ಬೆಂಗಳೂರು : ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗುತ್ತಂತೆ ಹೀಗಾಗಿ ಜನರು ಕೊಂಚ ಎಚ್ಚರದಿಂದ ಇರಬೇಕು ಎಂದು ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಡಿ.ಮಂಜುನಾಥ್ ಚಳಿಗಾಲ ಹಿನ್ನೆಲೆ ಜನರಿಗೆ ಸಲಹೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿದ ಡಾ. ಡಿ.ಮಂಜುನಾಥ್, ಚಳಿಗಾಲ ಬಂದಾಗ ಪ್ರತಿಯೊಬ್ಬರೂ ಫುಲ್ ಅಲರ್ಟ್ ಆಗಿರಬೇಕು. ಹಾರ್ಟ್ ಬಗ್ಗೆ ಬಹಳಾ ಕಾಳಜಿ ವಹಿಸಿ. ಚಳಿಗಾಲಕ್ಕೂ ಹಾರ್ಟ್ ಗೂ ಏನ್ ಸಂಬಂಧ ಅಂದ್ರೆ, ಬೇಸಿಗೆ ಕಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುವುದು. ತಾಪಮಾನ ಕಡಿಮೆಯಾಗಿ ಹೃದಯದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿಡಲು ಹೃದಯವು ತುಂಬಾ ಶ್ರಮಿಸಬೇಕಾಗುತ್ತದೆ. ರಕ್ತವನ್ನು ನಿರಂತರವಾಗಿ ಪಂಪ್ ಮಾಡುವುದರಿಂದ, ರಕ್ತನಾಳಗಳು ಕುಗ್ಗುತ್ತವೆ, ಇದರಿಂದಾಗಿ ಹೃದಯವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಎಂದರು.


[[{"fid":"272164","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : ಈ ಆಹಾರಗಳನ್ನು ಸೇವಿಸಿದರೆ ಹೆಚ್ಚಾಗುವುದು ಕಿಡ್ನಿ ಸ್ಟೋನ್ ಅಪಾಯ


ಚಳಿಗಾಲದಲ್ಲಿ ವಿಪರೀತ ಚಳಿಗೆ ಜನರು ಕಡಿಮೆ ಕೆಲಸ ಮಾಡುತ್ತಾರೆ. ಶೀತ ವಾತಾವರಣದಲ್ಲಿ ಪಾರ್ಶ್ವವಾಯು, ಹೃದಯ ವೈಫಲ್ಯ, ಹೃದಯರಕ್ತನಾಳದ ಸಮಸ್ಯೆಗಳು, ಮುಂತಾದ ಅಸ್ವಸ್ಥತೆಗಳು ಹೆಚ್ಚಾಗುತ್ತವೆ. ಚಳಿಗಾಲದಲ್ಲಿ ದೇಹದ ನರಮಂಡಲದ ಕ್ರಿಯಾಶೀಲತೆ ಹೆಚ್ಚುತ್ತದೆ.‌ ರಕ್ತನಾಳಗಳು ಕುಗ್ಗುತ್ತವೆ. ಇದನ್ನು 'ವ್ಯಾಸೊಕಾನ್ಸ್ಟ್ರಿಕ್ಷನ್' ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ರಕ್ತದೊತ್ತಡದ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಮತ್ತು ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲ ಸರೋಗ್ಯ ಸಲಹೆಗಳನ್ನು ನೀಡಿದ್ದಾರೆ. 


ಚಳಿಗಾಲದಲ್ಲಿ ಹೃದಯದ ಕಾಳಜಿ ಹೀಗಿರಬೇಕು..?


1. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಬೇಕು ಇದು ಹೃದಯದ ಆರೋಗ್ಯ ಕಾಪಾಡಲು ಉತ್ತಮ ಮಾರ್ಗ


2. ನಿಮ್ಮ ದೈಹಿಕ ಚಟುವಟಿಕೆಯು ತುಂಬಾ ಹೆಚ್ಚಿದ್ದರೆ, ಮಧ್ಯದಲ್ಲಿ ವಿರಾಮಗಳನ್ನು ತೆಗೆದುಕೊಳ್ಳಿ.


3. ಸಾಕಷ್ಟು ನೀರು ಕುಡಿಯಿರಿ, ಇದರಿಂದ ದೇಹವು ಹೈಡ್ರೇಟೆಡ್ ಆಗಿರುತ್ತದೆ. ನಿರ್ಜಲೀಕರಣವು ಹೃದಯ ಬಡಿತವನ್ನು ಹೆಚ್ಚಿಸುತ್ತದೆ.


4. ಹೃದಯಾಘಾತದ ಲಕ್ಷಣಗಳ ಮೇಲೆ ನಿಗಾ ಇರಿಸಿ ಮತ್ತು ಕಾಲಕಾಲಕ್ಕೆ ಹೃದಯದ ಆರೋಗ್ಯವನ್ನು ಪರೀಕ್ಷಿಸುತ್ತಿರಬೇಕು.


ಇದನ್ನೂ ಓದಿ : 5 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದರಿಂದ ಸಾವು ಬರಬಹುದು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.