Guava Leaf Benefits : ಚಳಿಗಾಲದಲ್ಲಿ ಪೇರಳೆ ಹಣ್ಣು ಹೇರಳವಾಗಿ ಸಿಗುತ್ತದೆ. ಪೇರಳೆ ಹಣ್ಣುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತರುವಾಗ, ಹಣ್ಣಿನೊಂದಿಗೆ ಎಲೆಗಳು ಕೂಡಾ ಬರುತ್ತವೆ. ಹಣ್ಣು ತಿನ್ನುವ ನಾವು ಎಲೆಗಳನ್ನು ಎಸೆದು ಬಿಡುತ್ತೇವೆ.  ಆದರೆ ಪೇರಳೆ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳು ಅಡಗಿವೆ. ಇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು, ಫೈಬರ್‌ಗಳು ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. 


COMMERCIAL BREAK
SCROLL TO CONTINUE READING

ಪೇರಳೆ ಎಲೆಗಳನ್ನು ಸೇವಿಸುವುದು ಹೇಗೆ ? : 
ಪೇರಳೆ ಎಲೆಗಳನ್ನು ಕುದಿಸಿ ಅದರ ನೀರು ಸೇವಿಸಬಹುದು. ಈ ಕುದಿಸಿದ ನೀರನ್ನು ಫಿಲ್ಟರ್ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬೇಕು. ಎಲೆಗಳನ್ನು ಒಣಗಿಸಿ ಅದರ ಪುಡಿಯನ್ನು ಕೂಡ ತಯಾರಿಸಲಾಗುತ್ತದೆ, ಇದನ್ನು  ಪಲ್ಯ ಅಥವಾ ಸಲಾಡ್ ಗಳ ಜೊತೆ ಸೇರಿಸಿ ತಿನ್ನಬಹುದು. 


ಇದನ್ನೂ ಓದಿ : Pregnancy Tips : ಗರ್ಭಾವಸ್ಥೆಯಲ್ಲಿ ಅಪ್ಪಿತಪ್ಪಿಯೂ ತಿನ್ನಬೇಡಿ ಈ ಹಣ್ಣು ಮತ್ತೆ ಈ ಎಲೆ!


ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ : 
ಪೇರಳೆ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು ರಕತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಎಲೆಗಳ ನೀರನ್ನು ಕುಡಿದರೆ ಇದರ ಪರಿಣಾಮ ದೇಹದಲ್ಲಿ ದೀರ್ಘಕಾಲ ಉಳಿಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. 


ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : 
ಪೇರಳೆ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳೂ ಇವೆ. ಈ ಎಲೆಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಕೆಲಸ ಮಾಡುತ್ತದೆ. ಅವು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ. ಇದು ಜೀವಕೋಶಕ್ಕೆ ಹಾನಿಯನ್ನುಂಟುಮಾಡುವುದಿಲ್ಲ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : Winter Tips : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಬಾದಾಮಿ..!


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : 
ಪೇರಳೆ ಎಲೆಗಳಲ್ಲಿ ವಿಟಮಿನ್ ಸಿ ಇದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಪೇರಳೆ ಎಲೆಗಳಲ್ಲಿ ಕಂಡುಬರುತ್ತವೆ. ಇದು ಶೀತದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 


ಅತಿಸಾರದಲ್ಲಿ ಪ್ರಯೋಜನಕಾರಿ :
ಪೇರಳೆ ಎಲೆಯಲ್ಲಿರುವ ಸೂಕ್ಷ್ಮಜೀವಿ ವಿರೋಧಿ ಗುಣಗಳು ಕರುಳಿನ ಸೋಂಕನ್ನು ನಿವಾರಿಸುತ್ತದೆ. ಅತಿಸಾರದಂತಹ ಸಮಸ್ಯೆಗಳಲ್ಲಿ ಈ ಎಲೆಗಳ ಸಾರವು ತುಂಬಾ ಪ್ರಯೋಜನಕಾರಿ. ಅತಿಸಾರದ ಸಂದರ್ಭದಲ್ಲಿ ಪೇರಳೆ  ಎಲೆಗಳ ಸೇವನೆಯಿಂದ ಶೀಘ್ರ ಉಪಶಮನ ದೊರೆಯುತ್ತದೆ. 


ಇದನ್ನೂ ಓದಿ : Lips Care Tips : ಚಳಿಗಾಲದಲ್ಲಿ ತುಟಿಗಳ ರಕ್ಷಣೆಗೆ ಈ ಮನೆಮದ್ದುಗಳನ್ನು ಅನುಸರಿಸಿ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.