ಬೆಂಗಳೂರು : ಕೊರೋನಾ ಕಾಲಘಟ್ಟದ ನಂತರ ಕನ್ನಡ ಚಿತ್ರರಂಗ ಮತ್ತೆ ಕಳೆಗಟ್ಟಿದೆ. ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಹೀಗಾಗಿ ಚಂನದವನದಲ್ಲಿ ಸಂಭ್ರಮ ಮನೆಮಾಡಿದ್ದು, ನಾಳೆ ಬಹುನಿರೀಕ್ಷಿತ ಸಿನಿಮಾಗಳಾದ ಲವ್‌ ಮಾಕ್ಟೇಲ್‌-2 ಹಾಗೂ ‘ಫೋರ್‌ ವಾಲ್ಸ್‌ ಟು ನೈಟೀಸ್‌’ ತೆರೆಗೆ ಅಪ್ಪಳಿಸಲಿವೆ.


COMMERCIAL BREAK
SCROLL TO CONTINUE READING

ಕನ್ನಡಿಗರಿಗೆ ಸುಂದರವಾದ ಪ್ರೀತಿಯ ಕಥೆ ಹೇಳಿದ್ದ ʼಲವ್‌ ಮಾಕ್ಟೇಲ್‌ʼ ಭಾಗ-1(Love Mocktail 1) ಬಿಗ್ ಹಿಟ್‌ ಕಂಡಿತ್ತು. ಈಗ ಬಹಳ ದಿನಗಳ ಗ್ಯಾಪ್‌ ಬಳಿಕ ಲವ್‌ ಮಾಕ್ಟೇಲ್‌-2 ರಿಲೀಸ್‌ಗೆ ರೆಡಿಯಾಗಿದೆ. ನಾಳೆ ಲವ್‌ ಮಾಕ್ಟೇಲ್‌-2 ರಿಲೀಸ್‌ ಆಗಲಿದೆ.


ಇದನ್ನೂ ಓದಿ : ಹ್ಯಾಂಡ್ ಸಮ್ ಅಲ್ಲು ಅರ್ಜುನ್ ಪುಷ್ಪಾದ ರಗಡ್ ಲುಕ್ ಗೆ ಬದಲಾದಾಗ.. ಇಲ್ಲಿದೆ ನಟನ Transforming ವಿಡಿಯೋ


ನಗಿಸುವುದು ಪಕ್ಕಾ..!


ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್(Darling Krishna and Milana Nagaraj,) 'ಲವ್ ಮಾಕ್ಟೇಲ್' ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ್ದರು. ಮೊದಲ ಭಾಗದಂತೆ ಇದೀಗ 2ನೇ ಭಾಗವನ್ನೂ ದಂಪತಿಯೇ ನಿರ್ಮಿಸಿದ್ದಾರೆ. ಲವ್ ಮಾಕ್ಟೇಲ್-2 ಅಳು ಮತ್ತು ನಗುವಿನ ಕಡಲಲ್ಲಿ ತೇಲಿಸುವುದಾಗಿ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕರೂ ಆಗಿರುವ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.


ನಗಿಸುವುದಕ್ಕೆ ಪ್ರಾಮುಖ್ಯತೆ


ಮತ್ತೊಂದು ಮುಖ್ಯವಾದ ವಿಚಾರ ಏನಂದ್ರೆ ಸಿನಿಮಾದಲ್ಲಿ ಅಳಿಸುವುದಕ್ಕಿಂತ ಹೆಚ್ಚಾಗಿ ನಗಿಸಿರುವುದಾಗಿ ಡಾರ್ಲಿಂಗ್ ಕೃಷ್ಣ‌(Darling Krishna) ಪ್ರೇಕ್ಷಕರಿಗೆ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.


ಹೀರೋ ಅಚ್ಯುತ್!


ಇದಿಷ್ಟೂ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇದೇ ಮೊದಲಬಾರಿಗೆ ಅಚ್ಯುತ್‌ ಕುಮಾರ್‌ ನಾಯಕರಾಗಿ ನಟಿಸಿರುವ ಫೋರ್‌ ವಾಲ್ಸ್‌(Fourwalls Movie) ಚಿತ್ರ ರಿಲೀಸ್‌ಗೆ ಸಿದ್ಧವಾಗಿದೆ. ನಾಳೆ ಫೋರ್‌ ವಾಲ್ಸ್‌  ಸಿನಿಮಾ ಕೂಡ ಥೇಟರ್ ಗಳಿಗೆ ಲಗ್ಗೆ ಇಡಲಿದೆ.


[[{"fid":"229376","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : ನಾಳೆ 'ಜೇಮ್ಸ್' ಎಂಟ್ರಿ , ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಸಂಭ್ರಮ..!


ನಟ ಅಚ್ಯುತ್‌ ಕುಮಾರ್‌(Achyuth kumar) ‘ಫೋರ್‌ ವಾಲ್ಸ್‌ ಟು ನೈಟೀಸ್‌’ ಸಿನಿಮಾದಲ್ಲಿ ಕಲರ್‌ಫುಲ್‌ ಆಗಿ ಮಿಂಚಲು ಸಿದ್ಧರಾಗಿದ್ದಾರೆ. ರೆಟ್ರೋ ಸ್ಟೋರಿ ಜೊತೆಗೆ ಕೌಟುಂಬಿಕ ಕಥೆಯನ್ನು ಅಚ್ಚುಕಟ್ಟಾಗಿ ಹೇಳಲು ಸಿನಿಮಾ ತಂಡ ಸಜ್ಜಾಗಿದೆ.


ಒಟ್ಟಿನಲ್ಲಿ ನಾಳೆ ಕನ್ನಡ ಸಿನಿ ಪ್ರೇಕ್ಷಕರಿಗೆ ಹಬ್ಬದ ವಾತಾವರಣ ಕ್ರಿಯೇಟ್‌ ಆಗಲಿದೆ. ಬಹುನಿರೀಕ್ಷಿತ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್‌ ಆಗ್ತಿರೋದು ಸಿಕ್ಕಾಪಟ್ಟೆ ಖುಷಿ ತಂದಿದೆ. ಮತ್ತೊಂದು ಕಡೆ ದೊಡ್ಡ ಹಿಟ್‌ ಕೊಡಲು ಚಿತ್ರತಂಡಗಳು ಸಜ್ಜಾಗಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.