ನಾಟು ನಾಟು ಡಾನ್ಸ್‌ ಮುಗಿಯುತ್ತಿದ್ದಂತೆ ಆಡಿಟೋರಿಯಂನಲ್ಲಿರೋ ಆಡಿಯನ್ಸ್‌ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಆಸ್ಕರ್‌ ಪ್ರಶಸ್ತಿ ಸಮಾರಂಭದ ಆರಂಭದ ಸಮಯದಲ್ಲಿ ಜಿಮ್ಮಿ ಕಿಮ್ಮೆಲ್‌ ನಿರೂಪಣೆ ಬಿಡಿಸಿ ಡ್ಯಾನ್ಸರ್ಸ್ ಬಂದು 'ನಾಟು ನಾಟು' ಹೆಜ್ಜೆ ಹಾಕಿ ಹೋಗಿದ್ದರು. ನಂತರ ಶುರುವಾಗಿದ್ದೇ ಅಸಲಿ ಲೈವ್‌ ಪರ್ಫಾರ್ಮೆನ್ಸ್‌. ಸಿನಿಮಾದ ರೀತಿಯಲ್ಲಿಯೇ ಬ್ಯಾಕ್‌ ಗ್ರೌಂಡ್‌ನ್ನು ಸಿದ್ದಪಡಿಸಲಾಗಿತ್ತು. 


COMMERCIAL BREAK
SCROLL TO CONTINUE READING

 


Oscar 2023 : ಪ್ರಶಸ್ತಿ ತೆಗೆದುಕೊಂಡು ಹಾಡಿನ ರೂಪದಲ್ಲಿ ಮಾತನಾಡಿದ ಎಂ. ಎಂ. ಕೀರವಾಣಿ ..! 


ವೇದಿಕೆ ಮೇಲೆ ರಾಹುಲ್ ಸಿಂಪ್ಲಿಗಂಜ್ ಹಾಗೂ ಕಾಲಭೈರವ ಹಾಡಲು ಆರಂಭಿಸುತ್ತಿದ್ದಂತೆ ಡ್ಯಾನ್ಸರ್ಸ್ ಬಂದು ಧೂಳೆಬ್ಬಿಸಲು ಆರಂಭಿಸಿದರು. ಸಮಾರಂಭದಲ್ಲಿ ಪಾಲ್ಗೊಂಡವರು ಚಪ್ಪಾಳೆ ಮೂಲಕ ಹುರಿದುಂಬಿಸುತ್ತಾ ಕುಳಿತ್ತಿದ್ದರು. ಪರ್ಫಾರ್ಮೆನ್ಸ್ ಮುಗಿಯುವ ವೇಳೆಗೆ ಎಲ್ಲರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. RRR ಸಿನಿಮನಾ ರೀಲಿಸ್‌ ಆಗಿ ಒಂದು ವರ್ಷವಾದರೂ ನಾಟು ನಾಟು ಹಾಡಿನ ಹುಚ್ಚು ಮಾತ್ರ ಕಡಿಮೆಯಾಗಿಲ್ಲ. ಈ ಹಾಡು ಕೇಳಿದವರನ್ನೇಲ್ಲ ಕುಣಿಸುತ್ತದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಹಾಗಾಗಿ ವೇದಿಕೆಯಲ್ಲಿ ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿತ್ತು.


ಇದನ್ನೂ ಓದಿ-Oscars 2023 : ಆಸ್ಕರ್‌ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ.. ಕಾರಣ? 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.