ಹಾಲಿನಲ್ಲಿ ಈ ಪುಡಿ ಬೆರೆಸಿ ಕುಡಿಯಿರಿ: ಬಿಪಿ, ಒತ್ತಡ ನಿವಾರಣೆ ಜೊತೆ ದೇಹಕ್ಕೆ ಸಿಗುತ್ತೆ ಈ 6 ಪ್ರಯೋಜನಗಳು
Clove Milk Benefits: ಲವಂಗದ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಲು ಕುಡಿಯುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ. ಅದೇ ರೀತಿ ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿರಿಸುತ್ತದೆ.
Clove Milk Benefits: ಕೆಲವರು ಅರಿಶಿನ ಪುಡಿ, ದಾಲ್ಚಿನ್ನಿ ಪುಡಿ, ಏಲಕ್ಕಿ, ಬಾದಾಮಿ ಅಥವಾ ಕೇಸರಿ ಬೆರೆಸಿ ಹಾಲು ಕುಡಿಯುತ್ತಾರೆ. ಇವುಗಳನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ ಎಂದಾದರೂ ಲವಂಗದ ಹಾಲು ಕುಡಿದಿದ್ದೀರಾ?
ಲವಂಗದ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಲು ಕುಡಿಯುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ. ಅದೇ ರೀತಿ ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿರಿಸುತ್ತದೆ. ಇನ್ನು ಲವಂಗವು ಆರೋಗ್ಯಕರ ಮೂಲಿಕೆ. ಇದು ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ: ವಾರಕ್ಕೆ ಒಂದು ಲೋಟ ಕಬ್ಬಿನ ಜ್ಯೂಸ್… ಈ ಕಾಯಿಲೆಗಳಿಗೆ ರಾಮಬಾಣ- ದೇಹಕ್ಕಿದೆ ಅಸಂಖ್ಯಾತ ಪ್ರಯೋಜನ
ಲವಂಗದ ಹಾಲು ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳು
ಹೊಟ್ಟೆ ಹುಣ್ಣಿನಿಂದ ಮುಕ್ತಿ: wisehealthyliving.com ನಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಲವಂಗದ ಹಾಲನ್ನು ಕುಡಿಯುವುದರಿಂದ ಹೊಟ್ಟೆ ಹುಣ್ಣಿನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಬಹುದು. ಇವೆರಡರ ಸಂಯೋಜನೆಯು ಹುಣ್ಣುಗಳಿಂದ ಪರಿಹಾರವನ್ನು ನೀಡುತ್ತದೆ.
ಜೀರ್ಣಾಂಗ ವ್ಯವಸ್ಥೆ: ಲವಂಗದ ಹಾಲನ್ನು ಕುಡಿಯುವುದರಿಂದ ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಆರೋಗ್ಯಕರ ಹಾಲು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮಲಬದ್ಧತೆಯ ಸಮಸ್ಯೆ ಇದ್ದರೆ ಈ ಹಾಲನ್ನು ಸೇವಿಸಿ.
ಫಲವತ್ತತೆ: ಲವಂಗದ ಹಾಲು ಪುರುಷರಿಗೆ ತುಂಬಾ ಆರೋಗ್ಯಕರ. ಇದು ದೇಹದಲ್ಲಿನ ಹಾರ್ಮೋನ್ ಅಸಮತೋಲನವನ್ನು ಸಹ ಸರಿಪಡಿಸುತ್ತದೆ. ಆದರೆ, ಫಲವತ್ತತೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು.
ಒತ್ತಡ ಕಡಿಮೆ: ಒತ್ತಡ ಅನುಭವಿಸುತ್ತಿದ್ದರೆ, ಕೆಲವು ದಿನಗಳವರೆಗೆ ಲವಂಗ ಹಾಲನ್ನು ಕುಡಿಯಲು ಪ್ರಯತ್ನಿಸಿ. ಲವಂಗದಲ್ಲಿ ತಾಮ್ರ, ಮೆಗ್ನೀಸಿಯಮ್, ಸತು, ಕಬ್ಬಿಣದಂತಹ ಹಲವಾರು ರೀತಿಯ ಪೋಷಕಾಂಶಗಳಿವೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಪ್ರೊಟೀನ್‌ನೊಂದಿಗೆ ಈ ಎಲ್ಲಾ ಅಂಶಗಳು ಹೆಚ್ಚು ಪೌಷ್ಟಿಕವಾಗುತ್ತವೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಬಹುದು.
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡ ಹೊಂದಿರುವವರು ಲವಂಗದ ಹಾಲನ್ನು ಕುಡಿಯುವುದರಿಂದ ಸಾಮಾನ್ಯ ಸ್ಥಿತಿಯಲ್ಲಿಡಬಹುದು. ಅದರಲ್ಲೂ ಪುರುಷರು ಲವಂಗವನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ. ಈ ಎರಡೂ ವಸ್ತುಗಳಲ್ಲಿರುವ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ.
ಗಂಟಲು ನೋವು: ಗಂಟಲು ನೋವು, ಗೊರಕೆ, ಕೆಮ್ಮಿನ ಸಮಸ್ಯೆ ಇದ್ದರೆ ಲವಂಗದ ಹಾಲನ್ನು ಕುಡಿಯಬೇಕು. ಮಳೆಗಾಲದಲ್ಲಿ ಒದ್ದೆಯಾಗುವುದರಿಂದ ಹೆಚ್ಚಾಗಿ ನೆಗಡಿ, ಗಂಟಲು ಸೋಂಕು, ಕೆಮ್ಮಿನಿಂದ ಬಳಲುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಲವಂಗದೊಂದಿಗೆ ಹಾಲು ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಉಷ್ಣತೆ ಸಿಗುತ್ತದೆ ಮತ್ತು ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಅಂದಹಾಗೆ ಲವಂಗದಲ್ಲಿ ಉಷ್ಣ ಸ್ವಭಾವ ಇರುವ ಕಾರಣ, ದಿನಕ್ಕೆ ಒಂದು ಕಪ್ ಲವಂಗ ಹಾಲನ್ನು ಮಾತ್ರ ಕುಡಿಯಬೇಕು. ಹಾಲು ಅಥವಾ ಲವಂಗದಿಂದ ಅಲರ್ಜಿ ಇದ್ದರೆ ಸೇವಿಸುವುದು ಬೇಡ. ಇನ್ನು ನಿಮಗೆ ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹದಂತಹ ಯಾವುದೇ ಕಾಯಿಲೆ ಇದ್ದರೆ ತಜ್ಞರೊಂದಿಗೆ ಮಾತನಾಡಿದ ನಂತರವೇ ಸೇವಿಸುವುದು ಸುರಕ್ಷಿತ.
ಲವಂಗ ಹಾಲು ಮಾಡುವ ವಿಧಾನ: 10 ಲವಂಗವನ್ನು ಗ್ರೈಂಡರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಲವಂಗದ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈಗ ಈ ಹಾಲನ್ನು ಸೇವಿಸಿ. ಈ ಆರೋಗ್ಯಕರ ಹಾಲನ್ನು ಕುಡಿಯುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಇದನ್ನೂ ಓದಿ: ದಿನಾ ಈ ಒಣಹಣ್ಣು ತಿನ್ನಿ ಸಾಕು.. ಸಂಪೂರ್ಣ ನಾರ್ಮಲ್ ಇರುತ್ತೆ ಬ್ಲಡ್ ಶುಗರ್
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.