Coronavirus ಬಳಿಕ ಈ ರಾಜ್ಯದಲ್ಲಿ ಹರಡಿರುವ ನಿಗೂಢ ಕಾಯಿಲೆಗೆ 2 ಬಲಿ
ಈ ನಿಗೂಢ ಕಾಯಿಲೆಯ ಅಂಶಗಳ ಕುರಿತು ವಿವಿಧ ಕೇಂದ್ರ ಸಂಸ್ಥೆಗಳು ಶುಕ್ರವಾರ ತಮ್ಮ ವರದಿಗಳನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಹೇಳಿದರು. ಇದರ ಆಧಾರದ ಮೇಲೆ ಈ ರೋಗವು ಮತ್ತೆ ಹರಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದವರು ತಿಳಿಸಿದ್ದಾರೆ.
ಅಮರಾವತಿ: ಆಂಧ್ರಪ್ರದೇಶದ ಎಲೂರಿನಲ್ಲಿ ನಿಗೂಢ ಕಾಯಿಲೆಗೆ ಮತ್ತೆ 13 ಮಂದಿ ತುತ್ತಾಗಿದ್ದಾರೆ. ಇದರೊಂದಿಗೆ ಗುರುವಾರ ನಿಗೂಢ ಕಾಯಿಲೆಗೆ ತುತ್ತಾದವರ ಸಂಖ್ಯೆ 609ಕ್ಕೆ ತಲುಪಿದೆ.
53 ಜನರಿಗೆ ಮುಂದುವರೆದ ಚಿಕಿತ್ಸೆ:
ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (ಜಿಜಿಹೆಚ್) ರೋಗಿಗಳನ್ನು ಭೇಟಿಯಾದ ನಂತರ ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೂ ಆದ ಎಕೆಕೆ ಶ್ರೀನಿವಾಸ್ ಅವರು ಇಲೂರಿನ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ 32 ಮತ್ತು ವಿಜಯವಾಡದಲ್ಲಿ (Vijayawada) 21 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 553 ರೋಗಿಗಳು ಈ ಖಾಯಿಲೆಯಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದರು.
Andhra Pradeshaದಲ್ಲಿ ಹರಡಿದ ನಿಗೂಢ ಕಾಯಿಲೆ, ಓರ್ವ ಬಲಿ, 292 ಜನರ ಸ್ಥಿತಿ ನಾಜೂಕು
ನಿಗೂಢ ಕಾಯಿಲೆಗೆ ಇಬ್ಬರು ಬಲಿ:
ಏತನ್ಮಧ್ಯೆ ವಿಜಯವಾಡದ ಜಿಎಚ್‌ಸಿಯಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದರೂ ಈ ನಿಗೂಢ ಕಾಯಿಲೆಯಿಂದಲೇ ಸಾವನ್ನಪ್ಪಿದ್ದಾರೆ ಎಂಬುದನ್ನು ಆಡಳಿತದ ವತಿಯಿಂದ ತಳ್ಳಿಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿಗಳು ಸಾವನ್ನಪ್ಪಿರುವವರಲ್ಲಿ ಓರ್ವ ಮಹಿಳೆ, ಓರ್ವ ಪುರುಷ ಸೇರಿದ್ದಾರೆ. ಮಹಿಳೆಯು ಕೋವಿಡ್ -19 (Covid 19) ಸೋಂಕಿನಿಂದ ಬಳಲುತ್ತಿದ್ದರು ಮತ್ತು ಪುರುಷ ರೋಗಿಯು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇಲೂರಿನಿಂದ ವಿಜಯವಾಡಕ್ಕೆ ಕರೆತಂದ ಕೆಲವು ರೋಗಿಗಳಿಗೆ ಇತರ ಕಾಯಿಲೆಗಳು ಪತ್ತೆಯಾಗಿವೆ ಎಂದು ನಾವು ಕಂಡುಕೊಂಡಿದ್ದೇವೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
Corona Vaccine ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇಬ್ಬರು ಅಸ್ವಸ್ಥ, ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ
ಈ ನಿಗೂಢ ಕಾಯಿಲೆಯ (Mysterious disease) ಅಂಶಗಳ ಕುರಿತು ವಿವಿಧ ಕೇಂದ್ರ ಸಂಸ್ಥೆಗಳು ಶುಕ್ರವಾರ ತಮ್ಮ ವರದಿಗಳನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು. ಇದರ ಆಧಾರದ ಮೇಲೆ ಈ ರೋಗವು ಮತ್ತೆ ಹರಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದಾಗ್ಯೂ ಈ ನಿಗೂಢ ಕಾಯಿಲೆಗೆ ಜಲ ಮಾಲಿನ್ಯ ಕಾರಣವಲ್ಲ ಎಂದು ಪ್ರಾಥಮಿಕ ವರದಿಗಳಿಂದ ಸ್ಪಷ್ಟವಾಗಿದೆ. ಆದರೆ ನಾವು ಅದನ್ನು ಆಳವಾಗಿ ತನಿಖೆ ಮಾಡುತ್ತಿದ್ದೇವೆ. ಇಲೂರಿನ ನಾಗರಿಕರು ಭಯಭೀತರಾಗಿ ಸರಬರಾಜು ಮಾಡಿದ ನೀರನ್ನು ಮಾತ್ರ ಬಳಸಬೇಕಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.