ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಈಗ ಸಂಭ್ರಮದ ಕಾಲ. ಒಂದಾದ ಮೇಲೊಂದರಂತೆ ಉತ್ತಮ ಚಿತ್ರಗಳು ಬರುತ್ತಿದೆ. ಅದರಲ್ಲೂ ವಿಶ್ವದೆಲ್ಲೆಡೆ ಕನ್ನಡ ಚಿತ್ರಗಳು ಸದ್ದು ಮಾಡುತ್ತಿದೆ. ಅಷ್ಟೇ ವಿಭಿನ್ನ ಕಥಾವಸ್ತುವುಳ್ಳ ಚಿತ್ರಗಳು ನಿರ್ಮಾಣವೂ ಆಗುತ್ತಿದೆ. ಸದ್ಯ ಶ್ರೀವಾರಿ ಪಿಕ್ಚರ್ಸ್ ಲಾಂಛನದಲ್ಲಿ ಮಹೇಶ್ ಹೆಚ್ ಎಂ ನಿರ್ಮಿಸಿ - ನಿರ್ದೇಶಿಸುತ್ತಿರುವ ಪ್ರಯೋಗಾತ್ಮಕ ಚಿತ್ರ ʼಜೂಮ್ ಕಾಲ್ʼ ಟೈಟಲ್‌ ಬಿಡುಗಡೆಯಾಗಿದ್ದು ಸಖತ್‌ ಸೌಂಡ್‌ ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಶ್ರೀವಾರಿ ಪಿಕ್ಚರ್ಸ್ ಲಾಂಛನದಲ್ಲಿ ಮಹೇಶ್ ಹೆಚ್ ಎಂ ನಿರ್ಮಿಸಿ - ನಿರ್ದೇಶಿಸಿರುವ ಪ್ರಯೋಗಾತ್ಮಕ ಚಿತ್ರ ʼಜೂಮ್ ಕಾಲ್ʼ. ಹೊಸತಂಡದ ಹೊಸಪ್ರಯತ್ನವಾದ, ಹಾರಾರ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರದ ಶೀರ್ಷಿಕೆ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.  ಟೈಟಲ್ ಬಿಡುಗಡೆಗೂ ಪೂರ್ವದಲ್ಲಿ ಶೀರ್ಷಿಕೆ ಏನು? ಎಂಬುದನ್ನು ಕಂಡು ಹಿಡಿಯಲು ನೋಡುಗರಿಗೆ ಹೊಸ ರೀತಿಯ ಟಾಸ್ಕ್ ಕೊಡಲಾಗಿತ್ತು.   ದೀಪಾವಳಿ ಹಬ್ಬದಂದು ಶೀರ್ಷಿಕೆ ಬಿಡುಗಡೆ ಮಾಡಲಾಯಿತು.


ಇದನ್ನೂ ಓದಿ: ಡಿ ಬಾಸ್‌ ʼಕ್ರಾಂತಿʼಗೆ ಮೂಹೂರ್ತ ಫಿಕ್ಸ್‌ : ಇನ್ಮುಂದೆ ಗಜ ಘರ್ಜನೆ ಪ್ರಾರಂಭ...! 


ಇನ್ನು ʼಜೂಮ್ ಕಾಲ್ʼ ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ಇಂಜಿನಿಯರ್ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದಾಗ ಏನೆಲ್ಲಾ ಆಗುತ್ತದೆ? ಎಂಬುದನ್ನು ನೋಡಲು ʼಜೂಮ್ ಕಾಲ್ʼ ನೋಡಬೇಕು. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕ ಮಹೇಶ್ ಅವರೆ ಬರೆದಿದ್ದಾರೆ.  


ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ನಿರ್ದೇಶನದ ಕುರಿತು ಕಲಿತಿರುವ ಮಹೇಶ್, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಿರಿತೆರೆಯಲ್ಲಿ ಇದು ಅವರ ಮೊದಲ ಚಿತ್ರ. ಎಸ್ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ ಅರಸ್,‌ ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ʼಜೂಮ್ ಕಾಲ್ʼನಲ್ಲಿ ಅಭಿನಯಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ