ನವದೆಹಲಿ: ದೇಶಾದ್ಯಂತ ಹಂದಿ ಜ್ವರ ಕ್ಕೆ ಸುಮಾರು 169 ಜನರು ಬಲಿಯಾಗಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. 4,571 ಜನರಲ್ಲಿ ಹಂದಿ ಜ್ವರದ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ರಾಜಸ್ತಾನದಲ್ಲಿಯೇ ಶೇ 40 ರಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸರ್ಕಾರದ ಅಂಕಿ ಅಂಶದ ಪ್ರಕಾರ ರಾಜಸ್ತಾನದಲ್ಲಿ 1.911 ಪ್ರಕರಣಗಳು ಪತ್ತೆಯಾಗಿದ್ದರೆ, 75 ಸಾವಿನ ಪ್ರಕರಣಗಳು,ಇನ್ನೊಂದೆಡೆ ಗುಜರಾತಿನಲ್ಲಿ 600 ಪ್ರಕರಣಗಳು ಹಾಗೂ 24 ಸಾವಿನ ಪ್ರಕರಣಗಳು ಕಂಡು ಬಂದಿವೆ. ಇನ್ನು ದೆಹಲಿಯಲ್ಲಿ ಇದುವರೆಗೆ ಎಚ್ 1 ಎನ್ 1 ಗೆ ಸೋಂಕಿಗೆ 532 ಜನರ ಒಳಗಾಗಿದ್ದಾರೆ ಎನ್ನಲಾಗಿದೆ.


ಹಂದಿ ಜ್ವರದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯನ್ನು ರವಾನಿಸಿದ್ದಲ್ಲದೆ ಜ್ವರದ ಪತ್ತೆಗಾಗಿ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕೆಂದು ಅದು ತಿಳಿಸಿದೆ.