ನ್ಯೂಯಾರ್ಕ್:  ನಿಮ್ಮ ಹೊಟ್ಟೆಯೊಳಗೆ ಯಾವ ಸಮಸ್ಯೆಯಿದೆ ಎಂದು ತಿಳಿದುಕೊಲ್ಳುವುದು ಇನ್ಮುಂದೆ ಬಹಳ ಸುಲಭ. ಅದಕ್ಕಾಗಿಯೇ ನ್ಯೂಯಾರ್ಕ್'ನ ಎಂಐಟಿ ಇಂಜಿನಿಯರುಗಳು ಸಂಶೋಧನೆ ನಡೆಸಿ ವಿಶೇಷ ಮಾತ್ರೆಯೊಂದನ್ನು ತಯಾರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ವಿಶೇಷ ಮಾತ್ರೆ ಹೊಟ್ಟೆಯೊಳಗೆ ಹೋದ ಕೂಡಲೇ ಮೃದುವಾದ ಬಲೂನಿನಂತೆ ಊದಿ ಅಲ್ಸರ್, ಕ್ಯಾನ್ಸರ್ ಮತ್ತು ಕರುಳು ಸಂಬಂಧಿತ ಸಮಸ್ಯೆಗಳನ್ನು ಕಂಡುಹಿಡಿಯುತ್ತದೆ. ಈ ಮಾತ್ರೆಯಲ್ಲಿ ಒಂದು ರೀತಿಯ ಸೆನ್ಸಾರ್ ಇದ್ದು 30 ದಿನಗಳವರೆಗೆ ಹೊಟ್ಟೆಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ. 


ಈ ಮಾತ್ರೆ ಸುಲಭವಾಗಿ ಹೊಟ್ಟೆಯೊಳಗಿನ ವಿವಿಧ ಬ್ಯಾಕ್ಟೀರಿಯಾ ಅಥವಾ ವೈರಸ್, pH ಮಟ್ಟ ಅಥವಾ ವಿವಿಧ ಸಂವೇದಕಗಳನ್ನು ಮಾನಿಟರ್ ಮಾಡಲಿದೆ.  ಈ ಮಾತ್ರೆ ಒಂದು ಜೆಲ್ ರೀತಿಯಲ್ಲಿ ಇರಲಿದ್ದು, ಹೊಟ್ಟೆಯೊಳಗೆ ಸೇರಿದ ಬಳಿಕ ಬಹುದಿನಗಳವರೆಗೆ ಹೊಟ್ಟೆಯೊಳಗಿನ ದೀರ್ಘಾವಧಿಯ ಅನಾರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಎಂಐಟಿ ಸಹಾಯಕ ಪ್ರಾಧ್ಯಾಪಕ ಜುಆನ್ಹೆ ಝಾವೋ ಹೇಳಿದ್ದಾರೆ.


ಈ ಮೂಲಕ ರೋಗಿಗಳು ತಮ್ಮ ಹೊಟ್ಟೆಯೊಳಗಿನ ಸಮಸ್ಯೆಗಳ ಬಗ್ಗೆ ಯಾವುದೇ ನೋವಿಲ್ಲದೆ ಸರಳವಾದ ವಿಧಾನದಿಂದ ತಿಳಿಯಬಹುದು. ಒಂದು ವೇಳೆ ಈ ಮಾತ್ರೆಯನ್ನು ಹೊಟ್ಟೆಯಿಂದ ಹೊರತೆಗೆಯಬೇಕಾದ ಸಂದರ್ಭದಲ್ಲಿ ರೋಗಿ ಕ್ಯಾಲ್ಷಿಯಂ ಸೊಲ್ಯುಶನ್ ಕುಡಿದರೆ ಸಾಕು, ಆ ಮಾತ್ರೆ ತನ್ನ ಮೊದಲಿನ ರೂಪಕ್ಕೆ ಬರಲಿದೆ. ಈ ಮೂಲಕ ಹೊಟ್ಟೆಯಿಂದ ಮಾತ್ರೆಯನ್ನು ಸುಲಭವಾಗಿ ಹೊರತೆಗೆಯಬಹುದು ಎಂದು ಅವರು ಹೇಳಿದ್ದಾರೆ.