Alcohol Poisoning Emergency Treatment: ಇತೀಚೆಗಷ್ಟೇ ಬಿಹಾರದ ಸರನ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ 60 ಮಂದಿ ಪ್ರಾಣ ಕಳೆದುಕೊಂಡಿರುವ ಸುದ್ದಿ ನಿಮಗೆಲ್ಲರಿಗೂ ತಿಳಿದೇ ಇದೆ. ಹಾಗಾದ್ರೆ ಅವರಿಗೆ ಮದ್ಯ ವಿಷಪೂರಿತವಾಗಿದೆ ಎಂಬುದು ತಿಳಿದಿರಲಿಲ್ಲವೇ ಅಥವಾ ಚಿಕಿತ್ಸೆ ತಡವಾಗಿ ಸಾವನ್ನಪ್ಪಿದ್ದಾರೆಯೇ? ಚಿಕಿತ್ಸೆ ಪಡೆದು ಬದುಕಿದ್ದರೆ ಅವರಿಗೆ ಬೇರೆ ಯಾವುದೇ ದೈಹಿಕ ಸಮಸ್ಯೆ ಬರುತ್ತಿರಲಿಲ್ಲವೇನೋ? ಎಂಬ ಪ್ರಶ್ನೆಗಳು ನಿಮ್ಮ ಮನದಲ್ಲಿಯೂ ಮೂಡಿರಬಹುದು, ಇದರೊಂದಿಗೆ ಯಾರಾದರೂ ವಿಷಪೂರಿತ ಮದ್ಯವನ್ನು ಸೇವಿಸಿದರೆ ತಕ್ಷಣವೇ ಕಾಣಿಸಿಕೊಳ್ಳುವ ಅದರ ಲಕ್ಷಣಗಳೇನು ಮತ್ತು ಅಂತಹ ವ್ಯಕ್ತಿಯನ್ನು ಬದುಕಿಸಲು ತಕ್ಷಣಕ್ಕೆ ನೀಡಬೇಕಾದ ಪ್ರಥಮ ಚಿಕಿತ್ಸೆ ಏನು? ಬದುಕುಳಿದರೂ ಕೂಡ ವಿಷಪೂರಿತ ಸಾರಾಯಿ ಸೇವನೆಯಿಂದ ಅವರ ದೇಹದ ಯಾವ ಭಾಗಗಳು ಹಾನಿಗೊಳಗಾಗುತ್ತವೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ ಬನ್ನಿ,


COMMERCIAL BREAK
SCROLL TO CONTINUE READING

ಆಲ್ಕೋಹಾಲ್ ವಿಷಕಾರಿಯಲ್ಲದಿದ್ದರೂ ಸಹ, ಅದು ನಿಮ್ಮ ಉಸಿರಾಟದಿಂದ ಹಿಡಿದು ಹೃದಯ ಬಡಿತ ಮತ್ತು ರಕ್ತದೊತ್ತಡದವರೆಗೆ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ನೀವು ಶುಗರ್ ರೋಗಿಗಳಾಗಿದ್ದರೆ, ಆಗ ಇದ್ದಕ್ಕಿದ್ದಂತೆ ಸಕ್ಕರೆ ಹೆಚ್ಚಾಗುವ ಅಪಾಯವಿರುತ್ತದೆ. ಇನ್ನೊಂದೆಡೆ  ಒಂದು ವೇಳೆ ಆಲ್ಕೋಹಾಲ್ ವಿಷಕಾರಿಯಾಗಿದ್ದರೆ, ಅದು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಜೀವವನ್ನು ಉಳಿಸಿದರೂ, ನಿಮ್ಮ ಕಣ್ಣುಗಳು ಕಳೆದುಕೊಳ್ಳಬಹುದು ಮತ್ತು ಯಕೃತ್ತು ಅಥವಾ ಮೂತ್ರಪಿಂಡವು ತುಂಬಾ ಹಾನಿಗೊಳಗಾಗಬಹುದು. ಹೀಗಾಗಿ ಎಲ್ಲಕ್ಕಿಂತ ಮೊದಲು  ಮದ್ಯವನ್ನು ಕುಡಿಯುವುದನ್ನು ತಪ್ಪಿಸಿ ಮತ್ತು ವಿಷಯುಕ್ತ ಮದ್ಯ ಸೇವಿಸಿದ ಪೀಡಿತ ವ್ಯಕ್ತಿ ನಿಮ್ಮ ಮುಂದೆ ಬಂದರೆ, ನೀವು ಅವನ ಜೀವವನ್ನು ಹೇಗೆ ಉಳಿಸಬಹುದು ಎಂಬುದನ್ನು ತಿಳಿದುಕೊಳ್ಳಿ.


ವಿಷಯುಕ್ತ ಆಲ್ಕೋಹಾಲ್ ಸೇವಿಸಿದ ತಕ್ಷಣ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ವಿಷಪೂರಿತ ಮದ್ಯವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ, ಪೀಡಿತ ವ್ಯಕ್ತಿಯ ಉಸಿರಾಟ ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಗೊಂದಲದ ಭಾವನೆಯೊಂದಿಗೆ ವಾಂತಿ ಪ್ರಾರಂಭವಾಗುತ್ತದೆ. ಚರ್ಮದ ಬಣ್ಣವು ನೀಲಿ ಅಥವಾ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಮತ್ತು ದೇಹದ ಉಷ್ಣತೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅವನು ಪ್ರಜ್ಞೆ ತಪ್ಪಿದಂತೆ ವರ್ತಿಸಲು ಪ್ರಾರಂಭಿಸುತ್ತಾನೆ.  ಈ ಸಮಯದಲ್ಲಿ ಅವನಿಗೆ ಪ್ರಥಮ ಚಿಕಿತ್ಸೆ ನೀಡಬೇಕು ಮತ್ತು ತಕ್ಷಣ ವೈದ್ಯರ ಸಹಾಯವನ್ನು ತೆಗೆದುಕೊಳ್ಳಬೇಕು.


ತಕ್ಷಣ ಏನು ಮಾಡಬೇಕು?
>> ರೋಗಿಗೆ ಸಾಧ್ಯವಾದಷ್ಟು ನೀರನ್ನು ಕುಡಿಸಿ. ಇದರಿಂದ ನಿರ್ಜಲೀಕರಣವನ್ನು ತಪ್ಪಿಸಬಹುದು, ಜೊತೆಗೆ ಹೆಚ್ಚುವರಿ ನೀರು, ರೋಗಿಯ ದೇಹವನ್ನು ಪ್ರವೇಶಿಸಿದ ವಿಷಯುಕ್ತ ಆಲ್ಕೋಹಾಲ್ ಮೂತ್ರ ಅಥವಾ ವಾಂತಿ ಮೂಲಕ ಹೊರಬರುತ್ತದೆ. ನೀರು ಪ್ರಥಮ ಚಿಕಿತ್ಸೆಯಾಗಿದೆ.
>> ಪೀಡಿತ ವ್ಯಕ್ತಿಗೆ ಉಸಿರಾಡಲು ತೊಂದರೆಯಾಗದಂತೆ ಆಮ್ಲಜನಕವನ್ನು ಜೋಡಿಸಿ. ನೀವು ಬಯಸಿದರೆ, ಮೂಗಿಗೆ ಜೋಡಿಸಲಾಗುವ ಪೈಪ್ ಆಮ್ಲಜನಕವನ್ನು ಬಳಸಿ, ಇದರಿಂದ ಅವನಿಗೆ ವಾಂತಿಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.
>> ರೋಗಿಯನ್ನು ಮಲಗಲು ಬಿಡಬೇಡಿ ಏಕೆಂದರೆ ಅವನು ಮಲಗಿದರೆ ಕೋಮಾ ಸ್ಥಿತಿಗೆ ಹೋಗಬಹುದು. ಆದ್ದರಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುವ ಮೂಲಕ ಅವನನ್ನು ಎಚ್ಚರವಾಗಿರಿಸಲು ಪ್ರಯತ್ನಿಸಿ.
>> ಕಡಿಮೆ ದೇಹದ ಉಷ್ಣತೆಯಿಂದಾಗಿ ಅವನು ಹೆಚ್ಚು ಬಳಲುತ್ತಿದ್ದರೆ, ಆತನ ಮೇಲೆ ಬೆಚ್ಚನೆಯ ಹೊದಿಕೆ ಹಾಕಿ.
>> ಪೀಡಿತನ ಜೊತೆಗೆ ಮಾತನಾಡುವುದನ್ನು ಮುಂದುವರಿಸಿ ಮತ್ತು ಅವನನ್ನು ಪ್ರಜ್ಞಾ ಸ್ಥಿತಿಯಲ್ಲಿ ಇರಲು ಪ್ರೋತ್ಸಾಹಿಸಿ.
>> ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ಆತನ ಉಸಿರುಗಟ್ಟದಂತೆ ಆತನನ್ನು ಒಂದು ಮಗ್ಗುಲಲ್ಲಿ ಮಲಗುವಂತೆ ಮಾಡಿ. ಇದರಿಂದ ವಾಂತಿಯ ಸಂದರ್ಭದಲ್ಲಿ, ಅವನು ಅದನ್ನು ಸುಲಭವಾಗಿ ಹೊರಹಾಕಬಹುದು.
>> ಹೊಟ್ಟೆಯಲ್ಲಿರುವ ಪಂಪ್ ಅಥವಾ ಟ್ಯೂಬ್‌ನಿಂದ ಅವನು ಸೇವಿಸಿದ ಆಲ್ಕೋಹಾಲ್ ಅನ್ನು ಹೊರತೆಗೆಯಲು ನೀವು ಖಂಡಿತವಾಗಿ ವೈದ್ಯರ ಸಹಾಯ ಪಡೆದುಕೊಳ್ಳಬೇಕು.. ನೀವೇ ಟ್ರೈ ಮಾಡಲು ಹೋಗಬೇಡಿ.
>> ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ರಕ್ಷಿಸಲು ರೋಗಿಯ ರಕ್ತದಿಂದ ಆಲ್ಕೋಹಾಲ್ ಪ್ರಮಾಣವನ್ನು ಕಡಿಮೆ ಮಾಡಲು ಆತನನ್ನು ತಜ್ಞರ ಬಳಿಗೆ ಕರೆದುಕೊಂಡು ಹೋಗಿ ಡಯಾಲಿಸಿಸ್ ಗೆ ಒಳಗಾಗುವಂತೆ ಮಾಡಬೇಕು.
>> ಪೀಡಿತ ವ್ಯಕ್ತಿಗೆ ಯಾವುದೇ ರೀತಿಯ ಔಷಧವನ್ನು ನೀಡಬೇಡಿ, ಏಕೆಂದರೆ ಅದು ಆಲ್ಕೋಹಾಲ್ನೊಂದಿಗೆ ಬೆರೆತು ರಿಯಾಕ್ಷನ್ ಗೆ ಕಾರಣವಾಗಬಹುದು ಮತ್ತು ಗಂಭೀರ ಸ್ಥಿತಿಯನ್ನು ಉಂಟುಮಾಡಬಹುದು.


ಇದನ್ನೂ ಓದಿ-Indian Men: ಭಾರತದಲ್ಲಿ ಪ್ರತಿ 5 ಪುರುಷರಲ್ಲಿ ಒಬ್ಬರು ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ

ವಿಷಕಾರಿ ಮದ್ಯದಿಂದ ಉಂಟಾಗುವ ಹಾನಿ ಏನು?
ವಿಷಪೂರಿತ ಮದ್ಯದಿಂದ ರೋಗಿಯ ಜೀವವನ್ನು ಉಳಿಸಿದರೂ, ಅವನು ತನ್ನ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು. ಅವನ ಸ್ಮರಣಶಕ್ತಿ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.  ಮೂತ್ರಪಿಂಡದಿಂದ ಯಕೃತ್ತಿಗೆ ಹಾನಿ ಸಂಭವಿಸಬಹುದು. ಅಧಿಕ ರಕ್ತದ ಸಕ್ಕರೆಯಿಂದಾಗಿ ಕೋಮಾ ಅಥವಾ ಪಾರ್ಶ್ವವಾಯು ಅಪಾಯವೂ ಇರುತ್ತದೆ. ಒಟ್ಟಾರೆಯಾಗಿ, ದೇಹದ ಪ್ರತಿಯೊಂದು ಅಂಗವೂ ದುರ್ಬಲವಾಗುತ್ತದೆ.


ಇದನ್ನೂ ಓದಿ-Diabetes: ಗೋಧಿ-ಅಕ್ಕಿಯ ಬದಲು ಈ ಧಾನ್ಯದ ರೊಟ್ಟಿ ಸೇವಿಸಿ ಮಧುಮೇಹವನ್ನು ನಿಯಂತ್ರಿಸಬಹುದು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.