Health: ನಾವು ಉತ್ತಮ ಆರೋಗ್ಯವನ್ನು ಆನುಭವಿಸಲು ನಮ್ಮ ಆಹಾರ ಪದ್ದತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಆಹಾರ, ರೆಡಿಮೆಡ್ ಆಹಾರಗಳ ಬಳಕೆ ತುಂಬಾ ಹೆಚ್ಚಾಗಿದೆ. ಇದರಿಂದ ತ್ವರಿತ ಆಹಾರದ ಬಯಕೆ ನಿವಾರಣೆಯಾಗುತ್ತದೆ. ಆದರೂ, ದೀರ್ಘಾವಧಿಯಲ್ಲಿ ಇಂತಹ ಆಹಾರಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ನಾವೆಲ್ಲರೂ ಸಂಸ್ಕರಿಸಿದ ಆಹಾರವನ್ನು ಬದಿಗಟ್ಟಿ ಆರೋಗ್ಯಕರ ಆಹಾರವನ್ನು ರೂಢಿಸಿಕೊಳ್ಳುವುದು ತುಂಬಾ ಅಗತ್ಯ.  


COMMERCIAL BREAK
SCROLL TO CONTINUE READING

ಆಗಾಗ್ಗೆ, ಚಾಟ್ಸ್ ತಿನ್ನುವುದು, ಸಂಸ್ಕರಿಸಿದ ಆಹಾರಗಳ ಮೊರೆ ಹೋಗುವುದರಲ್ಲಿ ಖಂಡಿತವಾಗಿಯೂ ತಪ್ಪಿಲ್ಲ. ಈ ಬದಲಾದ ಜೀವನಶೈಲಿಯಲ್ಲಿ ಅದು ಒಂದು ರೀತಿಯಲ್ಲಿ ಅನಿವಾರ್ಯತೆಯೂ ಹೌದು. ಆದರೆ, ನಮ್ಮ ನಿತ್ಯದ ಡಯಟ್ ನಲ್ಲಿ ಸಮತೋಲಿತ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. 


ವಾಸ್ತವವಾಗಿ,  ಪ್ರಕೃತಿದತ್ತವಾಗಿ ನಮಗೆ ಸಾಕಷ್ಟು ಪೌಷ್ಟಿಕಾಂಶಯುಕ್ತ ಆಹಾರಗಳು ಲಭ್ಯವಿವೆ. ಅವುಗಳೆಂದರೆ, ಸೊಪ್ಪು, ತರಕಾರಿ ಮತ್ತು ಹಣ್ಣುಗಳು. ಸಾಧ್ಯವಾದಷ್ಟು ಈ ಆಹಾರಗಳ ಬಳಕೆಯಿಂದ ನಮ್ಮ ಜೀವನ ಶೈಲಿಯನ್ನು, ಆರೋಗ್ಯವನ್ನು ಸುಧಾರಿಸಬಹುದಾಗಿದೆ. ಈ ಲೇಖನದಲ್ಲಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಯಾವುವು? ಯಾವ ರೀತಿಯ ಆಹಾರ ಸೇವಿಸಿದರೆ ಆರೋಗ್ಯಕರವಾಗಿರುತ್ತೇವೆ ಎನ್ನುವುದರ ಬಗ್ಗೆ  ತಿಳಿಯೋಣ....


ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು: 
ಕೆಲವು  ಆಹಾರಗಳು ನಾಲಿಗೆಗೆ ರುಚಿಯಾಗಿರಬಹುದು, ನೋಡಲು ಆಕರ್ಷಕವಾಗಿ ಕಾಣಬಹುದು. ಆದರೆ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ನಮ್ಮ ಆಹಾರದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳ ಸಮತೋಲನ ಬಹಳ ಮುಖ್ಯವಾಗಿರುತ್ತದೆ. 


ಇದನ್ನೂ ಓದಿ: ಚಳಿಗಾಲದಲ್ಲಿ ಈ ನಾಲ್ಕು ರೀತಿಯಲ್ಲಿ ಅರಶಿನ ಸೇವಿಸಿದರೆ ದೂರವಾಗುವುದು ಕಾಯಿಲೆಗಳ ಅಪಾಯ !


*ಪ್ರೋಟೀನ್: 
ಎದ್ದು ನಿಂತು ಮುಂದೆ ನಡೆಯಲು ಪ್ರೋಟೀನ್ ನಿಮಗೆ ಶಕ್ತಿಯನ್ನು ನೀಡುತ್ತದೆ, ಅದೇ ಸಮಯದಲ್ಲಿ ಮನಸ್ಥಿತಿ ಮತ್ತು ಅರಿವಿನ ಸಮತೋಲನ ಕಾಪಾಡಿಕೊಳ್ಳುತ್ತದೆ. ಮೂತ್ರಪಿಂಡದ ಕಾಯಿಲೆ ಇರುವವರಿಗೆ ಹೆಚ್ಚು ಪ್ರೋಟೀನ್ ಹಾನಿಕಾರಕವಾಗಬಹುದು. ಆದರೆ, ಉಳಿದಂತೆ ಪ್ರತಿಯೊಬ್ಬರಿಗೂ ಹೆಚ್ಚಿನ ಗುಣಮಟ್ಟದ ಪ್ರೋಟೀನ್ ಅಗತ್ಯವಿರುತ್ತದೆ. ವಿಶೇಷವಾಗಿ ವಯಸ್ಸಾದವರು ಈ ವಿಷಯದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಹಾಗೆಂದು ಪ್ರೋಟೀನ್ ಸೇವನೆ ಎಂದರೆ ಪ್ರಾಣಿ ಸೇವನೆ ಮಾತ್ರ ಅಂತ ಅಲ್ಲ, ಪ್ರಕೃತಿಯಲ್ಲಿ ಬಹಳಷ್ಟು ಪ್ರೋಟೀನ್ ಹೆಚ್ಚಿಸುವ ಆಹಾರಗಳಿವೆ.  ಈ ಆಹಾರದ ಮೊರೆ ಹೋಗುವುದು ಬಹಳ ಉತ್ತಮ.


*ಕೊಬ್ಬು: 
ಕೊಬ್ಬು ಎಂದಾಕ್ಷಣ ಜನ ಅದು ಕೆಟ್ಟದ್ದು ಎಂದು ಭಾವಿಸುತ್ತಾರೆ. ಆದರೆ ಕೊಬ್ಬಿನಲ್ಲಿ ಎರಡು ವರ್ಗಗಳಿವೆ. ಆರೋಗ್ಯಕರ ಕೊಬ್ಬು ಮತ್ತು ಕೆಟ್ಟ ಕೊಬ್ಬು. ಒಳ್ಳೆಯ ಕೊಬ್ಬುಗಳು  ಮೆದುಳು ಮತ್ತು ಹೃದಯವನ್ನು ರಕ್ಷಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತವೆ.  ಕೆಟ್ಟ ಕೊಬ್ಬುಗಳು  ಆರೋಗ್ಯವನ್ನು ಹಾಳುಮಾಡುತ್ತದೆ ಹಾಗೂ ಕೆಲವು ರೋಗಗಳ ಅಪಾಯವನ್ನು ಕೂಡ ಹೆಚ್ಚಿಸಬಹುದು. ವಾಸ್ತವವಾಗಿ ಒಮೆಗಾ -3 ನಂತಹ ಆರೋಗ್ಯಕರ ಕೊಬ್ಬುಗಳು ನಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಮುಖ್ಯವಾಗಿರುತ್ತವೆ. ನಮ್ಮ ಮನಸ್ಥಿತಿಯನ್ನು ಸುಧಾರಿಸಲು, ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ನಮ್ಮ ಆಹಾರದಲ್ಲಿ ಆರೋಗ್ಯಕರ ಕೊಬ್ಬಿನ ಆಹಾರಗಳ ಬಳಕೆ ತುಂಬಾ ಅಗತ್ಯ. 


ಇದನ್ನೂ ಓದಿ: Bad cholesterol: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ 5 ಆಹಾರ ಸೇವಿಸಿರಿ


*ಫೈಬರ್: 
ಫೈಬರ್‌ಯುಕ್ತ ಆಹಾರಗಳಾದ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಬೀನ್ಸ್ ನಂತಹ  ಆಹಾರವನ್ನು ಸೇವಿಸುವುದರಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಹಾಯಕ. ಅಷ್ಟೇ ಅಲ್ಲ, ಈ ಆಹಾರಗಳ ಸೇವನೆಯು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಲ್ಲವು. ಇದು ನಮ್ಮ ಚರ್ಮವನ್ನು ಸುಧಾರಿಸುವುದರೊಂದಿಗೆ ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.


*ಕ್ಯಾಲ್ಸಿಯಂ: 
ಮನುಷ್ಯನ ದೇಹ ಸದೃಢವಾಗಿರಲು ಆರೋಗ್ಯಕರ ಮೂಳೆಗಳನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಉಪಯೋಗಿಸದೆ ಇರುವುದರಿಂದ ಮೂಳೆಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಇದರೊಂದಿಗೆ ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. 


*ಕಾರ್ಬೋಹೈಡ್ರೇಟ್‌ಗಳು: 
ನಮ್ಮ ದೇಹದ ಶಕ್ತಿಯ ಮುಖ್ಯ ಮೂಲಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಕೂಡ ಒಂದಾಗಿದೆ. ದೇಹಕ್ಕೆ ಶಕ್ತಿಯನ್ನು ನೀಡುವುದರಿಂದ ಹಿಡಿದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳುವವರೆಗೂ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. 



ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ