ಬೆಂಗಳೂರು : ಇಂದಿನ ಬಿಡುವಿಲ್ಲದ ಜೀವನದಲ್ಲಿ ಯಾವುದೇ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸುವುದು ಸುಲಭದ ಮಾತಲ್ಲ. ಅಂತಹ ಪರಿಸ್ಥಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿಮಗೆ ಶಕ್ತಿ ನೀಡುವ, ನಿಮಗೆ ಉತ್ತಮ ಆರೋಗ್ಯವನ್ನು ನೀಡುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.  ಇದಕ್ಕೆ ಅತ್ಯುತ್ತಮ ಆಯ್ಕೆ ಹಾಲು (Milk) ಎಂದರೆ ತಪ್ಪಾಗಲಾರದು. ಆದ್ದರಿಂದ, ವೈದ್ಯರು ಜನರಿಗೆ ಹಾಲು ಸೇವಿಸುವಂತೆ ಸಲಹೆ ನೀಡುತ್ತಾರೆ. ರಾತ್ರಿಯಲ್ಲಿ ಮಲಗುವ ಮೊದಲು ಒಂದು ಲೋಟ ಹಾಲು ಕುಡಿಯುವುದರಿಂದ ನೀವು ಆರೋಗ್ಯವಾಗಿರುತ್ತೀರಿ ಮಾತ್ರವಲ್ಲದೆ ಅನೇಕ ಕಾಯಿಲೆಗಳಿಂದ ದೂರವಿರುತ್ತೀರಿ ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ :
ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿ ಹಲವರನ್ನು ಕಾಡುತ್ತಿರುವ ಕಾಯಿಲೆಯಾಗುತ್ತಿದೆ. ಆದರೆ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹಾಲು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಜೀರ್ಣಕ್ರಿಯೆಗೆ ಹಾಲು (Milk) ಉತ್ತಮ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೊಂದಿದ್ದರೆ ಅಂತಹವರು ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲನ್ನು ಸೇವಿಸಬಹುದು.


ಹಾಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಹಾಲು ಕುಡಿಯುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ರಾತ್ರಿ ಮಲಗುವ ಮೊದಲು ನೀವು ಒಂದು ಲೋಟ ಹಾಲು ಕುಡಿದರೆ, ಅದು ನಿಮ್ಮನ್ನು ರೋಗಗಳಿಂದ ರಕ್ಷಿಸುತ್ತದೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯುವುದು ಸೂಕ್ತ.


ಇದನ್ನೂ ಓದಿ - Shilpa Shetty Beauty Secrets: ಸದಾ ಯಂಗ್ ಆಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್


ಶೀತದಿಂದ ನಿಮ್ಮನ್ನು ದೂರವಿರಿಸುತ್ತದೆ :
ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲನ್ನು ಸೇವಿಸುವುದರಿಂದ ನಿಮ್ಮನ್ನು ಶೀತದಿಂದ (Cold)  ದೂರವಿರಿಸುತ್ತದೆ. ಇದಲ್ಲದೆ ಬೆಚ್ಚಗಿನ ಹಾಲು ನಿಮ್ಮ ಗಂಟಲಿನ ಕಿರಿ ಕಿರಿಯನ್ನು ನಿವಾರಿಸುತ್ತದೆ.  ಒಂದೊಮ್ಮೆ ನಿಮಗೆ ಗಂಟಲು ನೋಯುತ್ತಿದ್ದರೆ, ಹಾಲಿಗೆ ಸ್ವಲ್ಪ ಮೆಣಸು, ಅರಿಶಿನ ಸೇರಿಸಿ ಕುಡಿಯಿರಿ. ಇದರಿಂದ ನಿಮಗೆ ಪರಿಹಾರ ದೊರೆಯಲಿದೆ.


ಹಾಲು ಪುರುಷರಿಗೆ ಪ್ರಯೋಜನಕಾರಿ :
ಹಾಲಿನ ಸೇವನೆಯು ಪುರುಷರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪುರುಷರು ರಾತ್ರಿಯ ಸಮಯದಲ್ಲಿ ಪ್ರತಿದಿನ ಒಂದು ಲೋಟ ಹಾಲು ಸೇವಿಸಿದರೆ ಅದರಲ್ಲಿರುವ ಫ್ಯಾಟ್ ಮತ್ತು ಪ್ರೋಟೀನ್ ನಿಂದಾಗಿ ಪುರುಷರಲ್ಲಿರುವ ಹಾರ್ಮೋನ್ಸ್ ಆಕ್ಟಿವ್ ಆಗಿರುತ್ತದೆ. ಇದಲ್ಲದೆ ಹಾಲಿನಲ್ಲಿರುವ ಕ್ಯಾಲ್ಸಿಯಂ, ಸೋಡಿಯಂ ಮತ್ತು ಪೊಟ್ಯಾಸಿಯಂ ಮೊದಲಾದ ಇಲೆಕ್ಟ್ರೋಲೈಟ್ಸ್ ದೇಹದಲ್ಲಿ ದೌರ್ಬಲ್ಯವನ್ನು ನಿವಾರಿಸುತ್ತದೆ. ಆದ್ದರಿಂದ, ಪುರುಷರು ರಾತ್ರಿ ಮಲಗುವ ಮೊದಲು ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ.


ಇದನ್ನೂ ಓದಿ - Weight Loss Tips: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ 5 ಹಣ್ಣುಗಳಿಂದ ದೂರವಿರಿ


ಒತ್ತಡ ಮತ್ತು ದಣಿವನ್ನು ನಿವಾರಿಸುತ್ತದೆ :
ಇಂದಿನ ಬಿಡುವಿಲ್ಲದ ಜೀವನದಲ್ಲಿ, ಒತ್ತಡ (Stress) ಮತ್ತು ದಣಿವು ಸಾಮಾನ್ಯ ಸಮಸ್ಯೆಯಾಗಿದೆ. ನೀವು ಕೆಲಸದಿಂದಾಗಿ ದಣಿದಿದ್ದರೆ ಅಥವಾ ಅತಿಯಾದ ಕೆಲಸದಿಂದಾಗಿ ಒತ್ತಡಕ್ಕೆ ಒಳಗಾಗಿದ್ದರೆ  ನೀವು ಪ್ರತಿದಿನ ರಾತ್ರಿ ಮಲಗುವ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯುವ ಮೂಲಕ ನಿಮ್ಮನ್ನು ಒತ್ತಡ ಮತ್ತು ದಣಿವಿನಿಂದ ದೂರವಿರಿಸಬಹುದಾಗಿದೆ.


ಇದನ್ನೂ ಓದಿ - ನಿಮಗೂ ಮರೆವಿನ ಸಮಸ್ಯೆ ಇದ್ದರೆ, ಈ Exercise ಮಾಡಿ


ಕ್ಯಾಲ್ಸಿಯಂ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ :
ಕ್ಯಾಲ್ಸಿಯಂ ದೇಹಕ್ಕೆ ಅವಶ್ಯಕವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಒಂದು ಲೋಟ ಹಾಲನ್ನು ಸೇವಿಸಿದರೆ, ನಿಮಗೆ ಕ್ಯಾಲ್ಸಿಯಂ ಕೊರತೆ ಅನಿಸುವುದಿಲ್ಲ.  ಆದ್ದರಿಂದ, ಆರೋಗ್ಯಕರ ದೇಹವು ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಆದ್ದರಿಂದ, ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿಡಲು, ಒಂದು ಲೋಟ ಹಾಲನ್ನು ಸೇವಿಸುವುದರಿಂದ ನಿಮಗೆ ಪ್ರಯೋಜನಕಾರಿ.


ಉತ್ತಮ ನಿದ್ರೆಗಾಗಿ :
ಉತ್ತಮ ನಿದ್ರೆಯನ್ನು (Sleep) ಆರೋಗ್ಯಕರ ದೇಹದ ಮೊದಲ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮಲಗುವ ಮುನ್ನ ಒಂದು ಲೋಟ ಹಾಲನ್ನು ಸೇವಿಸಿದರೆ, ಅದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಇದರಿಂದಾಗಿ ಉತ್ತಮ ನಿದ್ರೆ ನಿಮ್ಮದಾಗಲಿದೆ. ಈ ಮೂಲಕ ದಿನವಿಡೀ ನೀವು ಉತ್ಸಾಹದಿಂದಿರಲು ಸಾಧ್ಯವಾಗುತ್ತದೆ.


ಗಮನಿಸಿ: ಈ ಲೇಖನದಲ್ಲಿನ ಮಾಹಿತಿಯು ಸಾಮಾನ್ಯ ಮನೆಮದ್ದು ಸಲಹೆಗಳನ್ನು ಆಧರಿಸಿದೆ. ನಾವು ಇದನ್ನು ಖಚಿತಪಡಿಸುವುದಿಲ್ಲ. ಅವುಗಳನ್ನು ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.