Anemia: ಇದನ್ನು ಸೇವಿಸಿದರೆ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ, ಆದರೆ ಸರಿಯಾದ ಕ್ರಮ ತಿಳಿದಿರಲಿ
Anemia: ಒಣ ದ್ರಾಕ್ಷಿ ಸೇವನೆಯಿಂದಲೂ ಕೊಡ ದೇಹದಲ್ಲಿನ ರಕ್ತದ ಕೊರತೆ ದೂರಾಗುತ್ತದೆ. ಇದು ಹೇಗೆ ಸಾಧ್ಯ ಎಂದು ಈಗ ನೀವು ಯೋಚಿಸುತ್ತಿರಬಹುದು. ಹಾಗಾದರೆ ಬನ್ನಿ ದೇಹದ ಆರೋಗ್ಯ ರಕ್ಷಣೆಯಲ್ಲಿ ಒಣ ದ್ರಾಕ್ಷಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Anemia: ಒಣ ದ್ರಾಕ್ಷಿಯೊಂದಿಗೆ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ. ಯಾವ ರೀತಿ ಅದನ್ನು ಸೇವಿಸಬಹುದು ಎಂಬುದನ್ನು ನೀವು ಯೋಚಿಸುತ್ತಿದ್ದರೆ, ಒಣದ್ರಾಕ್ಷಿ ಮತ್ತು ಜೇನುತುಪ್ಪಗಳು ಹಲವು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಸರಿಯಾದ ಪೋಷಣೆ ಸಿಗುವುದಲ್ಲದೆ, ಹಲವು ರೋಗಗಳು ದೂರವಾಗುತ್ತವೆ. ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಇದು ರಾಮಬಾಣ ಉಪಾಯವಾಗಿದೆ.
ಈ ರೀತಿ ಸೇವಿಸಿ
ಇವೆರಡರಲ್ಲಿಯೂ ಕೂಡ ಕ್ಯಾಲ್ಸಿಯಂ, ಕಬ್ಬಿಣದ ಜೊತೆಗೆ ಅಗತ್ಯವಾದ ಪೋಷಕಾಂಶಗಳ ಗುನಳಕ್ಷನಗಳಿವೆ ಎಂಬುದು ಇಲ್ಲಿ ಗಮನಾರ್ಹ. ಇವುಗಳ ಸೇವನೆಗಾಗಿ ಮೊದಲು 6-7 ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೆನೆಹಾಕಿ. ಮಾರನೆಯ ದಿನ ಬೆಳಗ್ಗೆ ಆ ಒಣ ದ್ರಾಕ್ಷಿಗಳಿಗೆ ಜೇನುತುಪ್ಪ ಬೆರೆಸಿ ಸೇವಿಸಿ.
ಇವೆರಡನ್ನು ತಿನ್ನುವುದರಿಂದ ಆಗುವ ಲಾಭಗಳು
>> ದೇಹದಲ್ಲಿನ ರಕ್ತದ ಕೊರತೆಯನ್ನು ಹೋಗಲಾಡಿಸುವ ಜೊತೆಗೆ, ಒಣ ದ್ರಾಕ್ಷಿ ಮತ್ತು ಜೇನುತುಪ್ಪವು ರಕ್ತದೊತ್ತಡ ನಿಯಂತ್ರಣದಲ್ಲಿ ತುಂಬಾ ಉಪಯುಕ್ತವಾಗಿದೆ. ಅಂದರೆ, ರಕ್ತದೊತ್ತಡ ನಿಯಂತ್ರಣದಲ್ಲಿಲ್ಲದ ಜನರು ಕೂಡ ಇದನ್ನು ಸೇವಿಸಬಹುದು. ನೀವು ಖಂಡಿತವಾಗಿಯೂ ಇದರಿಂದ ಪ್ರಯೋಜನ ಪಡೆಯುವಿರಿ.
>> ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ. ಪ್ರತಿದಿನ ಹೊಟ್ಟೆ ಉರಿ ಇರುವವರು ಕೂಡ ಇದನ್ನು ಸೇವಿಸಬಹುದು.
>> ರಕ್ತ ಪರಿಚಲನೆ ಸುಧಾರಿಸುವುದರ ಜೊತೆಗೆ, ಇದು ನಿಮ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಹೀಗಾಗಿ ಚರ್ಮದ ಸಮಸ್ಯೆ ಇರುವವರು ಇದನ್ನು ಖಂಡಿತವಾಗಿಯೂ ಕೂಡ ತಮ್ಮ ಆಹಾರದಲ್ಲಿ ಇದನ್ನು ಶಾಮೀಲುಗೊಳಿಸಬಹುದು.
ಇದನ್ನೂ ಓದಿ-Water Benefits : ಬೆಳಿಗ್ಗೆ ಎದ್ದ ತಕ್ಷಣ ಯಾವ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.