ವಾಷಿಂಗ್ಟನ್: ವಯಸ್ಸಿಗೆ ತಕ್ಕಂತೆ ತೂಕ ಹೊಂದಿರುವ ಅಥವಾ ಅಧಿಕ ತೂಕವಿರದ  ಮಕ್ಕಳು ಅಸ್ತಮಾದಂತಹ ರೋಗಗಳಿಂದ ದೂರವಿರಬಹುದು ಎಂಬುದನ್ನು ಹೊಸ ಅಧ್ಯಯನವು ಕಂಡು ಹಿಡಿದಿದೆ. 


COMMERCIAL BREAK
SCROLL TO CONTINUE READING

ಅಮೇರಿಕದ ಡ್ಯುಕ್ ವಿಶ್ವವಿದ್ಯಾನಿಲಯ ಸುಮಾರು ಐದು ದಶಲಕ್ಷಕ್ಕೂ ಹೆಚ್ಚಿನ ಮಕ್ಕಳ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿತು. ಸ್ಥೂಲಕಾಯತೆಯು 23 ರಿಂದ 27 ಪ್ರತಿಶತ ಸುಮಾರು ಮಕ್ಕಳಲ್ಲಿ ಅಸ್ತಮಾಕ್ಕೆ ಕಾರಣವಾಗಿದೆ ಎಂಬುದನ್ನು ಈ ಅಧ್ಯಯನದಲ್ಲಿ ಕಂಡು ಹಿಡಿಯಲಾಗಿದೆ ಎಂದು ಅದು ತನ್ನ ಅಂಕಿ ಅಂಶಗಳಲ್ಲಿ ವಿವರಿಸಿದೆ. 


ಪೀಡಿಯಾಟ್ರಿಕ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಎರಡು ರಿಂದ 17 ವರ್ಷಗಳ ನಡುವಿನ ಕನಿಷ್ಠ 10 ಪ್ರತಿಶತದಷ್ಟು ಮಕ್ಕಳು ತಮ್ಮ ತೂಕವನ್ನು ನಿಯಂತ್ರಿಸಿದರೆ ಅವರು ರೋಗದ ಹಿಡಿತಕ್ಕೆ ಹೋಗುವುದನ್ನು ತಪ್ಪಿಸಬಹುದು ಎಂದು ಈ ಅಧ್ಯಯನ ತಿಳಿಸಿದೆ.



"ಮಕ್ಕಳಲ್ಲಿ ದೀರ್ಘಾವಧಿಯ ಕಾಯಿಲೆಗಳಲ್ಲಿ ಆಸ್ತಮಾವು ಮುಖ್ಯವಾಗಿದೆ ಮತ್ತು ಬಾಲ್ಯದ ಸಂಬಂಧಿಸಿದ ಕೆಲವು ವೈರಸ್ ಸೋಂಕುಗಳು ಮತ್ತು ವಂಶವಾಹಿ ಕೂಡ ಇದಕ್ಕೆ ಕಾರಣವಿರಬಹುದು, ಇದನ್ನು ಸಂಭವಿಸದಂತೆ ತಡೆಗಟ್ಟಲು ಸಾಧ್ಯವಿಲ್ಲ" ಎಂದು ಡ್ಯೂಕ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಜೇಸನ್ ಇ ಲಾಂಗ್ ಹೇಳುತ್ತಾರೆ. 


ಮಕ್ಕಳಿಗೆ ಬಾಲ್ಯದಲ್ಲಿ ಅಸ್ತಮಾ ಉಂಟಾಗಲು ಇರುವ ಏಕೈಕ ಕಾರಣ ಎಂದರೆ ಬೊಜ್ಜು ಎಂದು ಅವರು ಹೇಳುತ್ತಾರೆ. ಮಕ್ಕಳು ಸದಾ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು ಮತ್ತು ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ತೂಕ ನಿರ್ವಹಿಸುವುದರಿಂದ ಇದನ್ನು ತಡೆಗಟ್ಟಬಹುದು ಎಂದು ಜೇಸನ್ ಇ ಲಾಂಗ್ ತಿಳಿಸಿದ್ದಾರೆ.