ಈ ಒಂದು ಹಸಿರು ಸೊಪ್ಪು ಸೇವಿಸಿದರೆ ಸಾಕು ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್
ಈ ಸೊಪ್ಪಿನಲ್ಲಿ ಮಧುಮೇಹ ವಿರೋಧಿ ಅಂಶಗಳು ಕಂಡುಬರುತ್ತವೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ.
ಬೆಂಗಳೂರು : ಮಧುಮೇಹದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಚಳಿಗಾಲದಲ್ಲಿ, ತಾಪಮಾನ ಏರಿಳಿತದ ನಡುವೆ ಮಧುಮೇಹಿಗಳು ತಮ್ಮ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಕಷ್ಟಕರವಾಗುತ್ತದೆ. ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆ, ಚಳಿಯ ಕಾರಣ ವ್ಯಾಯಾಮ ಮಾಡದೇ ಇರುವುದು, ಕೆಲವೊಮ್ಮೆ ಅತಿಯಾದ ಸಿಹಿ ಅಥವಾ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ, ಚಳಿಗಾಲದಲ್ಲಿ ಜನರು ತಮ್ಮ ಆಹಾರಕ್ರಮವನ್ನು ಎಚ್ಚರಿಕೆಯಿಂದ ಅನುಸರಿಸಬೇಕು. ಮಧುಮೇಹ ರೋಗಿಗಳು ತೂಕ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುವಂಥಹ ಆಹಾರವನ್ನು ಸೇವಿಸಬೇಕು. ಇಂಥಹ ಆಹಾರದ ಪದಾರ್ಥಗಳಲ್ಲಿ ಒಂದು ಮುಳ್ಳು ಹರಿವೆ.
ಮಧುಮೇಹಿಗಳಿಗೆ ಮುಳ್ಳು ಹರಿವೆ ಹೇಗೆ ಪ್ರಯೋಜನಕಾರಿ? :
ಮುಳ್ಳು ಹರಿವೆ ಹಸಿರು ಎಲೆ ತರಕಾರಿ. ಈ ಸೊಪ್ಪಿನಲ್ಲಿ ಮಧುಮೇಹ ವಿರೋಧಿ ಅಂಶಗಳು ಕಂಡುಬರುತ್ತವೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಸಿ ಜೊತೆಗೆ ಪ್ರೋಟೀನ್ ಮತ್ತು ಅನೇಕ ರೀತಿಯ ಖನಿಜಗಳು ಮುಳ್ಳು ಹರಿವೆಯಲ್ಲಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Cumin Seeds: ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಯ ಸೌಂದರ್ಯಕ್ಕೂ ಪ್ರಯೋಜನಕಾರಿ ಜೀರಿಗೆ
ಮುಳ್ಳು ಹರಿವೆ ಹಸಿರು ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಈ ತರಕಾರಿಯ ಒಣಗಿದ ಬೀಜಗಳನ್ನು ಸಹ ತಿನ್ನಲಾಗುತ್ತದೆ. ಇದರ ಒಣಗಿದ ಬಿಳಿ ಬೀಜಗಳನ್ನು ರಾಜ್‌ಗಿರಾ ಎಂದು ಕರೆಯಲಾಗುತ್ತದೆ. ಇದನ್ನು ಲಾಡು, ಸಿಹಿತಿಂಡಿಗಳು, ಖೀರ್ ಮತ್ತು ಇತರ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಧ್ಯಯನದ ಪ್ರಕಾರ, ನಿಯಮಿತವಾಗಿ 20 ಗ್ರಾಂ ಮುಳ್ಳು ಹರಿವೆ ತಿನ್ನುವ ಜನರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.
ಮುಳ್ಳು ಹರಿವೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ :
ಮುಳ್ಳು ಹರಿವೆ ಸೇವಿಸುವುದರಿಂದ ಬೊಜ್ಜು ಹೆಚ್ಚಾಗುವುದಿಲ್ಲ.ಇದು ಹೃದಯದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮುಳ್ಳು ಹರಿವೆ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಗೋಧಿ ಹಿಟ್ಟಿನ ಬದಲು ಈ ಹಿಟ್ಟಿನ ಚಪಾತಿ ಸೇವಿಸಿದರೆ ಹೃದ್ರೋಗದ ಅಪಾಯ ಕಡಿಮೆ
ಮಧುಮೇಹದಲ್ಲಿ ಮುಳ್ಳು ಹರಿವೆ ಸೇವಿಸುವುದು ಹೇಗೆ ? :
ಮುಳ್ಳು ಹರಿವೆಯ ಪಲ್ಯವನ್ನು ತಯಾರಿಸಿ ಮಧುಮೇಹ ರೋಗಿಗಳಿಗೆ ನೀಡಬಹುದು.
ಮುಳ್ಳು ಹರಿವೆ ಸೊಪ್ಪನ್ನು ಹಿಟ್ಟಿನೊಂದಿಗೆ ಬೆರೆಸಿ ಇದರ ಚಪಾತಿ ಮಾಡಬಹುದು.
ಅದೇ ರೀತಿ, ಇದರ ಒಣ ಬೀಜಗಳನ್ನು ಅಥವಾ ರಾಜಗಿರಾ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಸೇವಿಸಬಹುದು. ನೆನೆಸಿದ ರಾಜಗಿರಾ ಬೀಜಗಳನ್ನು ಇತರ ತರಕಾರಿಗಳೊಂದಿಗೆ ಬೇಯಿಸಿ ತಿನ್ನಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.