Healthy drinks in Summer: ಬೇಸಿಗೆಯ ಬೆಸ್ಟ್ ಆಹಾರಗಳಲ್ಲಿ ಮಜ್ಜಿಗೆ ಅಗ್ರಸ್ಥಾನದಲ್ಲಿದೆ. ಮಜ್ಜಿಗೆಯನ್ನು ಊಟದ ನಂತರ, ಊಟದ ಮೊದಲು ಮತ್ತು ಮಲಗುವ ಸಮಯದಲ್ಲಿ ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು. ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಬೇಸಿಗೆಯ ಬಿಸಿಲಿನಿಂದ ದೇಹದ ಉಷ್ಣತೆಯನ್ನು ನೈಸರ್ಗಿಕವಾಗಿ ತಂಪು ಮಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಮಜ್ಜಿಗೆ ಒಂದು ಪ್ರೋಬಯಾಟಿಕ್ ಆಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಮಜ್ಜಿಗೆಯನ್ನು ಇತರ ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಬೆರೆಸಿ ಕುಡಿಯುವುದರಿಂದ ಮತ್ತಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದು.


ಇದನ್ನೂ ಓದಿ: ‘ಮೂರನೇ ಟೆಸ್ಟ್’ನಲ್ಲಿ ಮಿಂಚಲಿದ್ದಾರೆ ಟೀಂ ಇಂಡಿಯಾದ ಈ ಆಟಗಾರ’- ಭವಿಷ್ಯ ನುಡಿದ ಅನುಭವಿ ಕ್ರಿಕೆಟಿಗ


ಇನ್ನು ಕರಿಬೇವಿನ ಎಲೆಗಳು ಎಷ್ಟು ಆರೋಗ್ಯಕರ ಎಂಬುದು ನಿಮಗೆ ತಿಳಿದೇ ಇರುತ್ತದೆ. ಕರಿಬೇವಿನ ಎಲೆಯಲ್ಲಿ ಕಾರ್ಬೋಹೈಡ್ರೇಟ್‌, ಫೈಬರ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ವಿಟಮಿನ್ ಸಿ, ಎ, ಬಿ, ಇ ಮುಂತಾದ ಅಂಶಗಳಿವೆ. ಇವು ಉತ್ತಮವಾದ ಉತ್ಕರ್ಷಣ ನಿರೋಧಕವಾಗಿದ್ದು, ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಸೋಂಕುಗಳ ವಿರುದ್ಧ ಹೋರಾಡುತ್ತದೆ


ಕೂದಲಿನ ಬೆಳವಣಿಗೆ ಮತ್ತು ಚರ್ಮದ ಆರೈಕೆಗೆ ಕರಿಬೇವು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಹೃದಯವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನೀವು ಎಂದಾದರೂ ಕರಿಬೇವು ಮಜ್ಜಿಗೆ ಕುಡಿದಿದ್ದೀರಾ? ಇದು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.


ಕರಿಬೇವಿನ ಮಜ್ಜಿಗೆ ರೆಸಿಪಿಗೆ ಬೇಕಾಗುವ ಪದಾರ್ಥಗಳು


  • 1 ಕಪ್ ಮೊಸರು

  • 2 ಕಪ್ ನೀರು

  • ಕರಿಬೇವಿನ ಎಲೆಗಳ 2 ಚಿಗುರುಗಳು

  • 1 ಹಸಿರು ಮೆಣಸಿನಕಾಯಿ

  • 1/2 ಟೀಚಮಚ ಕರಿಮೆಣಸು ಪುಡಿ

  • ರುಚಿಗೆ ಸ್ವಲ್ಪ ಉಪ್ಪು


ಕರಿಬೇವು ಮಜ್ಜಿಗೆ ತಯಾರಿಸುವ ವಿಧಾನ


ಕರಿಬೇವು ಮಜ್ಜಿಗೆ ರೆಸಿಪಿ ಮಾಡಲು ಮೊದಲು ಮೊಸರನ್ನು ನೀರಿನೊಂದಿಗೆ ಬೆರೆಸಿ ಮಜ್ಜಿಗೆ ತಯಾರಿಸಿ. ನಂತರ ಮಿಕ್ಸರ್-ಜಾರ್‌ನಲ್ಲಿ ಕರಿಬೇವು, ಹಸಿರು ಮೆಣಸಿನಕಾಯಿ, ಕರಿಮೆಣಸು ಮತ್ತು ಉಪ್ಪನ್ನು ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಈ ಕರಿಬೇವಿನ ಮಿಶ್ರಣವನ್ನು ಮಜ್ಜಿಗೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಆರೋಗ್ಯಕರ ಮತ್ತು ಟೇಸ್ಟಿ ಕರಿಬೇವು ಮಜ್ಜಿಗೆ ಸಿದ್ಧವಾಗಿದೆ.


ಇದನ್ನೂ ಓದಿ: ವಾರಕ್ಕೆ 2 ಸಲ ತೆಂಗಿನೆಣ್ಣೆ ಜೊತೆ ಈ ಬೀಜದ ಪುಡಿ ಸೇರಿಸಿ ಹಚ್ಚಿ: ತಲೆಯಲ್ಲಿ ಒಂದೇ ಒಂದು ಬಿಳಿಕೂದಲು ಸಹ ಉಳಿಯಲ್ಲ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ