ಎಲೆಕೋಸು ತಿಂದು 14 ವರ್ಷದ ಬಾಲಕಿ ಸಾವು! ಚಳಿಗಾಲದಲ್ಲಿ ಈ ತರಕಾರಿಗಳು ದೇಹಕ್ಕೆ `ವಿಷ`ವಾಗಬಹುದು... ಎಚ್ಚರ!
Dangerous vegetables: ಮಾಧ್ಯಮ ವರದಿಗಳ ಪ್ರಕಾರ, ಹುಡುಗಿ ತನ್ನ ಸ್ವಂತ ಜಮೀನಿನಲ್ಲಿ ಬೆಳೆದ ಎಲೆಕೋಸನ್ನು ತಿಂದಿದ್ದಾಳೆ, ಅದರ ಮೇಲೆ ಕೀಟನಾಶಕವನ್ನು ಸಿಂಪಡಿಸಲಾಗಿತ್ತು. ಇನ್ನು ಎಲೆಕೋಸು ತಿಂದ ನಂತರ ಆಕೆಯ ಆರೋಗ್ಯ ಹದಗೆಟ್ಟಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸೆಂಬರ್ 24 ರ ಸಂಜೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
vegetables not to eat in winter: ಎಲೆಕೋಸು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಕ್ರಿಮಿಗಳಿಂದ ರಕ್ಷಿಸಲು ಸಿಂಪಡಿಸುವ ಕೀಟನಾಶಕಗಳು ಅದನ್ನು ಮಾರಣಾಂತಿಕವಾಗಿಸುತ್ತದೆ. ಇತ್ತೀಚೆಗೆ ಶ್ರೀ ಗಂಗಾನಗರ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯೊಬ್ಬಳ ಸಾವಿನ ಸುದ್ದಿ ಬೆಳಕಿಗೆ ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಹುಡುಗಿ ತನ್ನ ಸ್ವಂತ ಜಮೀನಿನಲ್ಲಿ ಬೆಳೆದ ಎಲೆಕೋಸನ್ನು ತಿಂದಿದ್ದಾಳೆ, ಅದರ ಮೇಲೆ ಕೀಟನಾಶಕವನ್ನು ಸಿಂಪಡಿಸಲಾಗಿತ್ತು. ಇನ್ನು ಎಲೆಕೋಸು ತಿಂದ ನಂತರ ಆಕೆಯ ಆರೋಗ್ಯ ಹದಗೆಟ್ಟಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸೆಂಬರ್ 24 ರ ಸಂಜೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಕಾಲು ಮುರಿತ..! ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ನಟಿ... ಏನಾಯ್ತು..?
ಈ ಕೀಟನಾಶಕಗಳ ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ ವಾಕರಿಕೆ, ವಾಂತಿ, ಹೊಟ್ಟೆ ಸೆಳೆತ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು. ಇದಲ್ಲದೆ, ಉತ್ಪನ್ನಗಳು ಕೀಟನಾಶಕಗಳೊಂದಿಗೆ ಸಂಪರ್ಕಕ್ಕೆ ಬಂದಾಗ, ಅವು ಚರ್ಮ ಮತ್ತು ಕಣ್ಣಿನ ಕಿರಿಕಿರಿಯನ್ನು ಉಂಟುಮಾಡುತ್ತವೆ, ಉದಾಹರಣೆಗೆ ಅಲರ್ಜಿಗಳು, ದದ್ದುಗಳು, ಕೆಂಪು ಮತ್ತು ತುರಿಕೆ. ಇಷ್ಟು ಮಾತ್ರವಲ್ಲದೆ, ಅವುಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಲ್ಯುಕೇಮಿಯಾ ಮತ್ತು ಲಿಂಫೋಮಾ ಸೇರಿದಂತೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಇತ್ತೀಚಿನ ವರದಿಯಲ್ಲಿ, ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ (ಇಡಬ್ಲ್ಯೂಜಿ) "ಡರ್ಟಿ ಡಜನ್" ಅನ್ನು ಬಿಡುಗಡೆ ಮಾಡಿದೆ. ಇದು ಕೀಟನಾಶಕಗಳ ಅವಶೇಷಗಳೊಂದಿಗೆ ಹೆಚ್ಚು ಕಲುಷಿತವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಯಾವುವು? ಮತ್ತು ಆರೋಗ್ಯದ ಅಪಾಯಗಳು ಏನು ಎಂಬುದನ್ನು ಸೂಚಿಸಿದೆ.
ಪಾಲಕ್: ಪಾಲಕ್ ಸೊಪ್ಪಿನಲ್ಲಿ ಬಳಸುವ ಕೀಟನಾಶಕಗಳು ಆರ್ಗನೋಫಾಸ್ಫೇಟ್‌ಗಳನ್ನು ಹೊಂದಿರಬಹುದು. ಕೀಟನಾಶಕಗಳ ಅವಶೇಷಗಳೊಂದಿಗೆ ಪಾಲಕ್ ಸೇವಿಸುವುದರಿಂದ ಕಾಲಾನಂತರದಲ್ಲಿ ನರವೈಜ್ಞಾನಿಕ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಎಲೆಕೋಸು: ಎಲೆಕೋಸು ಹೆಚ್ಚಿನ ಕೀಟನಾಶಕ ಶೇಷಗಳನ್ನು ಹೊಂದಿರುವ ಎಲೆ ತರಕಾರಿ. ಇದರಿಂದಾಗಿ, ಜೀರ್ಣಕಾರಿ ಸಮಸ್ಯೆಗಳು ಮತ್ತು ದೀರ್ಘಕಾಲೀನ ಆರೋಗ್ಯದ ಪರಿಣಾಮಗಳು ಉಂಟಾಗಬಹುದು ಎಂದು ಅಧ್ಯಯನಗಳು ಕಂಡುಕೊಂಡಿವೆ.
ಟೊಮೆಟೊ: ಟೊಮೆಟೊಗಳಿಗೆ ಹೆಚ್ಚು ಕೀಟನಾಶಕಗಳನ್ನು ಬಳಕೆ ಮಾಡಲಾಗುತ್ತದೆ. ಇದಕ್ಕೆ ಬಳಸುವ ಕೀಟನಾಶಕದಿಂದ ಸಂಭವನೀಯ ಕ್ಯಾನ್ಸರ್ ಪರಿಣಾಮಗಳನ್ನು ಒಳಗೊಂಡಂತೆ ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದು.
ಸೆಲರಿ: ಸೆಲರಿ ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಕೀಟನಾಶಕ ಶೇಷಗಳನ್ನು ಹೊಂದಿರುತ್ತದೆ. ಸೆಲರಿ ಮೇಲೆ ಕೀಟನಾಶಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹಾರ್ಮೋನ್ ಅಸಮತೋಲನ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ