ದಿನಕ್ಕೊಂದು ಮೊಟ್ಟೆ ತಿಂದು ಫಿಟ್ & ಫೈನ್ ಆಗಿರಿ..!
ಪ್ರೋಟೀನ್ ಯುಕ್ತ ಆಹಾರಗಳ ಪೈಕಿ ಅಗ್ರ ಸ್ಥಾನದಲ್ಲಿ ಮೊಟ್ಟೆಯಿದೆ. ಯಾಕಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್‌ಗಳು ನಮ್ಮ ದೇಹದಲ್ಲಿ ಅತೀ ಸುಲಭವಾಗಿ ಜೀರ್ಣಿಸಲ್ಪಡುತ್ತವೆ.
ಬೆಂಗಳೂರು : ದಿನಕ್ಕೊಂದು ಮೊಟ್ಟೆ ತಿಂದು ವೈದ್ಯರಿಂದ ದೂರವಿರಿ ಅನ್ನುವ ಮಾತಿದೆ. ಹಾಗಂತ ಎರಡಕ್ಕಿಂತ ಹೆಚ್ಚಿನ ಮೊಟ್ಟೆ ತಿಂದ್ರೆ ಅಪಾಯವೇನಿಲ್ಲ. ಅಂದ್ರೆ ಒಬ್ಬ ವ್ಯಕ್ತಿ ದಿನಕ್ಕೆ 3 ರಿಂದ 4 ಮೊಟ್ಟೆಯನ್ನ ಯಾವುದೇ ಭಯವಿಲ್ಲದೆ ತಿನ್ನಬಹುದು ಅಂತ ಬಹಳಷ್ಟು ಸಂಶೋಧನೆಗಳ ವರದಿಯಲ್ಲಿ ಹೇಳಲಾಗಿದೆ (Benefits of egg) ಇನ್ನು ಮೊಟ್ಟೆಯಲ್ಲಿರುವ ಪ್ರಮುಖ ಪೋಷಕಾಂಶಗಳನ್ನ ತಿಳಿಯೋಣ.
ಒಂದು ಮೊಟ್ಟೆಯಲ್ಲಿ 75ರಷ್ಟು ಕ್ಯಾಲೋರಿಗಳಿದ್ರೆ, 7 ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್, 5 ಗ್ರಾಂ ನಷ್ಟು ಕೊಬ್ಬು ಮತ್ತು 1.6 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, ಜೊತೆಗೆ ಕಬ್ಬಿಣದ ಅಂಶ, ವಿಟಮಿನ್‌ಗಳು, ಖನಿಜಗಳು ಮತ್ತು ಕ್ಯಾರೊಟಿನಾಯ್ಡ್ಗಳಿವೆ (Health benefits of egg). ಮೊಟ್ಟೆಯಲ್ಲಿ ರಂಜಕ, ಕ್ಯಾಲ್ಸಿಯಂ, ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ ಮತ್ತು ಮಧ್ಯಮ ಪ್ರಮಾಣದ ಸೋಡಿಯಂ ಅನ್ನು ಹೊಂದಿದೆ. ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಸೆಲೆನಿಯಮ್ ಮತ್ತು ಸತು ಸೇರಿದಂತೆ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಮೊಟ್ಟೆ ಒಳಗೊಂಡಿದೆ. ಮೊಟ್ಟೆಯ ಹಳದಿ ಲೋಳೆಯು ಕಬ್ಬಿಣ ಮತ್ತು ಸತುವಿನ ಪೂರೈಕೆಗೆ ಪ್ರಮುಖ ಕೊಡುಗೆ ಎನ್ನಬಹುದು.
ಇದನ್ನೂ ಓದಿ : Black Tea : ಚರ್ಮದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತೆ 'ಬ್ಲಾಕ್ ಟೀ'!
ಪ್ರೋಟೀನ್ ಯುಕ್ತ ಆಹಾರಗಳ ಪೈಕಿ ಅಗ್ರ ಸ್ಥಾನದಲ್ಲಿ ಮೊಟ್ಟೆಯಿದೆ. ಯಾಕಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್‌ಗಳು ನಮ್ಮ ದೇಹದಲ್ಲಿ ಅತೀ ಸುಲಭವಾಗಿ ಜೀರ್ಣಿಸಲ್ಪಡುತ್ತವೆ. ಒಬ್ಬ ವ್ಯಕ್ತಿ ಈಡೀ ದಿನ ಚಟುವಟಿಕೆಯಿಂದ ಮತ್ತು ಕ್ರಿಯಾ ಶೀಲವಾಗಿರಬೇಕಾದರೆ ದೇಹಕ್ಕೆ ಪ್ರೋಟೀನ್ ಬೇಕೇ ಬೇಕು. ದಿನದ ಆರಂಭದಲ್ಲೇ ಈ ಪ್ರೋಟೀನ್ ಸೇವನೆ ನಮ್ಮನ್ನು ಚಟುವಟಿಕೆಯಿಂದಿಡಲು ಸಹಕಾರಿ. ಪ್ರೋಟೀನ್ ಸೇವನೆಯಿಂದ ಸ್ನಾಯು, ಮೂಳೆ, ಚರ್ಮ, ಕೂದಲು ಮತ್ತು ದೇಹದ ಇನ್ನಿತರ ಭಾಗಕ್ಕೆ ಪ್ರೋಟೀನ್ ಅತ್ಯಗತ್ಯ. ಹೀಗಿರುವಾಗ ಮೊಟ್ಟೆಯನ್ನ ಪ್ರತಿದಿನ ತಪ್ಪದೇ ಬೆಳ್ಳಗ್ಗಿನ ಉಪಾಹಾರಕ್ಕೆ ಸೇವಿಸುವುದು ಉತ್ತಮ (egg for breakfast). ಮೊಟ್ಟೆಗಳನ್ನು ತಿನ್ನಲು ಮತ್ತೊಂದು ಉತ್ತಮ ಕಾರಣ ಅಂದರೆ ಮೊಟ್ಟೆ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಯಾರೆಲ್ಲ ತೂಕ ಇಳಿಸಬೇಕು ಅಂತ ಡಯೇಟ್‌ನಲ್ಲಿದ್ದೀರಿ ಅವರಿಗೆಲ್ಲ ಮೊಟ್ಟೆ ಬೆಸ್ಟ್ ಫುಡ್ (egg for weight lose).
ಹೃದಯದ ಆರೋಗ್ಯಕ್ಕೆ ಒಳ್ಳೆಯದು..!
ಮೊಟ್ಟೆಯಲ್ಲಿ ಕೊಬ್ಬಿನ ಅಂಶವಿರೋದ್ರಿಂದ ಮೊಟ್ಟೆಯ ಸೇವನೆ ಹೃದಯದಕ್ಕೆ ಒಳ್ಳೆಯದಲ್ಲ ಅನ್ನುವ ಮಾತಿದೆ. ಆದ್ರೆ ಮೊಟ್ಟೆಯಲ್ಲಿರುವ ಉತ್ತಮ ಮಟ್ಟದ ಕೊಬ್ಬು ಹೃದಯದ ಬಡಿತ ಹಾಗೂ ಸ್ವಾಸ್ತ್ಯಕ್ಕೆ ಒಳ್ಳೆಯದು. ಇದ್ರಿಂದ ರಕ್ತ ಪರಿಚಲನೆ ಸುಗಮವಾಗುತ್ತದೆ (egg for healthy heart).
ಇದನ್ನೂ ಓದಿ : Tea For Weight Loss: ಮನೆಯಲ್ಲಿ ಮಾಡುವ ಸಾಮಾನ್ಯ ಚಹಾದಿಂದಲೂ ತೂಕ ಇಳಿಕೆ ಸಾಧ್ಯ!
ದೃಷ್ಟಿ ದೋಷಕ್ಕೆ ಉತ್ತಮ ಆಹಾರ..!
ನಾಟಿ ಕೋಳಿ ಮೊಟ್ಟೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕಾಡುವ ದೃಷ್ಟಿ ಹೀನತೆಯ ಸಮಸ್ಯೆಗೆ ಉತ್ತಮ ಮನೆ ಮದ್ದು. ಇದರಲ್ಲಿರುವ ಲ್ಯೂಟೀನ್ ಮತ್ತು ಜಿಯಾಗ್ಯಾಂಥಿನ್ ಎಂಬ ಎರಡು ಶಕ್ತಿಯುತವಾದ ಆಂಟಿ-ಆಂಕ್ಸಿಡೆಂಟ್‌ಗಳು ನಿಮ್ಮ ಮಕ್ಕಳ ಕಣ್ಣಿನ ರೆಟೀನ ಮೇಲೆ ತಮ್ಮ ಪ್ರಭಾವ ಬೀರುತ್ತದೆ.
ಬಿಳಿ ಕೂದಲು ಕಂಡ ಕೂಡಲೇ ಕೀಳುವ ಬದಲು ಈ ಟ್ರಿಕ್ ಬಳಸಿ, ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.