಕರಿಯರ್ ನಲ್ಲಿ ಒಟ್ಟು 60 ಕೋಟಿ ರೂ. ಸಂಪಾದನೆ ಮಾಡಿದ್ದಾರೆ. ಅವರು ತಮ್ಮ ಹಾಗೂ ಅಂಕಿತಾ ಲೋಖಂಡೆ ಹೆಸರಿನಲ್ಲಿ ಮಲಾಡ್ ನಲ್ಲಿ 3 ಕೋಟಿ ರೂ.ಹಣ ನೀಡಿ ಒಂದು ಫ್ಲಾಟ್ ಕೂಡ ಖರೀದಿಸಿದ್ದಾರೆ. ಸುಶಾಂತ್ ಸಾವಿಗೂ ಮುನ್ನ ಅವರ ಖಾತೆಯಲ್ಲಿ ಕೇವಲ ಎರಡೂವರೆಯಿಂದ ಮೂರು ಕೋಟಿ ಮಾತ್ರ ಬಾಕಿ ಉಳಿದಿವೆ ಎನ್ನಲಾಗಿದೆ.
ಬ್ಯಾಂಕ್ ಖಾತೆಯ ಡಿಟೇಲ್ಸ್ ಗಳ ಪ್ರಕಾರ, 'ಛೀಚೊರೆ' ಚಿತ್ರ ಬಿಡುಗಡೆಯಾಗುವ ವೇಳೆ ಸುಶಾಂತ್ ಮಾರ್ಚ್ 28, 2019 ರಂದು ಪಾವನಾ ಫಾರ್ಮ್ ಹೌಸ್ ನಲ್ಲಿ ಸುಶಾಂತ್ ಔತಣಕೂಟವೊಂದನ್ನು ಏರ್ಪಡಿಸಿದ್ದರು. ಅದರಲ್ಲಿ 40 ಸಾವಿರ ರೂ. ಹಣ ಖರ್ಚಾಗಿತ್ತು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಪಾರ್ಟಿಯಲ್ಲಿ ಮಾದಕ ಪದಾರ್ಥಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
ಮೂಲಗಳ ಪ್ರಕಾರ ಬಾಲಿವುಡ್ ನ ನಟಿಯೋರ್ವಳು ಈ ಪಾರ್ಟಿಯ ವೇಳೆ ಡ್ರಗ್ಸ್ ಸೇವನೆ ಮಾಡಿದ್ದಳು. ರಿಯಾ ಹಾಗೂ ದಿಪೇಶ್ ಶಾಹ್ NCB ವಿಚಾರಣೆಯ ವೇಳೆ ಆ ನಟಿಯ ಕುರಿತು ಉಲ್ಲೇಖಿಸಿದ್ದಾರೆ ಅಷ್ಟೇ ಅಲ್ಲ ಅದಕ್ಕೆ ಸಾಕ್ಷಿಯೊಬ್ಬರ ಹೆಸರನ್ನು ಕೂಡ ಹೇಳಿದ್ದಾರೆ. ಇದಾದ ಬಳಿಕ NCB ರಿಯಾ ನೀಡಿರುವ ಮಾಹಿತಿ ಮೇರೆಗೆ ಆ ಸಾಕ್ಷಿಯ ವಿಚಾರಣೆ ಕೊಡ ನಡೆಸಿದ್ದು, ಸಾಕ್ಷಿಯಾದವರೂ ಕೂಡ ಇದನ್ನು ಒಪ್ಪಿಕೊಂಡಿದ್ದರು ಎನ್ನಲಾಗಿದೆ.
Also Read- Sara Ali Khan ನಿಂದ ಹಲವು ಬಾರಿ ಡ್ರಗ್ಸ್ ಪಡೆದಿದ್ದಾಳಂತೆ ರಿಯಾ ಚಕ್ರವರ್ತಿ
ಸಾಕ್ಷ ನೀಡಿದ ಆ ವ್ಯಕ್ತಿ ಬೆರಾರು ಅಲ್ಲದೆ ಸುಶಾಂತ್ ಸಿಂಗ್ ರಾಜ್ಪುತ್ ಅವರ ವಾಹನ ಚಾಲಕನಾಗಿದ್ದಾನೆ. ಮೂಲಗಳ ಪ್ರಕಾರ NCB ಅಧಿಕಾರಿಗಳು ಶೀಘ್ರದಲ್ಲಿಯೇ ಆ ನಟಿಯನ್ನು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಅಂದರೆ ಸಾರಾ ಅಲಿ ಖಾನ್ (Sara Ali Khan) ಬಳಿಕ ಈ ನಟಿ ಕೂಡ ಇದೀಗ NCBಯ ರೇಡಾರ್ ಮೇಲಿದ್ದಾಳೆ. ಆದರೆ, ವಿಭಾಗ ಇದುವರೆಗೂ ಕೂಡ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ.