ನಿತ್ಯ ಅಡುಗೆಯಲ್ಲಿ ತೆಂಗಿನೆಣ್ಣೆ ಬಳಸಿದರೆ ಈ ಕಾಯಿಲೆ ಶಾಶ್ವತವಾಗಿ ಪರಿಹಾರವಾಗುವುದು !
Health benefits of Coconut: ತೆಂಗಿನ ಕಾಯಿಯನ್ನು ನಾನಾ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಚಟ್ನಿ, ಸಾಂಬಾರ್, ಗಸಿ, ಹುಳಿ, ಕೂಟು, ಪಲ್ಯ, ಹೀಗೆ ಹಲವು ಬಗೆಯ ಅಡುಗೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ.
Health benefits of Coconut : ತೆಂಗಿನ ಕಾಯಿ ಹಾಕಿದ ಅಡುಗೆಯ ರುಚಿ ದುಪ್ಪಟ್ಟಾಗುತ್ತದೆ. ತೆಂಗಿನ ಕಾಯಿ ಬಳಸಿದ ಅಡುಗೆಯ ಘಮ ಮತ್ತು ರುಚಿಗೆ ಯಾವ ಸಾಟಿಯೂ ಇರುವುದಿಲ್ಲ. ತೆಂಗಿನ ಕಾಯಿಯನ್ನು ನಾನಾ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಚಟ್ನಿ, ಸಾಂಬಾರ್, ಗಸಿ, ಹುಳಿ, ಕೂಟು, ಪಲ್ಯ, ಹೀಗೆ ಹಲವು ಬಗೆಯ ಅಡುಗೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಅನೇಕ ಬಗೆಯ ಸಿಹಿ ತಿಂಡಿಗಳಲ್ಲಿಯೂ ತೆಂಗಿನಕಾಯಿ ಬಳಸಲಾಗುತ್ತದೆ. ಇನ್ನು ಕರಾವಳಿ ಭಾಗದಲ್ಲಿ ತೆಂಗು ಇದ್ದರೇನೆ ಅಡುಗೆ, ಅಲ್ಲಿ ತೆಂಗಿನಕಾಯಿ ಬಳಸದ ಅಡುಗೆಯನ್ನು ಊಹಿಸುವುದು ಕೂಡಾ ಕಷ್ಟ. ಪೌಷ್ಟಿಕಾಂಶದಿಂದ ಕೂಡಿರುವ ತೆಂಗು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ತೆಂಗಿನ ಕಾಯಿಯ 5 ಆರೋಗ್ಯ ಪ್ರಯೋಜನಗಳು :
1. ತೂಕ ಇಳಿಕೆಗೆ ಸಹಕಾರಿ :
ತೆಂಗಿನಕಾಯಿಯಲ್ಲಿ ಫೈಬರ್ ಪ್ರಮಾಣ ಅಧಿಕವಾಗಿರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ನಾರಿನಂಶವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. 12 ವಾರಗಳವರೆಗೆ ದಿನಕ್ಕೆ 30 ಗ್ರಾಂ ಫೈಬರ್ ಸೇವಿಸುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಅಧ್ಯಯನವೊಂದು ಕಂಡುಹಿಡಿದಿದೆ.
ಇದನ್ನೂ ಓದಿ : ಪದೇ ಪದೇ ಕಾಡುವ ಸೀನುವ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲ ಮನೆಮದ್ದುಗಳಿವು
2. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ :
ತೆಂಗಿನಕಾಯಿ ಉತ್ತಮ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ. ಫೈಬರ್ ಜೀರ್ಣಾಂಗ ಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಪ್ರೋಟೀನ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. 4 ವಾರಗಳ ಕಾಲ ಪ್ರತಿದಿನ 20 ಗ್ರಾಂನಷ್ಟು ತೆಂಗಿನಕಾಯಿ ಸೇವಿಸುವುದರಿಂದ ಮಲಬದ್ಧತೆ ಮತ್ತು ಜೀರ್ಣಕಾರಿ ಕಾಯಿಲೆಗಳನ್ನು ಸುಧಾರಿಸುತ್ತದೆ.
3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ನಂತಹ ಉತ್ಕರ್ಷಣ ನಿರೋಧಕಗಳು ತೆಂಗಿನಕಾಯಿಯಲ್ಲಿ ಹೇರಳವಾಗಿ ಇರುತ್ತವೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 12 ವಾರಗಳ ಕಾಲ ಪ್ರತಿದಿನ 10 ಗ್ರಾಂ ತೆಂಗಿನ ಕಾಯಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.
ಇದನ್ನೂ ಓದಿ :ಚಳಿಗಾಲದಲ್ಲಿ ಈ ಸೊಪ್ಪನ್ನು ತಿಂದರೆ ಈ ರೋಗಗಳು ಹತ್ತಿರವೂ ಸುಳಿಯುವುದಿಲ್ಲವಂತೆ
4. ಹೊಳೆಯುವ ತ್ವಚೆ ಮತ್ತು ಕೂದಲಿಗಾಗಿ :
ತೆಂಗಿನಕಾಯಿ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಮುಖವಾದ ವಿಟಮಿನ್-ಇ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತದೆ. ವಿಟಮಿನ್ ಇ ಒಂದು ಉತ್ಕರ್ಷಣ ನಿರೋಧಕವಾಗಿದ್ದು ಅದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ವಯಸ್ಸಾದ ಚಿಹ್ನೆಗಳನ್ನು ಮರೆ ಮಾಚಬಹುದು.
5. ಹೃದಯ ಯೌವನಕ್ಕಾಗಿ :
ತೆಂಗಿನಕಾಯಿ MCTs ಹೊಂದಿರುತ್ತದೆ. ಇದು ಒಂದು ರೀತಿಯ ಕೊಬ್ಬು. ಇದು ಇತರ ಕೊಬ್ಬುಗಳಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ. MCT ಗಳು ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.
ಇದನ್ನೂ ಓದಿ :ಮುಂಜಾನೆ ಹಳಸಿದ ಬಾಯಲ್ಲಿ ಈ ನೀರನ್ನು ಕುಡಿದರೆ ಅತಿ ವೇಗವಾಗಿ ತೂಕ ಕಡಿಮೆ ಮಾಡಬಹುದು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.