Ananth Ambani Diet Plan: ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಗುರುವಾರ ರಾಧಿಕಾ ಮರ್ಚೆಂಟ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಇಬ್ಬರೂ 2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಧಿಕಾ ಅಂಬಾನಿ ಕುಟುಂಬದೊಂದಿಗೆ ಈ ಹಿಂದೆಯೂ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಅಂಬಾನಿ ಕುಟುಂಬದ ಅನೇಕ ಕಾರ್ಯಕ್ರಮಗಳಲ್ಲಿ ರಾಧಿಕ ಭಾಗವಹಿಸಿದ್ದರು.


COMMERCIAL BREAK
SCROLL TO CONTINUE READING

ಸದ್ಯ ಫೋಟೋದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಅನಂತ್ ಅಂಬಾನಿಯವರ ತೂಕ 170 ಕೆ.ಜಿ.ಗೂ ಹೆಚ್ಚು ಇತ್ತು ಎಂಬುದು ನಿಮಗೆ ತಿಳಿದಿದೆಯೇ? ಇವರ ದೇಹದ ತೂಕವನ್ನು ತಾಯಿ ನೀತಾ ಅಂಬಾನಿ ಉತ್ತಮ ಡಯೆಟ್ ಪ್ಲಾನ್ ಹೇಳಿಕೊಡುವ ಮೂಲಕ ಇಳಿಕೆ ಮಾಡಿದ್ದರು. ಅಷ್ಟೇ ಅಲ್ಲದೆ, ಸುಮಾರು 100 ಕೆಜಿಗೂ ಹೆಚ್ಚು ದೇಹದ ತೂಕವನ್ನು ಅನಂತ್ ಕಳೆದುಕೊಂಡಿದ್ದರು.


ಇದನ್ನೂ ಓದಿ: Health Tips : ಪ್ರತಿದಿನ 4 - 5 ಮೊಟ್ಟೆ ತಿಂದ್ರೆ ಈ ಗಂಭೀರ ಕಾಯಿಲೆಗೆ ಕಾರಣವಾಗಬಹುದು!


ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ ಅವರ ಮೇಲ್ವಿಚಾರಣೆಯಲ್ಲಿ ಅನಂತ್ ತಮ್ಮ ಫಿಟ್ನೆಸ್ ಜರ್ನಿ ಆರಂಭಿಸಿದ್ದರು. ಅನಂತ್ ಅಂಬಾನಿ ಅವರ ಫಿಟ್ನೆಸ್ ಟ್ರೈನಿಂಗ್ ಹೇಗಿತ್ತು ಎಂದು ತಿಳಿಯೋಣ.


ಅನಂತ್ ಅಂಬಾನಿಯವರ ದೀರ್ಘಕಾಲದ ಆಸ್ತಮಾದ ಕಾರಣ, ಅವರಿಗೆ ಹೆಚ್ಚಿನ ಡೋಸ್ ಮತ್ತು ಸ್ಟೀರಾಯ್ಡ್ಗಳನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಅವರ ತೂಕ ಸಾಕಷ್ಟು ಹೆಚ್ಚಿತ್ತು.


ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ನೀತಾ ಅಂಬಾನಿ, “ಯಾವುದೇ ಮಗು ತನ್ನ ತಾಯಿ ಮಾಡುವುದನ್ನು ಅನುಸರಿಸುತ್ತದೆ. ಹಾಗಾಗಿಯೇ ನಾನು ಮಾಡುತ್ತಿದ್ದ ಡಯೆಟ್ ನೋಡಿಕೊಂಡು ಮಗ ಅನಂತ್ ತೂಕ ಇಳಿಸಲು ಡಯಟ್ ಮಾಡತೊಡಗಿದ” ಎಂದು ಹೇಳಿದ್ದಾರೆ.


ಅನಂತ್ ಅಂಬಾನಿ ತೂಕ ಇಳಿಸಿಕೊಳ್ಳಲು ವಾಕಿಂಗ್ ಜೊತೆಗೆ ವ್ಯಾಯಾಮವನ್ನೂ ಮಾಡುತ್ತಿದ್ದರು. ಅವರು ಫಿಟ್ ಆಗಿರಲು ಪ್ರತಿನಿತ್ಯ 21 ಕಿ.ಮೀ ನಡೆಯುತ್ತಿದ್ದರು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಅವರು ತೂಕ ಇಳಿಸಿಕೊಳ್ಳಲು ನೈಸರ್ಗಿಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅನುಸರಿಸಿದ್ದರು.


ಅನಂತ್ ಅಂಬಾನಿ ತಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವುದರ ಜೊತೆಗೆ 5-6 ಗಂಟೆಗಳ ಕಾಲ ಭಾರೀ ವ್ಯಾಯಾಮವನ್ನು ಮಾಡುತ್ತಿದ್ದರು. ಅವರ ದಿನಚರಿಯು ಯೋಗ, ತೂಕ ಇಳಿಕೆ ತರಬೇತಿ, ಕ್ರಿಯಾತ್ಮಕ ತರಬೇತಿ ಎಲ್ಲವನ್ನೂ ಒಳಗೊಂಡಿತ್ತು. ಅವರು ತಮ್ಮ ಆಹಾರದಲ್ಲಿ ಸಕ್ಕರೆ ಅಂಶವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.  


ಸಂದರ್ಶನವೊಂದರಲ್ಲಿ, ಅವರ ತರಬೇತುದಾರ ವಿನೋದ್ ಚನ್ನಾ ಮಾತನಾಡಿದ್ದು, “ಅನಂತ್‌ಗಾಗಿ ಕಟ್ಟುನಿಟ್ಟಾದ ಡಯಟ್ ಚಾರ್ಟ್ ಮತ್ತು ವರ್ಕೌಟ್ ದಿನಚರಿಯನ್ನು ಸಿದ್ಧಪಡಿಸಲಾಗಿದೆ. ಅನಂತ್ ಅವರು ಲಘು ವೇಗದ ಸೈಕ್ಲಿಂಗ್ ಮತ್ತು ನಡಿಗೆಯಂತಹ ಹೆಚ್ಚಿನ ತೀವ್ರತೆಯ ವ್ಯಾಯಾಮಗಳನ್ನು ಮಾಡಿದ್ದಾರೆ. ಅವರ ಈ ವ್ಯಾಯಾಮ ಪ್ರಕ್ರಿಯೆ ಆಂಟಿಲಿಯಾದಲ್ಲಿ ತಡರಾತ್ರಿಯವರೆಗೂ ನಡೆಯುತ್ತಿತ್ತು” ಎಂದು ಹೇಳಿದ್ದಾರೆ.


ಕೋಚ್ ಪ್ರಕಾರ, ಅನಂತ್ ಅವರ ಆಹಾರದಲ್ಲಿ ಸಾಕಷ್ಟು ಮೊಳಕೆ ಕಾಳುಗಳು, ಸೂಪ್ ಮತ್ತು ಸಲಾಡ್‌ಗಳು ಸೇರಿದ್ದವು. ಜಂಕ್ ಫುಡ್ ಬದಲಿಗೆ ಪ್ರೊಟೀನ್ ಫುಡ್, ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇರಿಸಲಾಗಿದೆ.


ಇದನ್ನೂ ಓದಿ: Goat Milk Benefits : ಈ ಮಾರಕ ರೋಗಕ್ಕೆ ರಾಮಬಾಣ ಮೇಕೆ ಹಾಲು, ಪ್ರಯೋಜನ ತಿಳಿದ್ರೆ ಶಾಕ್‌ ಆಗ್ತೀರಾ!


ಅನಂತ್ ಅಂಬಾನಿಯವರ ದಿನವು ಹಸುವಿನ ಹಾಲು ಕುಡಿಯುವುದರೊಂದಿಗೆ ದಿನ ಪ್ರಾರಂಭ ಮಾಡುತ್ತಿದ್ದರು. ಹಸುವಿನ ಹಾಲಿನಲ್ಲಿ ಕಡಿಮೆ ಕೊಬ್ಬು ಕಂಡುಬರುತ್ತದೆ. ಹಸುವಿನ ತುಪ್ಪವನ್ನೂ ಅವರಿಗೆ ಆಹಾರದಲ್ಲಿ ನೀಡಲಾಗುತ್ತಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.