ಬಚ್ಚನ್ ಮೊಮ್ಮಗನಿಗೆ ಇದೆಯಂತೆ ಗುಣವಾಗದ ಕಾಯಿಲೆ ! ತಾಯಿ ಶ್ವೇತಾ ಬಚ್ಚನ್ ನಿಂದ ಬಂದಿರುವ ರೋಗ ಎಂದ ಅಗಸ್ತ್ಯ ನಂದಾ!
Agastya Nanda Latest News :ಅಗಸ್ತ್ಯ ನಂದಾ ಅವರನ್ನು ಕಾಡುತ್ತಿರುವ ಕಾಯಿಲೆಯ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಕಾಯಿಲೆಯಿಂದಾಗಿ ಅವರ ಮೊದಲ ಚಿತ್ರದ ಚಿತ್ರೀಕರಣದ ವೇಳೆ ಅನುಭವಿಸಿದ ತೊಂದರೆಗಳ ಬಗ್ಗೆಯೂ ಹೇಳಿದ್ದಾರೆ.
Agastya Nanda Latest News : 'ದಿ ಆರ್ಚೀಸ್' ಮೂಲಕ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಇತ್ತೀಚೆಗೆ ತಮ್ಮ ಸಹೋದರಿ ನವ್ಯಾ ನವೇಲಿ ನಂದಾ ಅವರ ಜನಪ್ರಿಯ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಅಗಸ್ತ್ಯ ನಂದಾ ಇಲ್ಲಿ ತಮ್ಮ ಆರೋಗ್ಯದ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ಅವರನ್ನು ಕಾಡುತ್ತಿರುವ ಕಾಯಿಲೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈ ಕಾಯಿಲೆಯಿಂದಾಗಿ ಅವರ ಮೊದಲ ಚಿತ್ರದ ಚಿತ್ರೀಕರಣದ ವೇಳೆ ಅನುಭವಿಸಿದ ತೊಂದರೆಗಳ ಬಗ್ಗೆಯೂ ಹೇಳಿದ್ದಾರೆ.
ಅಗಸ್ತ್ಯ ನಂದಾಗಿದೆ ಈ ಸಮಸ್ಯೆ :
ಅಗಸ್ತ್ಯ ನಂದಾ ಅವರು ಚರ್ಮದ ಕಾಯಿಲೆಯಾದ ಎಸ್ಜಿಮಾದಿಂದ ಬಳಲುತ್ತಿದ್ದಾರೆ. ಇದರಿಂದ ತಾವು ಅನುಭವಿಸುವ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಮೊದಲ ಚಿತ್ರದ ಚಿತ್ರೀಕರಣದ ಸಮಯದಲ್ಲೂ ಎಸ್ಜಿಮಾ ಅವರನ್ನು ಬಹುವಾಗಿ ಕಾಡಿತ್ತಂತೆ. ತಮ್ಮ ತಾಯಿ ಶ್ವೇತಾ ಬಚ್ಚನ್ ನಂದಾ ಅವರಿಂದ ಈ ರೋಗ ತಮಗೆ ಬಂದಿರುವುದಾಗಿ ಅಗಸ್ತ್ಯ ಹೇಳಿದ್ದಾರೆ.
ಇದನ್ನೂ ಓದಿ : ನಿತ್ಯ ಮಾಡುವ ಈ ಸಣ್ಣ ತಪ್ಪುಗಳನ್ನು ತಿದ್ದಿಕೊಂಡರೆ ಬ್ಲಡ್ ಶುಗರ್ ಸದಾ ನಿಯಂತ್ರಣದಲ್ಲಿಯೇ ಇರುತ್ತದೆ !
ಎಸ್ಜಿಮಾ ಎಂದರೇನು ? :
ಎಸ್ಜಿಮಾ ಎಂಬುದು ಚರ್ಮದ ಕಾಯಿಲೆ. ಈ ಕಾಯಿಲೆ ಇದ್ದಾಗ ಚರ್ಮದ ಮೇಲೆ ವಿವಿಧ ಸ್ಥಳಗಳಲ್ಲಿ ಊತ, ತುರಿಕೆ, ಒರಟುತನ ಮತ್ತು ಕೆಂಪು ಹರಳಿನ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಈ ರೋಗದ ವಿಧಗಳೆಂದರೆ - ಅಟೊಪಿಕ್ ಡರ್ಮಟೈಟಿಸ್, ಡಿಶಿಡ್ರೊಟಿಕ್ ಎಸ್ಜಿಮಾ, ಹ್ಯಾಂಡ್ ಎಸ್ಜಿಮಾ, ನ್ಯೂರೋಡರ್ಮಟೈಟಿಸ್, ನಮ್ಯುಲರ್ ಎಸ್ಜಿಮಾ, ಸ್ಟ್ಯಾಸಿಸ್ ಡರ್ಮಟೈಟಿಸ್, ಕಾಂಟ್ಯಾಕ್ಟ್ ಡರ್ಮಟೈಟಿಸ್. ಪ್ರತಿಯೊಂದು ರೀತಿಯ ಎಸ್ಜಿಮಾದ ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ.
ಎಸ್ಜಿಮಾ ಗುಣವಾಗಲು ಎಷ್ಟು ದಿನಗಳು ಬೇಕು? :
ಎಸ್ಜಿಮಾ ಜೀವನ ಪರ್ಯಂತ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಈ ರೋಗವು ಗರ್ಭದಲ್ಲಿ ಪ್ರಾರಂಭವಾಗಿ ಪ್ರೌಢಾವಸ್ಥೆಯವರೆಗೂ ಮುಂದುವರಿಯಬಹುದು. ಆದರೆ ಕೆಲವು ಸಂದರ್ಭಗಳಲ್ಲಿ, ಈ ರೋಗವು ವಯಸ್ಸಾಗುತ್ತಿದ್ದಂತೆ ತನ್ನಷ್ಟಕ್ಕೇ ಗುಣವಾಗುತ್ತದೆ.
ಎಸ್ಜಿಮಾಗೆ ಚಿಕಿತ್ಸೆ ಏನು? :
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಎಸ್ಜಿಮಾ ಗುಣಪಡಿಸಲಾಗದ ಚರ್ಮದ ಕಾಯಿಲೆಯಾಗಿದೆ. ಚಿಕಿತ್ಸೆ ನೀಡಬಹುದಾದರೂ, ರೋಗದ ಲಕ್ಷಣಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಇದು ದೀರ್ಘಕಾಲದ ಆರೋಗ್ಯ ಸ್ಥಿತಿಯಾಗಿದ್ದು ಅದು ಯಾವುದೇ ಸಮಯದಲ್ಲಿ ಕೊನೆಗೊಳ್ಳಲೂಬಹುದು ಮತ್ತೆ ಮರಳಿಯೂ ಬರಬಹುದು.
ಇದನ್ನೂ ಓದಿ : Strawberry juice: ಸ್ಟ್ರಾಬೆರಿ ಹಣ್ಣನ್ನು ಜ್ಯೂಸ್ ಮಾಡಿ ಕುಡಿದರೆ ಏನಾಗುತ್ತೆ ಗೊತ್ತಾ?
ಈ ಚರ್ಮದ ಕಾಯಿಲೆಗೆ ಕಾರಣಗಳೇನು? :
ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಕಾರಣ ಏನು ಎನ್ನುವ ಅಂಶ ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಜೀನ್‌ಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಮನೆಯಲ್ಲಿ ಯಾರಾದರೂ ಎಸ್ಜಿಮಾದಿಂದ ಬಳಲುತ್ತಿದ್ದರೆ, ನೀವು ಸಹ ಅದರಿಂದ ಬಳಲಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.