ಬೆಂಗಳೂರು: ವಿಶ್ವದಲ್ಲಿ ಸಂಭವಿಸುತ್ತಿರುವ ಒಟ್ಟು ಹೃದಯ ವೈಫಲ್ಯ ಹೊಂದುವ ರೋಗಿಗಳ ಪೈಕಿ 40% ಕ್ಕೂ ಅಧಿಕ ರೋಗಿಗಳು ಭಾರತದವರಾಗಿದ್ದಾರೆ. ಈ ಹೃದಯ ವೈಫಲ್ಯವು ಬಹುದೊಡ್ಡ ಆರೋಗ್ಯ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಹೃದಯ ವೈಫಲ್ಯಕ್ಕೆ ವಿಶೇಷ ಆರೈಕೆ, ಚಿಕಿತ್ಸೆ ಮತ್ತು ಶಿಸ್ತುಬದ್ಧ ನಿರ್ವಹಣೆ ಅಗತ್ಯವಿದೆ. ಹೃದಯ ವೈಫಲ್ಯ ಹೊಂದಿದ ರೋಗಿಗಳಿಗೆ ವೈಯಕ್ತಿಕವಾದ ಮಾರ್ಗದರ್ಶನದ ಜೊತೆಗೆ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮವನ್ನು ತಿಳಿಸುವುದನ್ನು ಆರೈಕೆಯ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕಾದ ಅಗತ್ಯವಿದೆ. ಹೃದಯ ಚಿಕಿತ್ಸೆಗೆಂದೇ ಮೀಸಲಾದ ಚಿಕಿತ್ಸಾಲಯಗಳಲ್ಲಿ ರೋಗಿಗಳಿಗೆ ಪರಿಣಾಮಕಾರಿ ಮತ್ತು ಗುಣಮಟ್ಟದ ಆರೈಕೆಯನ್ನು ಸುಗಮಗೊಳಿಸುವುದರ ಮೂಲಕ ರೋಗದ ಹೊರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತುರ್ತು ಅಗತ್ಯವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಯುರ್ವೇದದಲ್ಲಿ ಬಳಸುವ ಈ ಎಲೆ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ


ಚಿಕಿತ್ಸೆಯಲ್ಲಿ ಅಸ್ಥಿರತೆ, ಚಿಕಿತ್ಸೆಯ ಶಿಷ್ಟಾಚಾರಗಳನ್ನು ಪಾಲಿಸದೇ ಇರುವುದು, ಕಳಪೆ ಜೀವನಶೈಲಿ ಮತ್ತು ಅನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳದೇ ಇರುವುದು ಆಸ್ಪತ್ರೆಗೆ ದಾಖಲಾಗುವುದು ಮತ್ತು ಪದೇಪದೆ ಆಸ್ಪತ್ರೆಗೆ ದಾಖಲಾಗುವುದಕ್ಕೆ ಕಾರಣವಾಗುತ್ತದೆ. ರೋಗಿಗಳಲ್ಲಿ ನಿರಂತರವಾಗಿ ಹದಗೆಡುತ್ತಿರುವ ಪರಿಸ್ಥಿತಿಗಳು ಮತ್ತು ಅಕಾಲಿಕ ಮರಣಕ್ಕೆ ಅವು ಕಾರಣವಾಗಿವೆ. ಆದಾಗ್ಯೂ, ಹೃದ್ರೋಗ ತಜ್ಞರೊಂದಿಗೆ ನಿರಂತರವಾದ ಸಂವಹನ ಮತ್ತು ನಿಯಮಿತವಾಗಿ ಚಿಕಿತ್ಸೆ ಪಡೆಯುವುದು ಹಾಗೂ ವೈದ್ಯರು ನೀಡುವ ಶಿಫಾರಸಿನಂತೆ ಜೀವನಶೈಲಿಯನ್ನು ಪಾಲಿಸುವುದರಿಂದ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಅಲ್ಲದೇ, ಒಟ್ಟಾರೆ ಜೀವನದ ಗುಣಮಟ್ಟವನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ.


ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ಹೆಡ್, ಪ್ರೀಮೆಚ್ಯೂರ್ ಹಾರ್ಟ್ ಡಿಸೀಸಸ್ ವಿಭಾಗದ ಸೀನಿಯರ್ ಇಂಟರ್‍ವೆನ್ಷನಲ್ ಕಾರ್ಡಿಯೋಲಾಜಿಸ್ಟ್ ಡಾ.ರಾಹುಲ್ ಪಾಟೀಲ್ ಅವರು ಮಾತನಾಡಿ, ``ಭಾರತದಲ್ಲಿ ಹೃದಯಾಘಾತದಿಂದ ಆಗುತ್ತಿರುವ ಹೊರೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವುದರಿಂದ ದೇಶದಲ್ಲಿ ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯದ ಆದ್ಯತೆಯಾಗಿ ಗುರುತಿಸುವುದು ಅಗತ್ಯವಾಗಿದೆ. ಹೃದಯಾಘಾತವು ಪ್ರಗತಿಶೀಲ ರೋಗವಾಗಿದ್ದು, ಇದಕ್ಕೆ ಜೀವನದುದ್ದಕ್ಕೂ ನಿರ್ವಹಣೆ ಮಾಡುವ ಅಗತ್ಯವಿದೆ. ನನ್ನ ಕ್ಲಿನಿಕಲ್ ಅವಲೋಕನದಲ್ಲಿ ಗಮನಿಸಿದಂತೆ ತಡವಾದ ಚಿಕಿತ್ಸೆ ಮತ್ತು ನಿಗದಿತ ಚಿಕಿತ್ಸೆಯನ್ನು ಅನುಸರಿಸದೇ ಇರುವುದರಿಂದ ರೋಗಿಗಳಲ್ಲಿ ಸುಮಾರು 25% ರಷ್ಟು ಆಸ್ಪತ್ರೆಗೆ ದಾಖಲಾಗಲು ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೃದ್ರೋಗಕ್ಕೆಂದೇ ಪ್ರತ್ಯೇಕವಾದ ಹಾರ್ಟ್ ಕ್ಲಿನಿಕ್‍ಗಳ ಅಗತ್ಯವಿದೆ. ಈ ಕ್ಲಿನಿಕ್‍ಗಳಲ್ಲಿ ಉತ್ತಮ ತರಬೇತಿ ಹೊಂದಿದ ನರ್ಸಿಂಗ್ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಆರೈಕೆ ನೀಡುವವರು ಲಭ್ಯವಿರಬೇಕಾಗಿರುವುದು ತಕ್ಷಣದ ಅಗತ್ಯವಾಗಿದೆ. ವಿಶೇಷ ಕ್ಲಿನಿಕ್‍ಗಳು ರೋಗಿಗಳಿಗೆ ತೃತೀಯ ಆರೈಕೆ ಸೌಲಭ್ಯಗಳನ್ನು ಒದಗಿಸುತ್ತವೆ. ಸರಿಯಾದ ಆರೈಕೆಯೊಂದಿಗೆ ಸಮಗ್ರ ಮೇಲ್ವಿಚಾರಣೆಯನ್ನು ಖಾತರಿಪಡಿಸುತ್ತದೆ ಮತ್ತು ರೋಗಿಗಳಿಗೆ ಚಿಕಿತ್ಸೆಯ ಶಿಷ್ಟಾಚಾರಗಳಿಗೆ ಬದ್ಧರಾಗಿರಲು ಸಹಾಯ ಮಾಡುತ್ತದೆ’’ ಎಂದರು.


ಪ್ರತ್ಯೇಕವಾದ ಹೃದ್ರೋಗ ಕ್ಲಿನಿಕ್‍ಗಳ ಮೂಲಕ ಹೃದಯ ವೈಫಲ್ಯ ಮತ್ತು ಅದಕ್ಕೆ ಸಂಬಂಧಿಸಿದ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರೆ ರೋಗಿಗಳಿಗೆ ಅಪಾಯಕಾರಿ ಅಂಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಆದರೆ, ಸುಶಿಕ್ಷಿತ ಶುಶ್ರೂಷಾ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಪೂರೈಕೆದಾರರೊಂದಿಗೆ ಇದು ನಿಯಮಿತವಾದ ಚಿಕಿತ್ಸೆಯನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೇ ಸಮಯೋಚಿತವಾಗಿ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಮತ್ತು ರೋಗದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದುವುದರಿಂದ ರೋಗಿಯ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Sugar Control ಗಾಗಿ ಈ ಎಲೆಯನ್ನು ಬಳಸಿ, ಇಂದೇ ನಿಮ್ಮ ಆಹಾರದಲ್ಲಿ ಇದನ್ನು ಶಾಮೀಲುಗೊಳಿಸಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.