Dates Benefits For Health: ಬಹಳ ಸುಲಭವಾಗಿ ಲಭ್ಯವಿರುವ ಖರ್ಜೂರವನ್ನು ಆರೋಗ್ಯದ ಗಣಿ ಎಂತಲೇ ಪರಿಗಣಿಸಲಾಗಿದೆ. ಖರ್ಜೂರದಲ್ಲಿ ಕಬ್ಬಿಣ, ಖನಿಜಗಳು, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ರಂಜಕ ಮತ್ತು ವಿಟಮಿನ್‌ಗಳು ಹೇರಳವಾಗಿ ಕಂಡು ಬರುತ್ತದೆ.  ಆಯುರ್ವೇದದ ಪ್ರಕಾರ, ನಿತ್ಯ ಒಂದೆರಡು ಖರ್ಜೂರದಿಂದ ತೂಕ ಇಳಿಕೆ ಸೇರಿದಂತೆ ಈ ಸಮಸ್ಯೆಗಳಿಂದಲೂ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಖರ್ಜೂರದ ಪ್ರಯೋಜನ: 
ಖರ್ಜೂರ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ ಇದು ಸ್ನಾಯುಗಳನ್ನು ಕೂಡ ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ ಒಂದೆರಡು ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂದು ತಿಳಿಯೋಣ... 


ಖರ್ಜೂರದ ಈ ಪ್ರಯೋಜನಗಳ ಬಗ್ಗೆ ತಿಳಿದರೆ ನೀವೂ ಅಚ್ಚರಿ ಪಡ್ತೀರಾ! 
ಗರ್ಭಿಣಿಯರಿಗೆ ಲಾಭದಾಯಕ:

ಗರ್ಭಿಣಿಯರು ನಿತ್ಯ ಒಂದೆರಡು ಖರ್ಜೂರ ತಿನ್ನುವುದರಿಂದ ಇದು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನೀಡುತ್ತದೆ.


ಇದನ್ನೂ ಓದಿ- Salt Water Benefits: ಚಿಟಿಕೆ ಉಪ್ಪು ಹಾಕಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ?


ಶೀತದಿಂದ ಪರಿಹಾರ: 
ಸಾಮಾನ್ಯವಾಗಿ ಬಾಧಿಸುವ ನೆಗಡಿ, ಕೆಮ್ಮು, ಕಫದಂತಹ ಸಮಸ್ಯೆಗಳಿಗೆ ಖರ್ಜೂರ ಒಳ್ಳೆಯ ಮದ್ದು. 


ಜಂತುಳು ಸಮಸ್ಯೆಯಿಂದ ಸಿಗುತ್ತೆ ಮುಕ್ತಿ: 
ರಾತ್ರಿ ಒಂದೆರಡು ಖರ್ಜೂರವನ್ನು ನೀರಿನಲ್ಲಿ ನೆನೆಸಿತ್ತು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಜಂತುಳು ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 


ಹಲ್ಲಿನ ಸಮಸ್ಯೆಗೆ ರಾಮಬಾಣ: 
ಖರ್ಜೂರದಲ್ಲಿ ಫ್ಲೋರಿನ್ ಎಂಬ ಖನಿಜವಿದ್ದು ಇದರ ಸೇವನೆಯಿಂದ ಹಲ್ಲಿನ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು. 


ತೂಕ ನಷ್ಟ: 
ಖರ್ಜೂರದಲ್ಲಿ ನಿಕೋಟಿನ್ ಇದ್ದು ಇದು ದೇಹದ ಜೀರ್ಣಕಾರಿ ಮತ್ತು ಕರುಳಿನ ಸಮಸ್ಯೆಗಳಿಗೆ ಅತ್ಯುತ್ತಮವಾಗಿದೆ. ಸಮತೋಲಿತ ಪ್ರಮಾಣದಲ್ಲಿ ಖರ್ಜೂರ ತಿನ್ನುವುದರಿಂದ ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Tulsi Water Benefits: ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದರೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನ


ಮುಟ್ಟಿನ ಸಮಸ್ಯೆ: 
ಖರ್ಜೂರ ಸೇವನೆಯು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಬಾಧಿಸುವ ಸೊಂಟ, ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ ಎನ್ನಲಾಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.