ಒಂದಲ್ಲ, ಎರಡಲ್ಲ... ಡೆಂಗ್ಯೂ, ಮಧುಮೇಹದಂತಹ 10 ರೋಗಗಳಿಗೆ ಈ ಬಳ್ಳಿಯ ಎಲೆಯೇ ದಿವ್ಯಔಷಧಿ: ಅರೆದು ರಸ ಕುಡಿದರೆ ಸಾಕು
Health Benefits Of Giloy: ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವಸರ್ ಪ್ರಕಾರ, ಅಮೃತಬಳ್ಳಿಯನ್ನು ಆಯುರ್ವೇದದಲ್ಲಿ ಅತ್ಯಂತ ಪ್ರಯೋಜನಕಾರಿ ಗಿಡಮೂಲಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ದೇಹದ ಅನೇಕ ರೀತಿಯ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
Health Benefits Of Giloy: ಆಯುರ್ವೇದ ಎಂದರೆ ಅತ್ಯಂತ ಹಳೆಯ ವೈದ್ಯಕೀಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದು ಅನೇಕ ರೋಗಗಳನ್ನು ಏಕಕಾಲದಲ್ಲಿ ನಿಯಂತ್ರಿಸಲು ಮತ್ತು ಗುಣಪಡಿಸಲು ಪರಿಣಾಮಕಾರಿಯಾಗುತ್ತಿತ್ತು. ಅಂತಹ ಒಂದು ಮೂಲಿಕೆ ಗಿಲೋಯ್. ಇದನ್ನು ಗುಡುಚಿ ಮತ್ತು ಅಮೃತಬಳ್ಳಿ ಎಂದೂ ಕರೆಯುತ್ತಾರೆ.
ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವಸರ್ ಪ್ರಕಾರ, ಅಮೃತಬಳ್ಳಿಯನ್ನು ಆಯುರ್ವೇದದಲ್ಲಿ ಅತ್ಯಂತ ಪ್ರಯೋಜನಕಾರಿ ಗಿಡಮೂಲಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ದೇಹದ ಅನೇಕ ರೀತಿಯ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಜ್ವರ, ಡೆಂಗ್ಯೂ, ಚಿಕೂನ್‌ಗುನ್ಯಾ, ಸಂಧಿವಾತ, ವೈರಲ್ ಜ್ವರ, ಕೆಮ್ಮು / ಶೀತ, ಸ್ವಯಂ ನಿರೋಧಕ ಕಾಯಿಲೆಗಳು, ಮಧುಮೇಹದ ಚಿಕಿತ್ಸೆಯಲ್ಲಿ ಅಮೃತಬಳ್ಳಿ ಅತ್ಯುತ್ತಮ ಪರಿಣಾಮವನ್ನು ತೋರಿಸುತ್ತದೆ. ಇದರೊಂದಿಗೆ, ಇದು ಪ್ರತಿರಕ್ಷಣಾ ಶಕ್ತಿ, ಮೆದುಳಿನ ಟಾನಿಕ್ ಮತ್ತು ಅಡಾಪ್ಟೋಜೆನಿಕ್ ಸ್ವಭಾವವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ, ಮೆಮೊರಿ ಸುಧಾರಿಸುತ್ತದೆ ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಆಯುರ್ವೇದ ವೈದ್ಯರು ಹೇಳುವ ಪ್ರಕಾರ ಅಮೃತಬಳ್ಳಿ ಉರಿಯೂತ ನಿವಾರಕ, ಆ್ಯಂಟಿ ಬಯೋಟಿಕ್, ಆ್ಯಂಟಿ ಏಜಿಂಗ್, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್, ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿ ಕ್ಯಾನ್ಸರ್ ಗುಣಗಳನ್ನು ಹೊಂದಿರುವ ನೈಸರ್ಗಿಕ ಮೂಲಿಕೆಯಾಗಿದೆ.
ತಾಜಾ ಅಮೃತಬಳ್ಳಿ ಎಲೆ ಮತ್ತು ಅದರ ಬೇರನ್ನು ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ಅವುಗಳನ್ನು ಅರೆದು, 1 ಗ್ಲಾಸ್ ನೀರಿನಲ್ಲಿ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ, ಫಿಲ್ಟರ್ ಮಾಡಿ.
ಇದನ್ನೂ ಓದಿ: ಇಯರ್ ಫೋನ್ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ?
ಇನ್ನು ತಜ್ಞರ ಪ್ರಕಾರ, ಅಮೃತಬಳ್ಳಿಯನ್ನು ಎಲ್ಲರೂ ಸೇವಿಸಬಹುದು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದರೆ ವೈದ್ಯರ ಮಾರ್ಗದರ್ಶನವಿಲ್ಲದೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸದಿರುವುದು ಉತ್ತಮ.
ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.