ನವದೆಹಲಿ :  ಐವತ್ತು ವರ್ಷದ ಬಳಿಕ ನೀವು ಖಂಡಿತಾ ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಐವತ್ತು ದಾಟಿದ ಮೇಲೆ ಆರೋಗ್ಯದ ಮೇಲೆ ಸಾಕಷ್ಟು ಗಮನ ಇಡಬೇಕು. ಯಾಕೆಂದರೆ ಈ ಹಂತದಲ್ಲಿ ಹಲವು ರೋಗಗಳು ನಿಮ್ಮನ್ನು ಅಟಕಾಯಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ವಯಸ್ಸು ಆದಂತೆ ನಮ್ಮ ಮೂಳೆ ಮತ್ತು ಮಾಂಸಖಂಡಗಳು ದುರ್ಬಲಗೊಳ್ಳುತ್ತದೆ. ಹಾಗಾಗಿ, ಈ ಹೊತ್ತಿನಲ್ಲಿ ಆಹಾರ (food system) ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಹಾಗಾದರೆ, ತಜ್ಞರು ಹೇಳುವ ಪ್ರಕಾರ ನಿಮ್ಮ ಆಹಾರದ ಮೆನು ಹೇಗಿರಬೇಕು. ಇಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

೧. ಮೊಟ್ಟೆ
ಐವತ್ತು ದಾಟಿದ ಮೇಲೆ ಊಟದ ತಟ್ಟೆಯಲ್ಲೊಂದು ಮೊಟ್ಟೆ (Egg) ಇರಲೇಬೇಕು. ಯಾಕೆಂದರೆ, ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಇರುತ್ತದೆ. ವಿಟಮಿನ್ ಡಿ ಭರ್ಜರಿಯಾಗಿ ಸಿಗುತ್ತದೆ. ಇದರಿಂದ ಶರೀರದ ಮಾಂಸಖಂಡ ಮತ್ತು ಮೂಳೆ ಬಲಿಷ್ಠವಾಗುತ್ತದೆ. 


ಇದನ್ನೂ ಓದಿ : ಮಳೆಗಾಲದಲ್ಲಿ ತಿನ್ನಲೇ ಬೇಕು ಈ ಎರಡು ಚಟ್ನಿ..! ರುಚಿಗೂ ಹೌದು, ಇಮ್ಯೂನಿಟಿಗೂ ಹೌದು..!


೨. ಫ್ರೆಶ್ ಹಣ್ಣು ತರಕಾರಿ:
೫೦ ದಾಟಿದ ಮೇಲೆ ಊಟದ ಮೆನುವಿನಲ್ಲಿ ಹಣ್ಣು ಮತ್ತು ತಾಜಾ ಹಸಿರು ತರಕಾರಿ (fruit, vegetables) ಇಟ್ಟುಕೊಳ್ಳುವುದು ಬಹು ಮುಖ್ಯ.  ಫ್ರೆಶ್ ಹಣ್ಣು ಮತ್ತು ತರಕಾರಿ ಸೇವನೆಯಿಂದ ದೇಹಕ್ಕೆ ಎಲ್ಲಾ ಅಗತ್ಯ ಪೋಷಕಾಂಶಗಳು ಸಿಗುತ್ತವೆ. 


೩. ಏಕ ದಳ ಧಾನ್ಯಗಳು
ಏಕದಳ ಧಾನ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಸಿಗುತ್ತವೆ. ಇವು ದೇಹಾರೋಗ್ಯಕ್ಕೂ ಒಳ್ಳೆಯದು. ರಾಗಿ (Ragi), ಜೋಳ, ಗೋದಿ ಮುಂತಾದ ಏಕದಳ ಧಾನ್ಯಗಳ ಸೇವನೆಯಿಂದ ಆರೋಗ್ಯ ಚೆನ್ನಾಗಿರುತ್ತದೆ.


ಇದನ್ನೂ ಓದಿ : Food Avoid With Egg: ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ


೪. ಕಾಫಿ, ಅಲ್ಕೋಹಾಲ್ ಕಡಿಮೆ ಸೇವನೆ
ವಯಸ್ಸು ಆದಂತೆ ಕಾಫಿ (Coffee), ಟೀ ಸೇವನೆ ಕಡಿಮೆ ಮಾಡಬೇಕು. ಯಾಕೆಂದರೆ ಇದರಿಂದ ದೇಹದಲ್ಲಿ ಆಸಿಡಿಟಿ ಪ್ರಮಾಣ ಹೆಚ್ಚಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣವೂ ಹೆಚ್ಚಾಗುತ್ತದೆ. ನಿದ್ರೆ ಕಡಿಮೆಯಾಗುತ್ತದೆ. ವಯಸ್ಸಾದಂತೆ ಆಲ್ಕೋಹಾಲ್ ಸೇವನೆ ಕೂಡಾ ಕಡಿಮೆ ಮಾಡಬೇಕು. ಅಥವಾ ಬಿಡಬೇಕು. 


೫. ಉಪ್ಪು ಸೇವನೆ ಕಡಿಮೆ ಮಾಡಬೇಕು.
ಉಪ್ಪು (Salt) ಹೆಚ್ಚು ತಿಂದರೆ ಬಿಪಿ ಜಾಸ್ತಿ ಆಗುತ್ತದೆ. ವಯಸ್ಸಾದಂತೆ ಉಪ್ಪು ಕಡಿಮೆ ತಿಂದಷ್ಟೂ ಒಳ್ಳೆಯದು. ಜೊತೆಗೆ ಕರಿದ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು.  ಖಾರ ಮಸಾಲೆ ವಸ್ತುಗಳನ್ನು ವರ್ಜಿಸಿದರೆ ಉತ್ತಮ 


ಇದನ್ನೂ ಓದಿ : Right Way To Take Shower: ಬೆಳಿಗ್ಗೆ ಹೊತ್ತು ದಣಿದಂತೆ ಭಾಸವಾಗುತ್ತಿದೆಯೇ, ಸ್ನಾನ ಮಾಡುವಾಗ ನೀವೂ ಕೂಡ ಈ ತಪ್ಪನ್ನು ಮೂಡುತ್ತೀರಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.